ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮೂಲದ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ 'ಬ್ರಿಕ್ಸ್' ನಿರ್ಣಯ

By Sachhidananda Acharya
|
Google Oneindia Kannada News

ಕ್ಸಿಯಾಮೆನ್, ಸೆಪ್ಟೆಂಬರ್ 4: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ದೇಶಗಳ ಸಮಾವೇಶದಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸೇರಿದಂತೆ ವಿವಿಧ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ.

ಚೀನಾದಲ್ಲಿ ಬ್ರಿಕ್ಸ್ ಸಮ್ಮೇಳನ: ಮೋದಿ- ಜಿನ್ಪಿಂಗ್ ಮುಖಾಮುಖಿಚೀನಾದಲ್ಲಿ ಬ್ರಿಕ್ಸ್ ಸಮ್ಮೇಳನ: ಮೋದಿ- ಜಿನ್ಪಿಂಗ್ ಮುಖಾಮುಖಿ

ಇದೇ ಮೊದಲಬಾರಿಗೆ ಬ್ರಿಕ್ಸ್ ಸಮಾವೇಶದಲ್ಲಿ ಪಾಕಿಸ್ತಾನ ಮೂಲದ ಲಷ್ಕರ್‌ ಎ ತಯ್ಯಬಾ, ಜೈಷ್‌ ಎ ಮೊಹಮ್ಮದ್‌, ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ ಹಾಗೂ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ.

Pakistan based terror groups named in BRICS declaration

ಉಗ್ರ ಸಂಘಟನೆ ರಚಿಸುವ ಮತ್ತು ಬೆಂಬಲಿಸುವವರ ಮೇಲೆ ಕ್ರಮ ಕೈಗೊಳ್ಳುವ ನಿರ್ಣಯವನ್ನೂ ಸಮಾವೇಶದಲ್ಲಿ ತೆಗೆದುಕೊಳ್ಳಲಾಗಿದೆ.

ಬ್ರಿಕ್ಸ್ ವಾಣಿಜ್ಯ ಸಮಾವೇಶಕ್ಕೂ ಮೊದಲು, ಪಾಕಿಸ್ತಾನ ವಿಚಾರವನ್ನು ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಬಾರದು ಎಂದು ಚೀನಾ ಹೇಳಿತ್ತು. ಪಾಕಿಸ್ತಾನ ವಿಚಾರ ಪ್ರಸ್ತಾಪಿಸಲು ಇದು ಸೂಕ್ತ ವೇದಿಕೆಯಲ್ಲ ಎಂದು ಚೀನಾ ವಕ್ತಾರರು ಹೇಳಿದ್ದರು. ಆದರೆ ಇದೀಗ ಚೀನಾ ಭಾರತಕ್ಕೆ ಬೆಂಬಲ ಸೂಚಿಸಿದ್ದು, ಸಮ್ಮೇಳನದಲ್ಲಿ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜಿಎಸ್ಟಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆ : ಬ್ರಿಕ್ಸ್ ನಲ್ಲಿ ಮೋದಿಜಿಎಸ್ಟಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆ : ಬ್ರಿಕ್ಸ್ ನಲ್ಲಿ ಮೋದಿ

ಉಗ್ರ ಸಂಘಟನೆಗಳಿಂದ ಅಶಾಂತಿ ಹೆಚ್ಚಾಗುತ್ತಿದೆ. ಇದು ಬ್ರಿಕ್ಸ್‌ ರಾಷ್ಟ್ರಗಳ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಈ ಉಗ್ರ ಸಂಘಟನೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಚೀನಾ, ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದ ಅಧ್ಯಕ್ಷರು ನಿರ್ಣಯ ತೆಗೆದುಕೊಂಡಿದ್ದಾರೆ.

ಇನ್ನು 43 ಪುಟಗಳ 'ಕ್ಷಿಯಮೆನ್ ಡಿಕ್ಲರೇಷನ್' (ಕ್ಷಿಯಮೆನ್ ನಿರ್ಣಯ)ದಲ್ಲಿ ಪ್ರಮುಖವಾಗಿ ತಕ್ಷಣ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸೆಗೆ ಕೊನೆ ಹಾಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.

English summary
For the first time, Pakistan-based terror groups like the Lashkar-e-Taiba, Jaish-e-Mohammad and Tehrik-i-Taliban Pakistan were named today in the BRICS summit’s ‘Xiamen Declaration’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X