ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ UN ತಾತ್ಕಾಲಿಕ ಸದಸ್ಯತ್ವ, ಪಾಕಿಸ್ತಾನದಿಂದಲೂ ಬೆಂಬಲ

|
Google Oneindia Kannada News

ನವದೆಹಲಿ, ಜೂನ್ 26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆಯಲು ಭಾರತಕ್ಕೆ ಪಾಕಿಸ್ತಾನವೂ ಬೆಂಬಲ ವ್ಯಕ್ತಪಡಿಸಿದೆ. ಎರಡು ವರ್ಷಗಳ ಈ ಸದಸ್ಯ ಸ್ಥಾನವನ್ನು ಭಾರತ 8ನೇ ಬಾರಿಗೆ ಹೊಂದುತ್ತಿದೆ.

ಮತ್ತೆ ವಿಕೃತಿ ಮೆರೆದ ಪಾಕಿಸ್ತಾನ, 6 ಭಾರತೀಯ ಅಧಿಕಾರಿಗಳಿಗೆ ಕಿರುಕುಳಮತ್ತೆ ವಿಕೃತಿ ಮೆರೆದ ಪಾಕಿಸ್ತಾನ, 6 ಭಾರತೀಯ ಅಧಿಕಾರಿಗಳಿಗೆ ಕಿರುಕುಳ

ಭಾರತಕ್ಕೆ ತಾತ್ಕಾಲಿಕ ಸದಸ್ಯತ್ವ ನೀಡುವ ಉಮೇದುವಾರಿಕೆಗೆ ಪಾಕಿಸ್ತಾನ ಸೇರಿದಂತೆ ಏಷ್ಯಾ-ಪೆಸಿಫಿಕ್ ವಲಯದ 55 ದೇಶಗಳು ಒಕ್ಕೊರಲ ಬೆಂಬಲ ವ್ಯಕ್ತಪಡಿಸಿವೆ. ಈ ಅಪೂರ್ವ ಬೆಂಬಲ ನೀಡಿದ ಎಲ್ಲಾ ದೇಶಗಳಿಗೂ ಧನ್ಯವಾದಗಳು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಕೃತಜ್ಞತೆ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

Pakistan and 55 nations to back Indias candidature for UN Security Council

2021-22ರ ಅವಧಿಗೆ 5 ತಾತ್ಕಾಲಿಕ ಸ್ಥಾನಕ್ಕಾಗಿ ಜೂನ್ 2020ರಲ್ಲಿ ಚುನಾವಣೆ ನಡೆಯಲಿದೆ, ಒಟ್ಟು 193 ಸದಸ್ಯ ಬಲದಲ್ಲಿ 55 ಸದಸ್ಯರಾಷ್ಟ್ರಗಳ ಬೆಂಬಲವನ್ನು ಭಾರತ ಪಡೆದಿದೆ. ಆಫ್ರಿಕಾ, ಯುರೋಪ್, ಲ್ಯಾಟಿನ್ ಅಮೆರಿಕ, ಪಶ್ಚಿಮ ಯುರೋಪ್ ಹೀಗೆ ಪ್ರದೇಶವಾರು ಹಂಚಿಕೆ ಮಾಡಲಾಗುತ್ತದೆ.

ಅಮೆರಿಕ, ರಷ್ಯಾ, ಬ್ರಿಟನ್, ಚೀನಾ ಹಾಗೂ ಫ್ರಾನ್ಸ್ ದೇಶಗಳು ಯುಎನ್ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ಹೊಂದಿವೆ. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ. ಭಾರತ 1950-51 ರಿಂದ 2011-2012 ರ ತನಕ ಏಳು ಬಾರಿ ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿದೆ.

English summary
In a significant diplomatic win for India, the country's candidature for a non-permanent seat at the United Nations Security Council (UNSC) has been unanimously endorsed by the Asia Pacific group, comprising 55 nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X