ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಭಾರತ: ವಿಡಿಯೋ ನೋಡಿ

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ, ಗಡಿಯಲ್ಲಿರುವ ಭಾರತೀಯ ಹಳ್ಳಿಗಳ ಮೇಲೆ ಆಗಾಗ ಗುಂಡಿನ ದಾಳಿ ನಡೆಸಿ ಅಮಾಯಕರ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ಸೇನೆಗೆ ತಕ್ಕ ಶಾಸ್ತಿ ಮಾಡಿದ ಭಾರತ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಜಮ್ಮು ಕಾಶ್ಮೀರ, ಮೇ 22: ಗಡಿಯಲ್ಲಿ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಮೇಲೆ ಭಾರತ ಇಂದು (ಮೇ 23) ತಕ್ಕ ಶಾಸ್ತಿ ಮಾಡಿದೆ.

ಜಮ್ಮು ಕಾಶ್ಮೀರದ ನೌಶಾರಾ ಪ್ರಾಂತ್ಯದ ಬಳಿ ಹಾದು ಹೋಗುವ ಗಡಿಯಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನದ ಪಾಕಿಸ್ತಾನದ ಚೆಕ್ ಪೋಸ್ಟ್ ಹಾಗೂ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಸುಮಾರು 10 ಸೇನಾ ನೆಲೆಗಳು ಧ್ವಂಸಗೊಂಡಿರಬಹುದೆಂದು ಭಾರತೀಯ ಸೇನೆ ಹೇಳಿದ್ದು, ಪಾಕಿಸ್ತಾನದ 20- 25 ಸೈನಿಕರು ಸಾವಿಗೀಡಾಗಿರುವ ಸಂಭವವಿದೆ ಎಂದು ಹೇಳಿದೆ.[ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು]

Pakistan army check posts smashed by Indian army

ಈ ಮೂಲಕ, ತಾಳ್ಮೆಯೇ ಭಾರತದ ದೌರ್ಬಲ್ಯವಲ್ಲ ಎಂಬುದನ್ನು ಭಾರತೀಯ ಸೇನೆ ಸಾಬೀತುಪಡಿಸಿದೆ. ಅತ್ತ, ಕಡೆಯಿಂದ ಯಾವುದೇ ಸಾವು, ನೋವು ಆದ ಬಗ್ಗೆ ವರದಿಯಾಗಿಲ್ಲ.

ಗುಂಡಿನ ದಾಳಿ ನಡೆಸಿರುವ ಬಗ್ಗೆ ಭಾರತೀಯ ಸೇನೆಯು ಅಧಿಕೃತವಾಗಿ ಪ್ರಕಟಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಾರತೀಯ ಸೇನೆಯ ಮೇಜರ್ ಜನರಲ್ ಅಶೋಕ್ ನೂರುಲ್ಲಾ, ''ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದೊಳಕ್ಕೆ ನುಸುಳುವಿಕೆ ಇತ್ತೀಚೆಗೆ ಹೆಚ್ಚಾಗತೊಡಗಿತ್ತು. ಇದನ್ನು ತಡೆ ಹಿಡಿಯಲು ಗುಂಡಿನ ದಾಳಿ ಮಾಡಿದ್ದೇವೆ'' ಎಂದು ತಿಳಿಸಿದ್ದಾರೆ.[ರಾಜಕೀಯವಾಗಿ ದುರ್ಬಳಕೆಯಾದ ಸರ್ಜಿಕಲ್ ಸ್ಟ್ರೈಕ್: ಮೋದಿ]

English summary
In a strong retaliation to unprovoked attack from Pakistan military at border, on May 23, 2017, India gunned down the Pak army's posts at the border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X