ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಯರಾಜಗೆ ಪದ್ಮ ವಿಭೂಷಣ, ಸೂಲಗಿತ್ತಿ ನರಸಮ್ಮಗೆ ಪದ್ಮಶ್ರೀ

By Mahesh
|
Google Oneindia Kannada News

ನವದೆಹಲಿ, ಜನವರಿ 25: ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಸಂಜೆ ಪ್ರಕಟಿಸಲಾಗಿದೆ. ಕರ್ನಾಟಕದ ಪಾವಗಡ ಮೂಲದ ಸೂಲಗಿತ್ತಿ ನರಸಮ್ಮ ಅವರಿಗೆ ಗೌರವ ಸಿಕ್ಕಿದೆ. ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.

ಕರ್ನಾಟಕದಿಂದ ಪ್ರಶಸ್ತಿ ಪುರಸ್ಕೃತರು: ದೊಡ್ಡರಂಗೇಗೌಡ, ಸೀತಮ್ಮ, ನರಸಮ್ಮ, ಆರ್ ಸತ್ಯನಾರಾಯಣ, ಇಬ್ರಾಹಿಂ ಎಸ್, ಸಿದ್ದೇಶ್ವರ ಸ್ವಾಮೀಜಿ, ರುದ್ರಪಟ್ಟಣಂ ನಾರಾಯಣಸ್ವಾಮಿ ತಾರಾನಾಥನ್ ಹಾಗೂ ತ್ಯಾಗರಾಜನ್, ಪಂಕಜ್ ಅಡ್ವಾಣಿ.

Prestigious Padma awards for the year 2018 have been announced.

97 ವರ್ಷ ವಯಸ್ಸಿನ ಕೃಷ್ಣಾಪುರದ ನಿವಾಸಿ ನರಸಮ್ಮ ಅವರು ಸೂಲಗಿತ್ತಿಯಾಗಿ ಕಳೆದ 70 ವರ್ಷಗಳಿಂದ ಉಚಿತವಾಗಿ ಹೆರಿಗೆ ಮಾಡಿಸಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಧುರ ಸಂಗೀತ ಸಂಯೋಜನೆ ಮಾಡಿರುವ ಇಳಯರಾಜ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಗೌರವ ಲಭಿಸಲಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಜನಿ-ಇಳಯರಾಜ ಕುಡಿತ ಚಟ ಬಿಡಿಸಿದ 'ಕನ್ನಡ' ತಾಯಿ

ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ, ಇಂಜಿನಿಯರಿಂಗ್, ಸಾರ್ವಜನಿಕ ವಲಯದಲ್ಲಿ ಸೇವೆ, ಉದ್ಯಮ ಕ್ಷೇತ್ರದ ಸಾಧಕರಲ್ಲದೆ, ಎಲೆಮರೆಯ ಸಾಧಕರು'(unsung heroes) ಎಂಬ ವಿಭಾಗದಿಂದ ಪದ್ಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

Prestigious Padma awards for the year 2018 have been announced.

ಈ ಮೂಲಕ ಜನಪ್ರಿಯತೆಯಿಂದ ದೂರವುಳಿದಿರುವ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಗುತ್ತದೆ. ಈ ಬಾರಿ ಸುಮಾರು 15,700 ಮಂದಿ ಪ್ರತಿಷ್ಠಿತ ಪ್ರಶಸ್ತಿಗಾಗಿ ಅರ್ಜಿ ಹಾಕಿದ್ದರು.

ಒಟ್ಟಾರೆ, 85 ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 73 ಪದ್ಮಶ್ರೀ, 3 ಪದ್ಮವಿಭೂಷಣ ಹಾಗೂ 9 ಪದ್ಮ ಭೂಷಣ ಪ್ರಶಸ್ತಿ ವಿಜೇತರ ಹೆಸರುಗಳಿವೆ.

ಪದ್ಮವಿಭೂಷಣ
ಕ್ರಮ ಸಂಖ್ಯೆ ಸಾಧಕರು ವಿಭಾಗ ರಾಜ್ಯ
1 ಇಳಯರಾಜ ಕಲೆ- ಸಂಗೀತ ತಮಿಳುನಾಡು
2 ಗುಲಾಂ ಮುಸ್ತಫಾ ಖಾನ್ ಕಲೆ- ಸಂಗೀತ ಮಹಾರಾಷ್ಟ್ರ್ರ
3 ಪರಮೇಶ್ವರನ್ ಸಾಹಿತ್ಯ- ಶಿಕ್ಷಣ ಕೇರಳ

________________________________

ಪದ್ಮಭೂಷಣ
4.
ಪಂಕಜ್ ಅಡ್ವಾಣಿ ಕ್ರೀಡೆ/ ಬಿಲಿಯರ್ಡ್, ಸ್ನೂಕರ್ ಕರ್ನಾಟಕ
5. ಫಿಲಿಪೋಸ್ ಮಾರ್ ಕ್ರಿಸೊಸ್ಟೋಮ್ ಆಧಾತ್ಮ ಕೇರಳ
6.
ಮಹೇಂದ್ರ ಸಿಂಗ್ ಧೋನಿ ಕ್ರೀಡೆ- ಕ್ರಿಕೆಟ್ ಜಾರ್ಖಂಡ್
7.
ಅಲೆಕ್ಸಾಂಡರ್ ಕಡಕಿನ್ (ವಿದೇಶಿ/ಮರಣೋತ್ತರ) ಸಾರ್ವಜನಿಕ ವ್ಯವಹಾರ ರಷ್ಯಾ
8.
ರಾಮಚಂದ್ರನ್ ನಾಗಸ್ವಾಮಿ ಇತರೆ- ಭೂಗರ್ಭವಿಜ್ಞಾನ ಸಂಶೋಧನೆ ತಮಿಳುನಾಡು
9 ವೇದ್ ಪ್ರಕಾಶ್ ನಂದ ಸಾಹಿತ್ಯ- ಶಿಕ್ಷಣ ಯುಎಸ್ಎ
10 ಲಕ್ಷ್ಮಿ ಪೈ ಕಲೆ ಗೋವಾ
11 ಅರವಿಂದ್ ಪರೀಖ್ ಕಲೆ-ಸಂಗೀತ ಮಹಾರಾಷ್ಟ್ರ
12. ಶಾರದಾ ಸಿನ್ಹಾ ಕಲೆ-ಸಂಗೀತ ಬಿಹಾರ

__________________________________________

ಪದ್ಮಶ್ರೀ
13.
ಅಭಯ್ ಬಾಂಗ್ ಹಾಗೂ ರಾಣಿ ಬಾಂಗ್
ವೈದ್ಯಕೀಯ
ಮಹಾರಾಷ್ಟ್ರ
14 ದಾವೋದರ್ ಗಣೇಶ್ ಬಾಪಟ್
ವೈದ್ಯಕೀಯ
ಛತ್ತೀಸ್ ಗಢ
15 ಪ್ರಫುಲ್ಲಾ ಗೋವಿಂದ ಬರುವಾ ಸಾಮಾಜಿಕ ಕಾರ್ಯಕರ್ತ ಅಸ್ಸಾಂ
16 ಮೋಹನ್ ಸ್ವರೂಪ್ ಭಾಟಿಯಾ ಸಾಹಿತ್ಯ ಉತ್ತರಪ್ರದೇಶ
17 ಸುಧಾಂಶು ಬಿಸ್ವಾಸ್ ಸಾಮಾಜಿಕ ಕಾರ್ಯಕರ್ತ ಪಶ್ಚಿಮ ಬಂಗಾಲ
18 ಸೈಖೊಮ್ ಮೀರಾಬಾಯಿ ಚಾನು ಕ್ರೀಡೆ- ವೇಯ್ಟ್ ಲಿಫ್ಟಿಂಗ್ ಮಣಿಪುರ
19 ಪಂಡಿತ್ ಶ್ಯಾಮಲಾಲ್ ಚತುರ್ವೇದಿ ಸಾಹಿತ್ಯ ಪರ್ತಕರ್ತ ಛತ್ತೀಸ್ ಗಢ
20 ಜೋಸ್ ಮಾ ಜೋಯಿ ಕಾನ್ಸಿಪ್ಶಿನ್ III ಉದ್ಯಮ ಫಿಲಿಫೈನ್ಸ್
21 ಲಗ್ಪೊಕ್ಲಕ್ಪಮ್ ಸುಬಾದಾನಿ ದೇವಿ ಕಲೆ ಕುಸುರಿ ಮಣಿಪುರ
21 ಲಗ್ಪೊಕ್ಲಕ್ಪಮ್ ಸುಬಾದಾನಿ ದೇವಿ ಕಲೆ ಕುಸುರಿ ಮಣಿಪುರ
22 ಸೋಮ್ ದೇವ್ ದೇವರ್ ಮನ್ ಕ್ರೀಡೆ- ಟೆನ್ನಿಸ್ ತ್ರಿಪುರ
23 ಯೇಶಿ ಧೋಡೆನ್ ವೈದ್ಯಕೀಯ ಹಿಮಾಚಲ ಪ್ರದೇಶ
24 ಅರುಪ್ ಕುಮಾರ್ ದತ್ತಾ ಸಾಹಿತ್ಯ- ಶಿಕ್ಷಣ ಅಸ್ಸಾಂ
25 ದೊಡ್ಡರಂಗೇಗೌಡ ಸಾಹಿತ್ಯ ಕರ್ನಾಟಕ
26 ಅರವಿಂದ್ ಗುಪ್ತ ಸಾಹಿತ್ಯ ಶಿಕ್ಷಣ ಮಹಾರಾಷ್ಟ್ರ
27 ದಿಗಂಬರ್ ಹನ್ಸ್ಡಾ ಸಾಹಿತ್ಯ ಜಾರ್ಖಂಡ್
28 ರಮ್ಲಿ ಬಿನ್ ಇಬ್ರಾಹಿಂ ಕಲೆ ನೃತ್ಯ ಮಲೇಷಿಯಾ
29 ಅನ್ವರ್ ಜಲಪುರಿ ಸಾಹಿತ್ಯ ಉತ್ತರಪ್ರದೇಶ
30 ಪಿಯೊಂಗ್ ತೆಮ್ಜೆನ್ ಜಾಮೀರ್ ಸಾಹಿತ್ಯ ನಾಗಾಲ್ಯಾಂಡ್
31 ಸೀತವ್ವ ಜೋಡಟ್ಟಿ ಸಾಮಾಜಿಕ ಕಾರ್ಯಕರ್ತೆ ಕರ್ನಾಟಕ
32 ಮಾಲತಿ ಜೋಶಿ ಸಾಹಿತ್ಯ ಮಧ್ಯಪ್ರದೇಶ
33 ಮನೋಶ್ ಜೋಶಿ ಕಲೆ-ನಟನೆ ಮಹಾರಾಷ್ಟ್ರ
34 ರಾಮೇಶ್ವರ್ ಲಾಲ್ ಕಾಬ್ರಾ ಉದ್ಯಮ ಮಹಾರಾಷ್ಟ್ರ
35 ಪ್ರಾಣ್ ಕಿಶೋರ್ ಕೌಲ್ ಕಲೆ ಜಮ್ಮು ಮತ್ತು ಕಾಶ್ಮೀರ
36 ಬೌನ್ಲಾಪ್ ಕಿಯೊಕಾಗ್ನ ಇತರೆ ವಾಸ್ತುಶಿಲ್ಪ ಲಾವೋಸ್
37 ವಿಜಯ್ ಕಿಚ್ಲು ಕಲೆ- ಸಂಗೀತ
ಪಶ್ಚಿಮ ಬಂಗಾಲ
38 ಟಾಮಾ ಕೊಹ್ ಸಾರ್ವಜನಿಕ ವ್ಯವಹಾರ ಸಿಂಗಪುರ
39 ಲಕ್ಷ್ಮಿ ಕುಟ್ಟಿ ನಾಟಿವೈದ್ಯೆ ಕೇರಳ
40 ಜಯಶ್ರೀ ಗೋಸ್ವಾಮಿ ಮಹಾಂತ ಸಾಹಿತ್ಯ ಅಸ್ಸಾಂ
41 ನಾರಾಯಣ ದಾಸ್ ಮಹಾರಾಜ್ ಇತರೆ-ಆಧಾತ್ಮ ರಾಜಸ್ಥಾನ
42 ಪ್ರವಕರ ಮಹಾರಾಣ ಕಲೆ ಶಿಲ್ಪ ಒಡಿಶಾ
43 ಹನ್ ಮನಿ ಸಾರ್ವಜನಿಕ ವ್ಯವಹಾರ ಕಾಂಬೋಡಿಯಾ
44 ನೌಫ್ ಮಾರ್ವಾಯಿ ಇತರೆ ಯೋಗ ಸೌದಿ ಅರೇಬಿಯಾ
45 ಜವೆರಿಲಾಲ್ ಮೆಹ್ತಾ ಸಾಹಿತ್ಯ ಪತ್ರಕರ್ತ ಗುಜರಾತ್
46 ಕೃಷ್ಣ ಬಿಹಾರಿ ಮಿಶ್ರಾ ಸಾಹಿತ್ಯ ಶಿಕ್ಷಣ ಪಶ್ಚಿಮ ಬಂಗಾಲ
47 ಸಿಸಿರ್ ಪುರುಷೋತ್ತಮ ಮಿಶ್ರಾ ಕಲೆ ಸಿನಿಮಾ ಮಹಾರಾಷ್ಟ್ರ
48 ಸುಭಾಷಿಣಿ ಮಿಸ್ತ್ರಿ ಸಾಮಾಜಿಕ ಸೇವೆ ಪಶ್ಚಿಮ ಬಂಗಾಲ
49 ತೊಮಿಯೊ ಮಿಜೊಕಾಮಿ ಸಾಹಿತ್ಯ ಜಪಾನ್
50 ಸೊಮ್ದೆತ್ ಫ್ರಾ ಮಹಾ ಮುನಿವಾಂಗ್ ಆಧಾತ್ಮ ಥೈಲ್ಯಾಂಡ್
English summary
Prestigious Padma awards for the year 2018 have been announced. The Centre on Thursday announced the list of this year's Padma awardees. Karnataka's midwife Narasamma(97) is one among the awardees. President Ramanath Kovind will award the Padma awards this Republic Day to a host of distinguished personalities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X