ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಏಷ್ಯಾದಲ್ಲೇ ಅತಿ ಎತ್ತರದಲ್ಲಿ ಧ್ವಜ ಹಾರಿಸಿದ ಪಾಕ್

By Srinivasa Mata
|
Google Oneindia Kannada News

ನವದೆಹಲಿ, ಆಗಸ್ಟ್ 14 : ಪಾಕಿಸ್ತಾನದ ಎಪ್ಪತ್ತನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ದಕ್ಷಿಣ ಏಷ್ಯಾದಲ್ಲೇ ಅತಿ ಎತ್ತರದಲ್ಲಿ ಆ ದೇಶದ ಬಾವುಟವನ್ನು ಸೋಮವಾರ ಹಾರಿಸಿದೆ. ಬಾವುಟವು 120X180 ಅಡಿ ಇದ್ದು, ಅದನು ನಾನೂರು ಅಡಿ ಎತ್ತರದ ಕಂಬದ ಮೇಲೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ವಾಘಾ-ಅಟ್ಟಾರಿ ಗಡಿಯಲ್ಲಿ ಹಾರಿಸಿದರು.

ಚೆನ್ನೈನಲ್ಲಿ 1947ರಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಕಾಣಿರಿಚೆನ್ನೈನಲ್ಲಿ 1947ರಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಕಾಣಿರಿ

ಕಳೆದ ವರ್ಷ ಭಾರತವು 360 ಅಡಿ ಎತ್ತರದಲ್ಲಿ ತನ್ನ ರಾಷ್ಟ್ರಧ್ವಜವನ್ನು ಹಾರಿಸಿದ ಮೇಲೆ, ಪಾಕ್ ಈ ಯೋಜನೆ ಮಾಡಿಕೊಂಡಿತ್ತು. ಪ್ರಬಲವಾದ ಗಾಳಿ ಬೀಸಿದ್ದರಿಂದ ಭಾರತದ ಧ್ವಜವು ಕನಿಷ್ಠ ನಾಲ್ಕು ಬಾರಿ ಹರಿದಿತ್ತು. ಆದರೆ ಇದೀಗ ಪಾಕ್ ಈ ರೀತಿ ಧ್ವಜ ಹಾರಿಸಿದ ಮೇಲೆ ಮತ್ತೆ ಭಾರತ ರಾಷ್ಟ್ರಧ್ವಜವನ್ನು ಹಾರಿಸಲು ಯೋಜನೆ ರೂಪಿಸಲಾಗುತ್ತಿದೆ.

Pakistan hoists flag taller than the India's on Wagah border

ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಮಾತನಾಡಿ, ಪಾಕಿಸ್ತಾನದ ಧವಜವು ಗೌರವದ ಸಂಕೇತ. ವಾಘಾ ಗಡಿಯಲ್ಲಿ ಇಂಥ ಸುಂದರ ಕಾರ್ಯಕ್ರಮ ಆಯೋಜಿಸಿದ ರೇಂಜರ್ಸ್ ಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಆದರೂ ಧ್ವಜಕ್ಕೆ ಜೋರಾದ ಗಾಳಿಯ ಆತಂಕ ಇದ್ದೇ ಇದೆ. ಕಳೆದ ವರ್ಷದಿಂದ ಈಚೆಗೆ ಭಾರತ ನಾಲ್ಕು ಬಾರಿ ಧ್ವಜವನ್ನು ಬದಲಾಯಿಸಿದೆ.

ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಶಾ ಮೈದಾನಕ್ಕೆ ತೆರಳುವವರಿಗೆ ಮಾರ್ಗಸೂಚಿಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಶಾ ಮೈದಾನಕ್ಕೆ ತೆರಳುವವರಿಗೆ ಮಾರ್ಗಸೂಚಿ

ಈ ವರ್ಷದ ಮಾರ್ಚ್ ನಿಂದ ಈಚೆಗೆ ಹಣಕಾಸಿನ ಕೊರತೆ ಕಾರಣಕ್ಕೆ ಬಾವುಟ ಹಾರಿಸಿಲ್ಲ. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜ ಹಾರಿಸಲು ಭಾರತೀಯ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ವಾಘಾ ಗಡಿಯಲ್ಲಿ ಸಂಜೆ ವೇಳೆ ನಡೆಯುವ ಕಾರ್ಯಕ್ರಮ ಎರಡು ದೇಶದ ಪ್ರಜೆಗಳಿಗೆ ಮೆಚ್ಚುಗೆಯಾಗುವಂಥದ್ದು. ಎರಡು ಕಡೆಯ ಸೇನೆ ಯೋಧರು ವೀರಾವೇಶದಿಂದ ತಮ್ಮ ತಮ್ಮ ರಾಷ್ಟ್ರ ಧ್ವಜವನ್ನು ಹಾರಿಸುತ್ತಾರೆ. ನೆಲದ ಮೇಲೆ ಕಾಲು ಕುಟ್ಟುತ್ತಾ ಸೈನಿಕರು ಜೋರು ಧ್ವನಿಯಲ್ಲಿ ಘೋಷಣೆ ಕೂಗಿ ಬಾವುಟ ಹಾರಿಸುವ ಕ್ಷಣ ಎದೆ ಝಲ್ ಎನಿಸುತ್ತದೆ.

English summary
On August 14, 2017, Pakistan on its 70th Independence Day hoisted what it claimed the tallest flag in South Asia. The flag which is 120 by 180 feet was installed on a 400 feet pole was hoisted by Pakistan Army Chief on Wagah-Attari border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X