ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ : ಪಿ.ಚಿದಂಬರಂ ಆಕ್ರೋಶ

|
Google Oneindia Kannada News

ನವದೆಹಲಿ, ಮೇ 05 : ದಿ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಲಕ್ನೋದಲ್ಲಿ ಮೋದಿ ನೀಡಿದ ಹೇಳಿಕೆ ಕುರಿತು ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.

ಲಕ್ನೋದಲ್ಲಿ ಶನಿವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ಭ್ರಷ್ಟಾಚಾರಿ ನಂ 1 ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಯಿತು' ಎಂದು ರಾಜೀವ್ ಗಾಂಧಿ ಅವರ ಬಗ್ಗೆ ಹೇಳಿಕೆ ನೀಡಿದ್ದರು.

ಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿ

'ನಿಮ್ಮ ತಂದೆ ಮಿಸ್ಟರ್ ಕ್ಲೀನ್ ಎಂದು ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವವರು ಹೇಳುತ್ತಾರೆ. ಆದರೆ, ನಿಮ್ಮ ತಂದೆಯ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು' ಎಂದು ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಟೀಕೆ ಮಾಡಿದ್ದರು.

ಕಥೆಯ ಕೊನೆಯನ್ನಷ್ಟೇ ಮೋದಿ ಹೇಳುತ್ತಿದ್ದಾರೆ: ಚಿದಂಬರಂಕಥೆಯ ಕೊನೆಯನ್ನಷ್ಟೇ ಮೋದಿ ಹೇಳುತ್ತಿದ್ದಾರೆ: ಚಿದಂಬರಂ

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಪಿ.ಚಿದಂಬರಂ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. 'ಸಭ್ಯತೆಯ ಎಲ್ಲೆಯನ್ನು ನರೇಂದ್ರ ಮೋದಿ ಅವರು ಮೀರಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿ.ಚಿದಂಬರಂ ಆಕ್ರೋಶ

ಪಿ.ಚಿದಂಬರಂ ಅವರು ಟ್ವೀಟ್ ಮಾಡಿದ್ದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನರೇಂದ್ರ ಮೋದಿ ಅವರು 1991ರಲ್ಲಿ ಮೃತಪಟ್ಟ ರಾಜೀವ್ ಗಾಂಧಿ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಸಭ್ಯತೆಯ ಎಲ್ಲೆಯನ್ನು ಮೀರಿದ್ದಾರೆ' ಎಂದು ಹೇಳಿದ್ದಾರೆ.

ಮೋದಿ ಏನು ಓದಿಲ್ಲವೇ?

ನರೇಂದ್ರ ಮೋದಿ ಅವರು ಏನೂ ಓದಿಲ್ಲವೇ?. ರಾಜೀವ್ ಗಾಂಧಿ ಅವರ ವಿರುದ್ಧ ಆರೋಪಗಳನ್ನು ದೆಹಲಿ ಹೈಕೋರ್ಟ್ ತಳ್ಳಿಹಾಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೇಲ್ಮನವಿ ಸಲ್ಲಿಸಲಿಲ್ಲ

ಬಿಜೆಪಿ ಸರ್ಕಾರ ದೆಹಲಿ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ ಎಂಬುದು ನರೇಂದ್ರ ಮೋದಿ ಅವರಿಗೆ ತಿಳಿದಿಲ್ಲವೇ? ಎಂದು ಪಿ.ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಹೇಳಿಕೆಯಿಂದ ಅಘಾತವಾಗಿದೆ

'ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದಾಗಿ ಅಘಾತವಾಗಿದೆ. ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಹೇಗೆ ನೀಡಲು ಸಾಧ್ಯ? ಎಂದು ಸ್ಯಾಮ್ ಪಿತ್ರೋಡಾ ಪ್ರಶ್ನೆ ಮಾಡಿದ್ದಾರೆ.

English summary
Senior Congress leader P.Chidambaram tweeted against Narendra Modi and said he crossed all limits of propriety and decency by defaming a man (Rajiv Gandhi) who died in 1991.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X