ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್‌ : ಸೇನೆಗೆ ಪಿ.ಚಿದಂಬರಂ ಕೇಳಿದ ಪ್ರಶ್ನೆ ಏನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಶ್ನೆಗಳು ಮುಂದುವರೆದಿವೆ. ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಸೇನೆಗೆ ಪ್ರಶ್ನೆಯನ್ನು ಕೇಳಿದ್ದಾರೆ.

'ಕಳೆದ 20 ವರ್ಷಗಳಲ್ಲಿ ಎಷ್ಟು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಲಾಗಿದೆ?' ಎಂದು ಪಿ.ಚಿದಂಬರಂ ಅವರು ಸೇನೆಯ ಮುಖ್ಯಸ್ಥರನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಪಿ.ಚಿದಂಬರಂ ಮಾಡಿರುವ ಟ್ವಿಟ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಸರ್ಜಿಕಲ್ ಸ್ಟ್ರೈಕ್‌ನಿಂದ ವಿಶ್ವಕ್ಕೆ ನಮ್ಮ ಶಕ್ತಿ ತೋರಿಸಿದೆವು : ಅಮಿತ್ ಶಾಸರ್ಜಿಕಲ್ ಸ್ಟ್ರೈಕ್‌ನಿಂದ ವಿಶ್ವಕ್ಕೆ ನಮ್ಮ ಶಕ್ತಿ ತೋರಿಸಿದೆವು : ಅಮಿತ್ ಶಾ

P Chidambaram questions for army chief about surgical strike

'ಸೇನೆಯ ಮುಖ್ಯಸ್ಥರು ಹೇಳುತ್ತಾರೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್‌ ಅಗತ್ಯವಿದೆ ಎಂದು. ಒಳ್ಳೆಯದು, ಇದು ಉತ್ತಮವಾಗಿ ತೀರ್ಮಾನ, ಆದರೆ, ಎಷ್ಟು ಸರ್ಜಿಕಲ್ ಸ್ಟ್ರೈಕ್‌ ಗಳು 20 ವರ್ಷಗಳಲ್ಲಿ ನಡೆದಿವೆ?' ಎಂದು ಪಿ.ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ

'ಸರ್ಜಿಕಲ್ ಸ್ಟ್ರೈಕ್‌ ಎನ್ನುವುದು ಅಚ್ಚರಿಯ ಅಸ್ತ್ರ ಮತ್ತು ಅದು ಹಾಗೆಯೇ ಇರಬೇಕು' ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತ

ಭಾರತ-ಪಾಕಿಸ್ತಾನ ಮಾತುಕತೆ ಮುರಿದು ಬಿದ್ದಿರುವುದನ್ನು ಸ್ವಾಗತಿಸಿರುವ ರಾವತ್ ಅವರು, 'ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

2016ರ ಸೆಪ್ಟೆಂಬರ್‌ 29ರಂದು ಸರ್ಜಿಕಲ್ ಸ್ಟ್ರೈಕ್‌ ನಡೆದಿತ್ತು. ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ನುಗ್ಗಿದ ದೇಶದ ಯೋಧರು 38 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಈ ಸೆ.29ಕ್ಕೆ ಎರಡು ವರ್ಷ ಆಗುತ್ತಿದ್ದು, ಕಾಂಗ್ರೆಸ್ ಈ ವಿಚಾರ ಇಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದೆ.

English summary
Senior Congress Leader P.Chidambaram asked the questions for Army Chief, about how many surgical strikes have taken place in the last 20 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X