ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರಕ್ಕೆ ಯತ್ನಿಸಿದ್ದ ಕ್ರಿಕೆಟ್ಟಿಗ ಆಲೂ ಇಂಜಮಾಮ್

By Srinath
|
Google Oneindia Kannada News

Pakistan cricketer Inzamam-ul-Haq tried to convert Danish Kaneria in to muslim Shaharyar M Khan
ನವದೆಹಲಿ, ಜ.15: ಇತ್ತ, ಮತಾಂತರದ ರೂವಾರಿ ಕಣ್ ಕಟ್ ವಿದ್ಯೆಯ ಬೆನ್‌ ಹಿನ್ ಇಂದು ಬೆಂಗಳೂರಿಗೆ ಆಗಮಿಸಿಲ್ಲ ಎಂಬ ಸುವಾರ್ತೆಯ ಮಧ್ಯೆ ಅತ್ತ ಮಗ್ಗಲುಮುಳ್ಳು ಪಾಕಿಸ್ತಾನದಿಂದ ಮತಾಂತರಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಸುದ್ದಿಯೊಂದು ಬಂದಿದೆ. ಅನ್ಯ ಧರ್ಮದ ಆಟಗಾರರನ್ನು ಪಾಕ್ ಕ್ರಿಕೆಟ್ಟಿಗರು ಮತಾಂತರ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಆಲೂ ಇಂಜಮಾಮ್ ಕಿತಾಪತಿ:
ಪಾಕಿಸ್ತಾನದ ದಢೂತಿ ಕ್ರಿಕೆಟ್ಟಿಗ ಇಂಜಮಾಮ್ ಉಲ್ ಹಕ್ (Inzamam-ul-Haq) ಗೊತ್ತಲ್ಲಾ? ಅದೇ ಮೂಟೆಯಂತೆ ವಿಕೆಟ್ಟುಗಳ ಮಧ್ಯೆ ಓಡಾಡುತ್ತಾ ಪ್ರೇಕ್ಷಕರಿಗೆ ಮನರಂಜನೆ ಕೊಡುತ್ತಿದ್ದ ಪಾಕ್ ತಂಡದ ಅಪ್ಪಟ ಬ್ಯಾಟ್ಸ್ ಮನ್. ಇಂತಿಪ್ಪ ಇಂಜಮಾಮ್ ಕ್ರಿಶ್ಚಿಯನ್ ಯೂಸುಫ್ ಯೂಹಾನ, ಮೊಹಮದ್ ಯೂಸುಫ್ ಆಗಿ ಇಸ್ಲಾಂಗೆ ಮತಾಂತರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ( ಆಚಾರ್ಯ ಮೀಡಿಯಾ ಕ್ರಿಕೆಟ್ ಫೆ. 19ರಿಂದ ಆರಂಭ )

ಅಷ್ಟೇ ಅಲ್ಲ. ಪಾಕಿಸ್ತಾನದ ಪರ ಆಡಿದ ಹಿಂದೂ ಆಟಗಾರ ಎಂಬ ಹೆಗ್ಗಳಿಕೆಯ, ಸ್ಪಿನ್ನರ್ ದನೀಶ್ ಕನೇರಿಯಾ ಅವರನ್ನು ಸಹ ಇದೇ ಇಂಜಮಾಮ್ ಮತಾಂತರಗೊಳಿಸಲು ಹರಸಾಹಸ ಪಟ್ಟಿದ್ದರಂತೆ. ಸ್ವತಃ ಪಾಕ್ ತಂಡದ ನಾಯಕನಾಗಿದ್ದಾಗ ಇಂಜಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದರಂತೆ.

ಆದರೆ ಇದನ್ನು ಅಂದಿನ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಹರ್ಯಾರ್ ಖಾನ್ (Shaharyar M Khan) ಯಶಸ್ವಿಯಾಗಿ ತಡೆದಿದ್ದರು. ದನೀಶ್ ಕನೇರಿಯಾ ಒಬ್ಬ ಹಿಂದೂ ಆಗಿ ಯಾವುದೇ ತಾರತಮ್ಯವಿಲ್ಲದೆ ಮುಕ್ತ ಮನಸ್ಸಿನಿಂದ ಪಾಕ್ ತಂಡವನ್ನು ಪ್ರತಿನಿಧಿಸಬೇಕು ಎಂಬ ಒತ್ತಾಸೆಯಿಂದ ಶಹರ್ಯಾರ್, ಇಂಜಿ ಪ್ರಯತ್ನಕ್ಕೆ ತಣ್ಣೀರು ಎರಚಿದ್ದರಂತೆ.

ಹಿಂದೂ ಆಟಗಾರನೊಬ್ಬ ಪಾಕ್ ಪರ ಆಡುವುದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಹಾಗಾಗಿ ಮತಾಂತರಕ್ಕೆ ಅವಕಾಶ ಕಲ್ಪಿಸಲಿಲ್ಲ ಎಂದು ಸ್ವತಃ ಶಹರ್ಯಾರ್ ಅವರೇ ಇಂಜಮಾಮ್ ಮತಾಂತರ ಕುತಂತ್ರವನ್ನು ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ರಂಗದಲ್ಲಿರುವ ಪ್ರಕ್ಷುದ್ದ ರಾಜಕೀಯವನ್ನು ಬಂಬಿಸುವ Cricket Cauldron: The Turbulent Politics of Sport in Pakistan ಎಂಬ ಪುಸ್ತಕದಲ್ಲಿ ಶಹರ್ಯಾರ್ ಖಾನ್ ಈ ಮತಾಂತರ ವೃತ್ತಾಂತವನ್ನು ದಾಖಲಿಸಿದ್ದಾರೆ. ದೆಹಲಿಯಲ್ಲಿ ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಶಹರ್ಯಾರ್ ಖಾನ್ ಈ ವಿಷಯವನ್ನು ಹೇಳಿದ್ದಾರೆ.

Any way, ಇಂಜಮಾಮ್ ಬಗ್ಗೆ ಇದುವರೆಗೂ ಒಳ್ಳೆಯ ಸದಭಿಪ್ರಾಯವಿತ್ತು. ಆತನ ಬ್ಯಾಟಿಂಗ್ ಕಲೆಯನ್ನು ನೋಡಿ ಆನಂದಿಸುತ್ತಿದ್ದೆವು. ಆದರೆ ಈಗ ಮತಾಂತರ ಕಪ್ಪುಕಲೆ ಅಂಟಿಕೊಂಡಿರುವುದು ಬೇಸರದ ಸಂಗತಿ.

English summary
Pakistan cricket captain Inzamam-ul-Haq tried to convert Pakistan's leg-spinner Danish Kaneria in to muslim says Pak Cricket Board ex President Shaharyar M Khan. He was in New Delhi to release his book 'Cricket Cauldron: The Turbulent Politics of Sport in Pakistan'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X