ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರ ಮಾರ್ಗ ಮೂಲಕವೂ ಭಯೋತ್ಪಾದನೆಗೆ ಪಾಕ್ ತರಬೇತಿ: ಸುನಿಲ್ ಲಾಂಬಾ

|
Google Oneindia Kannada News

ನವದೆಹಲಿ, ಮಾರ್ಚ್ 5: ಪಾಕಿಸ್ತಾನವು ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಮಾಡುತ್ತಿಲ್ಲ, ಗುಪ್ತಚರ ದಳದ ಮಾಹಿತಿ ಪ್ರಕಾರ ಸಮುದ್ರ ಮಾರ್ಗದ ಮೂಲಕವೂ ಭಯೋತ್ಪಾದಕ ದಾಳಿಯನ್ನು ನಡೆಸಲು ಉಗ್ರರಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಹೀಗಾಗಿ ನೌಕಾ ಸೇನೆಯು ಭಾರಿ ಎಚ್ಚರಿಕೆಯನ್ನು ವಹಿಸಿದ್ದು, ಯಾವುದೇ ದಾಳಿಯನ್ನು ಎದುರಿಸಲು ಅಥವಾ ಪ್ರತ್ಯುತ್ತರವನ್ನು ನೀಡಲು ಸಿದ್ಧವಾಗಿದೆ ಎಂದು ನೌಕಾ ಸೇನೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ತಿಳಿಸಿದ್ದಾರೆ.

Pakistan is giving training to terrorist to attack via Navy route too

ಪಾಕಿಸ್ತಾನಿ ಉಗ್ರರ ಈ ರೀತಿಯ ಬೆದರಿಕೆ ಅಥವಾ ಇಂತಹ ಭಯೋತ್ಪಾದನಾ ಕೃತ್ಯಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ.

'ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದರೆ ವಿಮಾನದಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು''ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದರೆ ವಿಮಾನದಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು'

ಇಂಡೋ ಫೆಸಿಫಿಕ್ ವಲಯದ ಸಾಕಷ್ಟು ರಾಷ್ಟ್ರಗಳ ಮೇಲೆ ಈ ಕರಿ ನೆರಳು ಆವರಿಸಿಕೊಂಡಿದೆ. ಹಾಗೆಯೇ ಜಾಗತಿಕವಾಗಿಯೂ ಕೆಲವು ರಾಷ್ಟ್ರಗಳಲ್ಲಿ ಈ ಉಗ್ರವಾದದ ಬೇರೆ ಬೇರೆ ವಿಧಗಳು ಕಾಣಿಸುತ್ತಿವೆ.

ಈ ಕಾರಣದಿಂದ ಭಾರತದ ಜೊತೆಗೆ ಉಗ್ರವಾದ ನಿಯಂತ್ರಣ ಹೋರಾಟದಲ್ಲಿ ಜೊತೆಗೆ ನಿಲ್ಲಬೇಕಿದೆ.

ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ಇನ್ನೂ ನಮ್ಮ ಕಣ್ಣಮುಂದಿದೆ, 40ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಳ್ಳಬೇಕಾಯಿತು.

'ಅಭಿನಂದನ್ ದೈಹಿಕ ಕ್ಷಮತೆ ಆಧಾರದಲ್ಲಿ ವೃತ್ತಿಗೆ ವಾಪಸ್''ಅಭಿನಂದನ್ ದೈಹಿಕ ಕ್ಷಮತೆ ಆಧಾರದಲ್ಲಿ ವೃತ್ತಿಗೆ ವಾಪಸ್'

ಅದಾದ ಬಳಿಕ ಭಾರತೀಯ ಸೇನೆ ಏರ್‌ಸ್ಟ್ರೈಕ್ ಮಾಡಿ ಜೈಷ್ ಅಡಗುತಾಣಗಳ ಮೇಲೆ ದಾಳಿ ಮಾಡಿ ಪ್ತತ್ಯುತ್ತರ ನೀಡಿತ್ತು.

ಇದೀಗ ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಆಕ್ರಮಣಕ್ಕೆ ಯತ್ನಿಸುತ್ತಿದ್ದು ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಸುನಿಲ್ ಲಾಂಬಾ ತಿಳಿಸಿದ್ದಾರೆ.

ಬಾಲಕೋಟ್‌ನ ದಾಳಿ ಬಳಿಕ ಕರಾಚಿ ಮೂಲಕ ದಾಳಿ ನಡೆಸುತ್ತದೆ ಎನ್ನುವ ಊಹಾಪೋಹವಿತ್ತು ಆದರೆ ಭಾರತ ನಿರಾಕರಿಸಿತ್ತು.

English summary
We also have reports of terrorists being trained to carry out operations in various modus operandi including through the medium of the sea says Naval chief Sunil Lanba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X