ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ

|
Google Oneindia Kannada News

Recommended Video

Pulwama : ಭಾರತದಿಂದ ಪಾಕಿಸ್ತಾನ ರಾಯಭಾರಿ ವಾಪಸ್ | Oneindia Kannada

ನವದೆಹಲಿ, ಫೆಬ್ರವರಿ 18 : ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಭಾರತದಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಪುಲ್ವಮಾ ದಾಳಿ ಬಳಿಕ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ.

ಸೋಮವಾರ ಬೆಳಗ್ಗೆ ನವದೆಹಲಿಯಿಂದ ಪಾಕಿಸ್ತಾನ ರಾಯಭಾರಿ ಸೊಹೈಲ್ ಮೊಹಮದ್ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಪಾಕಿಸ್ತಾನದ ಈ ನಡೆಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ.

ಪುಲ್ವಾಮಾದಲ್ಲಿ ಗುಂಡಿನ ಚಕಮಕಿ: ನಾಲ್ವರು ಯೋಧರು ಹುತಾತ್ಮಪುಲ್ವಾಮಾದಲ್ಲಿ ಗುಂಡಿನ ಚಕಮಕಿ: ನಾಲ್ವರು ಯೋಧರು ಹುತಾತ್ಮ

ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ಡಾ.ಮೊಹಮದ್ ಫೈಸಲ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದ್ದೇವೆ. ಇಂದು ಬೆಳಗ್ಗೆ ದೆಹಲಿಯಿಂದ ಅವರು ಹೊರಟಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ

ಫೆ.14ರಂದು ಪುಲ್ವಾಮದ ಅವಂತಿಪುರ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿದೆ. ರಾಜತಾಂತ್ರಿಕವಾಗಿ ಪಾಕ್‌ ಜೊತೆಗಿನ ಎಲ್ಲಾ ಮಾತುಕತೆಗಳನ್ನು ಭಾರತ ಸ್ಥಗಿತಗೊಳಿಸಿದೆ. ಸೋಮವಾರ ಭಾರತದಿಂದ ರಾಯಭಾರಿ ವಾಪಸ್ ಕರೆಸಿಕೊಳ್ಳುವ ಮೂಲಕ ಪಾಕಿಸ್ತಾನ ಯಾವ ಸಂದೇಶ ನೀಡಲು ಹೊರಟಿದೆ? ಎಂಬುದು ಖಚಿತವಾಗಿಲ್ಲ...

ತಿರುಗೇಟು ನೀಡಿದ್ದ ಭಾರತ

ತಿರುಗೇಟು ನೀಡಿದ್ದ ಭಾರತ

ಫೆ.14ರ ದಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ದಾಖಲು ಮಾಡಿತ್ತು. ಪರಮಾಪ್ತ ದೇಶಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಕೈ ಬಿಡಲು ತೀರ್ಮಾನವನ್ನು ಕೈಗೊಳ್ಳಲಾಗಿತ್ತು.

ಕ್ರಮ ಕೈಗೊಳ್ಳಲು ಆಗ್ರಹ

ಕ್ರಮ ಕೈಗೊಳ್ಳಲು ಆಗ್ರಹ

ಪುಲ್ವಮಾ ದಾಳಿಯ ಬಳಿಕ ಭಾರತ ಉಗ್ರರನ್ನು ಮಟ್ಟಹಾಕಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿತ್ತು. ಪಾಕಿಸ್ತಾನದ ರಾಜತಾಂತ್ರಿಕ ಇಲಾಖೆಗೆ ಈ ಕುರಿತು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯಲ್ ಗೋಖಲೆ ನೋಟಿಸ್ ನೀಡಿದ್ದರು.

ವಿವಿಧ ದೇಶಗಳ ಮೂಲಕ ಒತ್ತಡ

ವಿವಿಧ ದೇಶಗಳ ಮೂಲಕ ಒತ್ತಡ

ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ವಿವಿಧ ದೇಶಗಳ ಮೂಲಕ ಭಾರತ ಒತ್ತಡ ಹಾಕಿಸಿದೆ. ತಕ್ಷಣಕ್ಕೆ ಅನ್ವಯವಾಗುವಂತೆ ಪಾಕಿಸ್ತಾನದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 200ರಷ್ಟು ಹೆಚ್ಚು ಮಾಡಲಾಗಿದೆ.

ಟ್ವೀಟ್‌ನಲ್ಲಿ ಏನಿದೆ?

ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ಡಾ.ಮೊಹಮದ್ ಫೈಸಲ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದ್ದೇವೆ. ಇಂದು ಬೆಳಗ್ಗೆ ದೆಹಲಿಯಿಂದ ಅವರು ಹೊರಟಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

English summary
Spokesperson of the Ministry of Foreign Affairs Pakistan Dr Mohammad Faisal said that We have called back our High Commissioner in India for consultations. He left New Delhi this morning . Pakistan takes this move after terrorist attack at Pulwama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X