ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್ ಶುಭ ಕೋರುತ್ತಾ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಮುಕ್ತಗೊಳಿಸಿದ ಪಾಕ್

|
Google Oneindia Kannada News

ನವದೆಹಲಿ, ಜೂನ್ 6: ಸುಮಾರು ಎರಡು ತಿಂಗಳ ನಂತರ, ಪಾಕಿಸ್ತಾನ, ತನ್ನ ವಾಯು ಪ್ರದೇಶ ಪ್ರವೇಶಿಸದಂತೆ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂದಕ್ಕೆ ಪಡೆದುಕೊಂಡಿದೆ.

ಬಾಲಾಕೋಟ್ ಉಗ್ರರ ನೆಲೆಯ ಮೇಲೆ, ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನ ತಮ್ಮತಮ್ಮ ವಾಯು ಪ್ರದೇಶವನ್ನು ಮುಚ್ಚಿದ್ದವು. ರಂಜಾನ್ ದಿನಕ್ಕೆ ಎರಡು ದಿನ ಮುನ್ನ ಪಾಕ್, ಭಾರತದ ವಿಮಾನ ಸಂಚಾರಕ್ಕೆ ತನ್ನ ವಾಯು ಪ್ರದೇಶವನ್ನು ತೆರೆದಿದೆ.

ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ

ದುಬೈ - ನವದೆಹಲಿ ಇಂಡಿಗೋ ವಿಮಾನವು, ಮಂಗಳವಾರ ತಡರಾತ್ರಿ (ಜೂ 4) ಪಾಕಿಸ್ತಾನದ ಟೆಲ್ಲೆಮ್ ವಾಯು ಪ್ರದೇಶದ ಮೂಲಕ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

Pakistan opens their Air Space for Indian flights, wished Eid Mubarak

ಇಂಡಿಗೋ ಕಚೇರಿಗೆ ಕರೆ ಮಾಡಿದ ಪಾಕ್ ನಾಗರಿಕ ವಿಮಾನಯಾನ ಸಚಿವಾಲಯ, 'ನಿಮ್ಮ ವಿಮಾನ, ಟೆಲ್ಲೆಮ್ ವಾಯುಮಾರ್ಗವಾಗಿ ಬರುವುದನ್ನು ನೋಡಿದೆವು, ನಿಮಗೆ ಈದ್ ಹಬ್ಬದ ಶುಭಾಶಯಗಳು' ಎಂದು ಶುಭ ಕೋರಿದೆ.

ಭಾರತ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಬಾರದಂತೆ ಅತಿಥಿಗಳ ತಡೆದ ಪಾಕಿಸ್ತಾನಿ ಅಧಿಕಾರಿಗಳು ಭಾರತ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಬಾರದಂತೆ ಅತಿಥಿಗಳ ತಡೆದ ಪಾಕಿಸ್ತಾನಿ ಅಧಿಕಾರಿಗಳು

ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಟೆಲ್ಲೆಮ್ ಮಾರ್ಗವಾಗಿ ಸಂಚರಿಸಿದರೆ, ಎಲ್ಲಾ ಗಮ್ಯಸ್ಥಳವನ್ನು ನಿರ್ದಿಷ್ಟ ಸಮಯಕ್ಕಿಂತ ಇಪ್ಪತ್ತು ನಿಮಿಷ ಬೇಗ ತಲುಪಬಹುದಾಗಿದೆ, ಹಾಗೆಯೇ ಇಂಧನವೂ ಉಳಿತಾಯವಾಗಲಿದೆ ಎಂದು ಇಂಡಿಗೋ ಅಧಿಕಾರಿಗಳು ಹೇಳಿದ್ದಾರೆ.

ಎರಡು ದೇಶಗಳು ತಮ್ಮತಮ್ಮ ವಾಯು ಪ್ರದೇಶವನ್ನು ನಿರ್ಬಂಧಿಸಿದ್ದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿತ್ತು.

English summary
After months of keeping its airspace shut and incurring losses worth hundreds of crores, Pakistan withdrawn its airspace ban to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X