ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಕಿಗಳಿಂದ ದೆಹಲಿ ವಿವಿ, ಐಐಟಿ ವೆಬ್ಸೈಟ್ ಹ್ಯಾಕ್
ನವದೆಹಲಿ, ಏಪ್ರಿಲ್ 25 : ಪಾಕಿಸ್ತಾನದ ಗುಂಪೊಂದು ದೆಹಲಿಯ ಐಐಟಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದೆ.
ಕಾಶ್ಮೀರದಲ್ಲಿ ನಡೆದ ಗಲಭೆಗಳ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಭಾರತೀಯ ಸೈನಿಕರು ಕಾಶ್ಮೀರದಲ್ಲಿ ನಡೆಸಿರುವ ದೌರ್ಜನ್ಯಗಳನ್ನು ಅಪ್ ಲೋಡ್ ಮಾಡಿದ್ದಾರೆ.
ಪಾಕಿಸ್ತಾನದ ಹ್ಯಾಕ್ಸೋರ್ ಕ್ರ್ಯೂ ಪಿಎಚ್ಸಿ ಗುಂಪು ಹ್ಯಾಕ್ ಮಾಡಿರುವ ಹೊಣೆ ಹೊತ್ತಿದೆ. ತಮ್ಮ ಫೇಸ್ ಬುಕ್ನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ದೆಹಲಿ ವಿವಿ ಮತ್ತು ದೆಹಲಿ ಐಐಟಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಕೂಡ ಮಾಡಿದೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ವಾರಾಣಸಿಯ ಐಐಟಿ ಸೇರಿದಂತೆ ಅನೇಕ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.
Comments
English summary
The websites of Delhi University and IIT Delhi were hacked allegedly by a Pakistani hackers group on Tuesday afternoon. The hackers smeared the websites with posters of the alleged the “brutalities” by the ‘Indian forces’ in Kashmir.
Story first published: Tuesday, April 25, 2017, 19:43 [IST]