ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನಲ್ಲಿ ಪಿ.ಚಿದಂಬರಂಗೆ ಏನೇನೆಲ್ಲಾ ವ್ಯವಸ್ಥೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ತಿಹಾರ್ ಜೈಲಿಗೆ ಕೊಂಡೊಯ್ಯಲಾಗಿದೆ.

ಪಿ.ಚಿದಂಬರಂ ಅವರಿಗೆ ಕೆಲವು ವಿಶೇಷ ವ್ಯವಸ್ಥೆಗಳನ್ನು ತಿಹಾರ್ ಜೈಲಿನಲ್ಲಿ ಮಾಡಲಾಗಿದೆ. ಚಿದಂಬರಂ ಅವರು ತಿಹಾರ್ ಜೈಲಿನ ವಾರ್ಡ್‌ 9 ರ ಜೈಲು ಸಂಖ್ಯೆ 7 ರಲ್ಲಿ ಕಳೆಯಲಿದ್ದಾರೆ. ಇದೇ ವಾರ್ಡ್‌ನಲ್ಲಿ ಸುಮಾರು 600-700 ಸಂಖ್ಯೆಯಲ್ಲಿ ಖೈದಿಗಳಿದ್ದಾರೆ.

ಪಿ ಚಿದಂಬರಂರನ್ನು ತಿಹಾರ್ ಜೈಲಿಗೆ ಕಳುಹಿಸಿದ ರೋಸ್ ಅವಿನ್ಯೂ ಕೋರ್ಟ್ಪಿ ಚಿದಂಬರಂರನ್ನು ತಿಹಾರ್ ಜೈಲಿಗೆ ಕಳುಹಿಸಿದ ರೋಸ್ ಅವಿನ್ಯೂ ಕೋರ್ಟ್

ಪಿ.ಚಿದಂಬರಂ ಅವರಿಗೆ ಜೆಡ್ ಸೆಕ್ಯುರಿಟಿ ಇದ್ದ ವ್ಯಕ್ತಿಯಾಗಿದ್ದ ಕಾರಣ ಹಾಗೂ ಅವರ ಆರೋಗ್ಯದ ದೃಷ್ಟಿಯಿಂದಾಗಿ ಅವರಿಗೆ ಕೆಲವು ವಿಶೇಷ ವ್ಯವಸ್ಥೆಗಳನ್ನು ನೀಡಲು ನ್ಯಾಯಾಲಯದಲ್ಲಿ ಕೇಳಲಾಗಿತ್ತು. ಅದರಂತೆ ನ್ಯಾಯಾಲಯ ಸಹ ಕೆಲವು ವಿಶೇಷ ವ್ಯವಸ್ಥೆಗಳನ್ನು ನೀಡಲು ಸಮ್ಮತಿಸಿದೆ.

P Chidambaram Special Fecilities in Tihar Jail

ಪಿ.ಚಿದಂಬರಂ ಅವರಿಗೆ ವಿದೇಶಿ ಮಾದರಿಯ ಟಾಯ್ಲೆಟ್ ನೀಡಲಾಗಿದೆ. ಅವರಿಗೆ ವಿಶೇಷ ಕೋಣೆಯ ವ್ಯವಸ್ಥೆ ಮಾಡಲಾಗಿದೆ. ಕೋಣೆಯಲ್ಲಿ ಮಂಚವನ್ನು ಹಾಕಲಾಗಿದೆ. ಇತರ ಖೈದಿಗಳಿಗೆ ಈ ವ್ಯವಸ್ಥೆಗಳಿಲ್ಲ. ಇದರ ಜೊತೆಗೆ ಅವರಿಗೆ ವಿಶೇಷ ಭದ್ರತೆ ನೀಡಲಾಗಿದೆ. ಜೊತೆಗೆ ನಿಗದಿತ ಆರೋಗ್ಯ ತಪಾಸಣೆಯನ್ನೂ ನೀಡಲಾಗುತ್ತಿದೆ.

ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'

ಪಿ.ಚಿದಂಬರಂ ಅವರಿಗೆ ಇತರ ಖೈದಿಗಳಂತೆ ದಾಲ್-ರೋಟಿ ನೀಡಲಾಗುತ್ತದೆ, ಅವರು ಸಹ ಇತರ ಖೈದಿಗಳಂತೆ ಬೆಳಿಗಿನ ಪ್ರಾರ್ಥನೆಯಲ್ಲಿ ಭಾಗವಹಿಸಬೇಕಾಗುತ್ತದೆ. ಜೈಲು ವಿಭಾಗದ ಡಿಜಿ ಸಂದೀಪ್ ಘೋಯಲ್ ಮಾತನಾಡಿ, ಚಿದಂಬರಂ ಅವರನ್ನೂ ಸಹ ಇತರೆ ಖೈದಿಗಳಂತೆಯೇ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

ಸಿಬಿಐ ವಿಶೇಷ ಕೋರ್ಟ್‌ ಇಂದು ಪಿ.ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಸೆಪ್ಟೆಂಬರ್ 19 ರ ವರೆಗೆ ಅವರು ತಿಹಾರ್ ಜೈಲಿನಲ್ಲೇ ಕಳೆಯಬೇಕಿದೆ.

English summary
Former central minister P Chidambaram has been given some special facilities in Tihar jail as instructed by special court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X