ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ವಶದಲ್ಲಿ ಭಾರತದ 78,000 ಚ.ಕಿ.ಮೀ.ಭೂಮಿ

By Mahesh
|
Google Oneindia Kannada News

ನವದೆಹಲಿ, ಡಿ.3: 1948ರಿಂದ ಜಮ್ಮು- ಕಾಶ್ಮೀರದಲ್ಲಿ ಪಾಕಿಸ್ತಾನವು ಸುಮಾರು 78,000 ಚ.ಕಿ.ಮೀ. ಭಾರತೀಯ ಭೂಪ್ರದೇಶವನ್ನು ಕಾನೂನು ಬಾಹಿರವಾಗಿ ಹಾಗೂ ಬಲಾತ್ಕಾರವಾಗಿ ಅತಿಕ್ರಮಿಸಿದೆ ಎಂದು ಲೋಕಸಭೆಯಲ್ಲಿ ರಾಜ್ಯ ಸಚಿವ ಕಿರೇನ್ ರಿಜಿಜು ಮಾಹಿತಿ ನೀಡಿದ್ದಾರೆ.

1963ರ ಚೀನ-ಪಾಕಿಸ್ತಾನ ಗಡಿ ಒಪ್ಪಂದದ ವೇಳೆ ಪಾಕಿಸ್ತಾನವು ಆಕ್ರಮಿತ ಕಾಶ್ಮೀರದ 5,180 ಚ.ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಕ್ಕೆ ಒಪ್ಪಿಸಿದೆಯೆಂದು ಗೃಹ ರಾಜ್ಯ ಸಚಿವ ಕಿರೇನ್ ರಿಜಜು ತಿಳಿಸಿದರು.

ಭಾರತ-ಚೀನಾ ಗಡಿಗೆ ಸಂಬಂಧಿಸಿ, ಉಭಯ ದೇಶಗಳ ನಡುವೆ ಸಾಮಾನ್ಯ ವಿಂಗಡನೆಯ ವಾಸ್ತವ ನಿಯಂತ್ರಣ ರೇಖೆಯಿಲ್ಲ ಎಂದು ಸದನಕ್ಕೆ ವಿವರಿಸಿದರು.

Pakistan is in illegal occupation of 78,000 sq. km of Indian land

ವಾಸ್ತವ ನಿಯಂತ್ರಣ ರೇಖೆಯ ಕುರಿತಾದ ತಿಳುವಳಿಕೆಯಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಆಗಾಗ, ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ನಿಯಂತ್ರಣ ರೇಖೆಯ ಬಗ್ಗೆ ಸಮಾನ ತಿಳುವಳಿಕೆಗೆ ಬಂದಲ್ಲಿ ಅಂಥ ಪರಿಸ್ಥಿತಿಯನ್ನು ತಪ್ಪಿಸಬಹುದು.

ಬಾಂಗ್ಲಾದೇಶ, ಮ್ಯಾನ್ಮಾರ್ ಹಾಗೂ ಭೂತಾನ್‌ಗಳು ಯಾವುದೇ ಭಾರತೀಯ ಭೂಪ್ರದೇಶವನ್ನು ಕಾನೂನುಬಾಹಿರವಾಗಿ ಅತಿಕ್ರಮಿಸಿಲ್ಲ. ಆದಾಗ್ಯೂ ಭಾರತ-ಬಾಂಗ್ಲಾದೇಶ ಗಡಿಗೆ ಸಂಬಂಧಿಸಿ, ಒಂದು ದೇಶದ ಭೂಭಾಗವು ಇನ್ನೊಂದು ದೇಶದ ಜನರ ಸ್ವಾಧೀನವಿರುವ ಕೆಲವು ಪ್ರದೇಶಗಳಿವೆ. ಪಾರಂಪರಿಕವಾದ ಈ ಪ್ರದೇಶಗಳನ್ನು 'ವಿರೋಧ ಅಧಿಭೋಗಗಳು' ಎಂದು ಕರೆಯಲಾಗುತ್ತಿದೆ ಎಂದು ರಿಜಿಜು ಹೇಳಿದರು.

ಭಾರತದ ಭದ್ರತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳುವ ಪಣವನ್ನು ಭಾರತ ತೊಟ್ಟಿದ್ದು, ಸತತ ಜಾಗ್ರತೆ ವಹಿಸುತ್ತಿದೆ.

ಭಾರತ-ಚೀನಾ ಗಡಿಗೆ ಸಂಬಂಧಿಸಿ, ನಿಯಂತ್ರಣ ರೇಖೆಯಲ್ಲಿ ಚೀನಾ ನಡೆಸುವ ಯಾವುದೇ ಉಲ್ಲಂಘನೆಯ ಬಗ್ಗೆ ಗಡಿ ಯೋಧರ ಸಭೆ, ಧ್ವಜಸಭೆ, ಚೀನಾ-ಭಾರತ ಗಡಿ ವ್ಯವಹಾರದ ಚರ್ಚೆ ಹಾಗೂ ಸಮನ್ವಯದ ಕಾರ್ಯಕಾರಿ ವ್ಯವಸ್ಥೆಯ ಸಭೆ ಗಳಲ್ಲಿ ಸರ್ಕಾರ ಪ್ರಸ್ತಾಪಿಸುತ್ತಾ ಬಂದಿದೆ ಎಂದು ತಿಳಿಸಿದರು.(ಪಿಟಿಐ)

English summary
Pakistan illegally ceded 5,180 sq. kms of Indian territory in Pakistan occupied Kashmir to China, says minister of state for home Kiren Rijiju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X