ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮನಾಭಸ್ವಾಮಿ ದೇಗುಲದಲ್ಲಿ ಇನ್ನೂ 2 ಕೊಠಡಿ ನಿಧಿ

By Srinath
|
Google Oneindia Kannada News

ತಿರುವನಂತಪುರ,ಏ.19: ಮೂರು ವರ್ಷಗಳ ಹಿಂದೆ ಇಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಲಕ್ಷ ಕೋಟಿ ರೂ ಮೌಲ್ಯದ ಚಿನ್ನದ ಗಣಿ ಪತ್ತೆಯಾಗಿದ್ದು ಇನ್ನೂ ಜನರ ನೆನಪಿನಗಣಿಯಲ್ಲಿ ಭದ್ರವಾಗಿ ಉಳಿದಿದೆ. ಆದರೆ ಅದು ನೆನಪಿನ ಗಣಿಯಲ್ಲಷ್ಟೇ ಉಳಿಯುವ ಅಪಾಯ ತಲೆದೋರಿದೆ. ಏಕೆಂದರೆ ಈ ಪದ್ಮನಾಭ ದೇಗುಲದ ಚಿನ್ನದ ಗಣಿಯಿಂದ ಸ್ವಲ್ಪ ಸ್ವಲ್ಪವೇ ಚಿನ್ನಾಭರಣವನ್ನು ಕದ್ದು ಸಾಗಿಸಲಾಗುತ್ತಿದೆ ಎಂಬ ಆತಂಕಕಾರಿ ವರದಿಯನ್ನು ನೇರವಾಗಿ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದೆ!

ಚಿನ್ನಾಭರಣ, ಮುತ್ತು, ಹರಳು, ಚಿನ್ನದ ನಾಣ್ಯಗಳು, ಹಾರಗಳು, ಉಂಗುರಗಳು, ಇನ್ನೂ ಏನೇನೋ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ಸಿಕ್ಕಿದ್ದು (2011 ಜುಲೈ) ಇನ್ನೂ ನಿಮ್ಮ ನೆನಪಿನಲ್ಲಿದೆ. ಚಂದಮಾಮ ಕಥೆಗಳಲ್ಲಿ ಕೇಳೀಬರುವಂತೆ ಈ ಅಪಾರ ನಿಧಿ ಪತ್ತೆಯಾಗುತ್ತಿದ್ದಂತೆ ವಿಷಯ ಸುಪ್ರೀಂಕೋರ್ಟಿಗೆ ತಲುಪಿ, ಸ್ವತಃ ನ್ಯಾಯಾಲಯವೇ ಗೋಪಾಲ ಸುಬ್ರಮಣ್ಯಂ ಎಂಬುವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿ, ದೇವಸ್ಥಾನದಲ್ಲಿನ ಸ್ಥಿತಿಗತಿಗಳನ್ನು ವರದಿ ಮಾಡುವಂತೆ ಸೂಚಿಸಿತ್ತು.

ಮೈ ಲಾರ್ಡ್! ದೇವಸ್ಥಾನದಲ್ಲಿ ಚಿನ್ನಾಭರಣ ಕದಿಯಲಾಗುತ್ತಿದೆ

ಮೈ ಲಾರ್ಡ್! ದೇವಸ್ಥಾನದಲ್ಲಿ ಚಿನ್ನಾಭರಣ ಕದಿಯಲಾಗುತ್ತಿದೆ

35 ದಿನಗಳ ಕಾಲ ದೇವಸ್ಥಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಗೋಪಾಲ ಸುಬ್ರಮಣ್ಯಂ ಅವರು 'ಮೈ ಲಾರ್ಡ್! ದೇವಸ್ಥಾನದಲ್ಲಿ ಚಿನ್ನಾಭರಣ ಕದಿಯಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇವಸ್ಥಾನದ ಆವರಣದಲ್ಲಿ ಗೋಲ್ಡ್ ಪ್ಲೇಟಿಂಗ್ ಯಂತ್ರ ಸ್ಥಾಪಿಸಲಾಗಿದೆ.
ಮೂಲ ಆಭರಣಗಳನ್ನು ಕದ್ದು, ನಕಲಿ ಆಭರಣ ಸಿದ್ಧಪಡಿಸಿ, ಅದಕ್ಕೆ ಗೋಲ್ಡ್ ಪ್ಲೇಟಿಂಗ್ ಮಾಡಿ ಯತಾಸ್ಥಿತಿಯಲ್ಲಿ ಅದನ್ನು ಇಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಕ್ಷಣ ಈ ಬಗ್ಗೆ ಜಾಗ್ರತೆ ವಹಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು

ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು

ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ರಾಜ ಕುಟುಂಬ (Travancore royal family) ಇದನ್ನು ಸ್ವಂತ ಸೊತ್ತು ಎಂದೇ ಭಾವಿಸಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದಾರೆ.

ಬಿ ಕೊಠಡಿ ಸುತ್ತ ಅನುಮಾನದ ಹುತ್ತ

ಬಿ ಕೊಠಡಿ ಸುತ್ತ ಅನುಮಾನದ ಹುತ್ತ

ಎಲ್ಲಕ್ಕಿಂತ ಮುಖ್ಯವಾಗಿ ಬಿ ಕೊಠಡಿಯ ಬಾಗಿಲು ತೆರೆಯದೇ ಹಾಗೇ ಬಿಡಲಾಗಿತ್ತು. ಆದರೆ ತಕ್ಷಣ ಆ ಬಾಗಿಲು ತೆರೆದು ತಪಾಸಣೆ ನಡೆಸಬೇಕು. ಕೊಠಡಿಯ ಮೇಲ್ಭಾಗದಲ್ಲಿರುವ ರಹಸ್ಯದ್ವಾರ ನಿಗೂಢವಾಗಿದ್ದು, ಇಲ್ಲಿ ಅನುಮಾನದ ಹುತ್ತಗಳು ಎದ್ದಿವೆ. ಎ, ಸಿ, ಡಿ, ಇ ಮತ್ತು ಎಫ್ ಎಂಬ ಕೊಠಡಿಗಳನ್ನು ತೆರೆದಾಗ ಅಪಾರ ನಿಧಿ ಪತ್ತೆಯಾಗಿತ್ತು. ಆದರೆ ಅದೇ ಸಾಲಿನಲ್ಲಿದ್ದ ಬಿ ಕೊಠಡಿಯ ಬಾಗಿಲು ತೆರೆಯಲು ಧಾರ್ಮಿಕ ತೊಡಕಿನಿಂದ ಹಿಡಿದು ನೈಸರ್ಗಿಕ ದುರಂತಗಳ ಭೀತಿಯನ್ನು ಹುಟ್ಟುಹಾಕಲಾಗಿದೆ. ಆದರೆ ಅಂಥದ್ದೇನೂ ಆಗೋಲ್ಲ. ತಕ್ಷಣ ಅದರ ಬಾಗಿಲು ತೆರೆಯಿರಿ ಎಂದು ಸುಬ್ರಮಣ್ಯಂ ಕೋರ್ಟಿಗೆ ಸೂಚಿಸಿದ್ದಾರೆ.

ಇನ್ನೂ ಎರಡು ಕೊಠಡಿಗಳಲ್ಲಿವೆ ಸಂಪತ್ತು

ಇನ್ನೂ ಎರಡು ಕೊಠಡಿಗಳಲ್ಲಿವೆ ಸಂಪತ್ತು

ಅಷ್ಟೇ ಅಲ್ಲ. ಈ ಎ, ಬಿ, ಸಿ, ಡಿ, ಇ ಮತ್ತು ಎಫ್ ಕೊಠಡಿಗಳಲ್ಲದೇ ಇನ್ನೂ ಎರಡು ಕೊಠಡಿಗಳು ಇಲ್ಲಿವೆ. G ಮತ್ತು H ಕೊಠಡಿಗಳು ಇವಾಗಿದ್ದು, ಅವುಗಳನ್ನೂ ಪರಿಶೀಲಿಸಬೇಕು ಎಂದು ಕೋರ್ಟ್ ಗಮನ ಸೆಳೆದಿದ್ದಾರೆ. (ಕೇರಳ ಪದ್ಮನಾಭ ದೇಗುಲಕ್ಕೆ ಭದ್ರತೆಯ ಆತಂಕ)

ಕಳೆದ 30 ವರ್ಷಗಳಲ್ಲಿ ಕಾಣಿಕೆ/ ದಾನ ಸ್ವಾಹಾ

ಕಳೆದ 30 ವರ್ಷಗಳಲ್ಲಿ ಕಾಣಿಕೆ/ ದಾನ ಸ್ವಾಹಾ

ಕಳೆದ 30 ವರ್ಷಗಳಲ್ಲಿ ಭಕ್ತರು ನೀಡಿರುವ ಕಾಣಿಕೆ/ ದಾನಗಳ ಬಗ್ಗೆ ಒಂಚೂರು ದಾಖಲೆ ಪತ್ರವೂ ಇಲ್ಲ. ಅವುಗಳನ್ನು ಆಡಳಿತ ಮಂಡಳಿ ಸ್ವಾಹಾ ಮಾಡಿರಬಹುದು. ಹಾಗಾಗಿ ತಕ್ಷಣ ಮತ್ತೊಮ್ಮೆ ಸವಿವರ ಆಡಿಟಿಂಗ್ ನಡೆಸಬೇಕು ಎಂದೂ ಸುಬ್ರಮಣ್ಯಂ ಕೋರಿದ್ದಾರೆ.

English summary
Kerala Padmanabhaswamy temple two more vaults found Kallara G and H reports Supreme Court Amicus curiae Gopal Subramaniam. Amicus curiae Gopal Subramaniam, after a 35-day inspection of the temple, told the court in his report about recent discovery of a gold plating machine in the temple premises and expressed apprehension that some original temple gold and ornaments may have been pilfered and replaced with fakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X