ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲೆ ಪಾಕ್ ಬಾಲಕೋಟ್ ಮಾದರಿ ದಾಳಿ ಮಾಡಲು ಯತ್ನಿಸಿತ್ತು: ಆದರೆ...

|
Google Oneindia Kannada News

ನವದೆಹಲಿ, ಮಾರ್ಚ್ 27: ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ನೆಲೆಯ ಮೇಲೆ ಭಾರತೀಯ ವಾಯು ಸೇನೆ ವೈಮಾನಿಕ ದಾಳಿ ನಡೆಸಿದ್ದ ಮರು ದಿನವೇ ಪಾಕಿಸ್ತಾನದ ಪಡೆಗಳು ಭಾರತದ ಸೇನಾ ನೆಲೆಗಳ ಮೇಲೆ ಅದೇ ಮಾದರಿಯ ದಾಳಿ ನಡೆಸಲು ಪ್ರಯತ್ನಿಸಿದ್ದವು. ಆದರೆ, ಅದು ವಿಫಲವಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಫೆಬ್ರವರಿ 27ರಂದು ಅಮೆರಿಕದ ಎಫ್ 16, ಫ್ರಾನ್ಸ್‌ನ ಮಿರಾಜ್-IIIs ಮತ್ತು ಚೀನಾದ ಜೆಎಫ್-17 ಸೇರಿದಂತೆ 20ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ವಾಯುಪಡೆಯು ಭಾರತದ ಮೇಲೆ ದಾಳಿಗೆ ಮುಂದಾಗಿತ್ತು. ಪಾಕ್‌ನ ನೆಲೆ 50 ಕಿ.ಮೀ. ಒಳಗಿನಿಂದ ಭಾರತದ ಮೂರು ಸೇನಾ ನೆಲೆಗಳ ಮೇಲೆ ಸುಮಾರು 1,000 ಕೆ.ಜಿ. ಎಚ್‌-4 ಬಾಂಬ್‌ಗಳನ್ನು ಸಿಡಿಸಿತ್ತು. ಆದರೆ, ಒಂದೂ ಬಾಂಬ್ ಗುರಿ ತಲುಪಿರಲಿಲ್ಲ.

ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್ ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್

ಮಿರಾಜ್-IIIನಿಂದ ಎಚ್‌-4 ಬಾಂಬುಗಳನ್ನು ಸಿಡಿಸಲಾಗಿತ್ತು. ಎಚ್‌-4ಗಳು ಅಷ್ಟೇನೂ ನಿಖರವಲ್ಲ. ಹಾಗಾಗಿ ಅವು ಗುರಿ ತಪ್ಪಿದ್ದವು. ಜಮ್ಮು ಮತ್ತು ಕಾಶ್ಮೀರದ ಸೇನಾ ನೆಲೆಯನ್ನು ಗುರಿಯಾಗಿಟ್ಟುಕೊಂಡು ನಡೆದ ಒಂದು ದಾಳಿಯಲ್ಲಿ ಎತ್ತರದ ಹಾಗೂ ದಪ್ಪನೆಯ ಮರಕ್ಕೆ ತೀವ್ರ ಹಾನಿಯಾಗಿತ್ತು.

Pakistan failed to do a Balakot-type strike on Indian military base

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಪೂಂಚ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಂಬ್‌ಗಳು ಬಿದ್ದಿವೆ. ಈ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತದ ವಾಯು ಸೇನೆ ತ್ವರಿತ ಪ್ರತಿಕ್ರಿಯೆ ನೀಡಿದಾಗ ಬೆದರಿದ ಪಾಕ್ ವಿಮಾನಗಳು ಗುರಿ ತಪ್ಪಿ ಬಾಮಬ್ ಉಡಾವಣೆ ಮಾಡಿದ್ದವು.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಈ ಸಂದರ್ಭದಲ್ಲಿಯೇ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಭಾರತದ ಯುದ್ಧವಿಮಾನಗಳು ಹೊಡೆದುರುಳಿಸಿದ್ದವು. ಮಿಗ್ 21 ಯುದ್ಧ ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಆರ್-73 ವಾಯುವಿನಿಂದ ವಾಯು ಕ್ಷಿಪಣಿ ಬಳಸಿ ಪಾಕ್ ವಿಮಾನವನ್ನು ಉರುಳಿಸಿದ್ದರು.

English summary
A day after IAF carried out aerial strikes on terrorist camp in Balakot, the Pakistan Air Force tried to carry out a similar attack against Indian military targets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X