ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಯೋತ್ಪಾದನೆಗೆ ಬಂಡವಾಳ' ನೀಡುವ ದೇಶಗಳ ಪಟ್ಟಿಯಲ್ಲಿ ಪಾಕ್

|
Google Oneindia Kannada News

ನವದೆಹಲಿ, ಫೆಬ್ರವರಿ 22: ಎಫ್‌ಎಟಿಎಫ್ ತಯಾರಿಸಿರುವ ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರು ಮುಂದುವರೆಯಲಿದೆ.

ಯಾವ ದೇಶಗಳು ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುತ್ತವೆಯೋ ಅಂತಹುಗಳ ಮೇಲೆ ಎಫ್‌ಎಟಿಎಫ್‌ ಸಂಸ್ಥೆ ಕಣ್ಣಿಟ್ಟು, 'ಗ್ರೇ ಪಟ್ಟಿ'ಯನ್ನು ತಯಾರಿಸುತ್ತದೆ. ಹಿಂದೊಮ್ಮೆ ಈ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆದುಹಾಕಲಾಗಿತ್ತು. ನಂತರ ಅದು ಕಳೆದ ಜೂನ್‌ನಲ್ಲಿ ಸೇರ್ಪಡೆ ಆಗಿತ್ತು.

ಪುಲ್ವಾಮಾ ದಾಳಿ ಬಳಿಕ ಭಾರತವು ಪಾಕಿಸ್ತಾನವನ್ನು ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರವೆಂದು ಹಳಿದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಪಾಕ್ ಅನ್ನು ಭಯೋತ್ಪಾದನೆ ಬೆಂಬಲಿತ ರಾಷ್ಟ್ರವೆಂದು ಬಿಂಬಿಸಲು ಬಹುತೇಕ ಸಫಲವಾಗಿದೆ. ಇದೇ ಸಮಯದಲ್ಲಿ ಭಾರತವು ಎಫ್‌ಎಟಿಎಫ್‌ ಮೇಲೂ ಒತ್ತಡ ಹೇರಿ ಪಾಕ್ ಅನ್ನು 'ಗ್ರೇ ಪಟ್ಟಿ'ಯಿಂದ ತೆಗೆಯದಂತೆ ಮನವಿ ಮಾಡಿತ್ತು.

Pakistan in list of FATF terror funding nations

ಎಫ್‌ಎಟಿಎಫ್ 'ಗ್ರೇ ಪಟ್ಟಿ'ಯಲ್ಲಿ ಪಾಕಿಸ್ತಾನದ ಹೆಸರು ಸೇರ್ಪಡೆ ಆಗಿರುವದರಿಂದ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಬ್ಯಾಂಕ್‌ನಲ್ಲಿ ಸಾಲ ದೊರೆಯುವುದಿಲ್ಲ, ಈಗಾಗಲೇ ಆರ್ಥಿಕವಾಗಿ ಬಾರಿ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಇದು ಭಾರಿ ದೊಡ್ಡ ಹೊಡೆತವಾಗಿದೆ.

ಪುಲ್ವಾಮಾ ದಾಳಿಯ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿ ಜೈಶೆ ಉಗ್ರರು ಮತ್ತು ಪಾಕಿಸ್ತಾನಕ್ಕೆ ಇರುವ ಸಂಬಂಧದ ಬಗ್ಗೆ ಭಾರತದ ಗುಪ್ತಚರ ಇಲಾಖೆಯು ಎಫ್‌ಎಟಿಎಫ್‌ಗೆ ಕಳುಹಿಸಿತ್ತು.

English summary
Pakistan is in list of FATF's terror funding nations list. This will be most big blow to Pakistan economy . Foriegn banks will not give any loan to Pakistan for this reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X