ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭಾಷಣದಲ್ಲಿ 'ಚೀನಾ' ಹೆಸರೇ ಹೇಳುವುದಿಲ್ಲ ಏಕೆ?

|
Google Oneindia Kannada News

ದೆಹಲಿ, ಜುಲೈ 3: ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಬಳಿಕ ಪ್ರಧಾನಿ ಮೋದಿ ಚೀನಾ ಆಕ್ರಮಣವನ್ನು ಎಲ್ಲಿಯೂ ಒಪ್ಪಿಕೊಳ್ಳುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.

Recommended Video

China reacts to Modi's surprise visit to galwan valley | Oneindia Kannada

ವಾರದಲ್ಲಿ ಮೂರನೇ ಸಲ ಮೋದಿ ಮಾತನಾಡುತ್ತಿದ್ದಾರೆ. ಆದರೆ, ಎಲ್ಲಿಯೂ ಚೀನಾ ಆಕ್ರಮಣದ ಬಗ್ಗೆ ಶತ್ರುವಿನ ಹೆಸರು ಉಲ್ಲೇಖಿಸುತ್ತಿಲ್ಲ ಏಕೆ? ಲಡಾಖ್‌ನಲ್ಲಿ ಇಂದು ಭಾರತೀಯ ಯೋಧರ ಮುಂದೆ ಮಾತನಾಡುವ ವೇಳೆಯೂ ಚೀನಾ ಹೆಸರು ಪ್ರಸ್ತಾಪಿಸದ ಅವರ ಉದ್ದೇಶವೇನು ಎಂದು ಟ್ವೀಟ್ ಮಾಡಿದ್ದಾರೆ.

ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳುಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು

ಜೂನ್ 14 ರಂದು ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘಟನೆಯ ಕುರಿತು ಮೋದಿ ನಿಖರವಾದ ಮಾಹಿತಿ ನೀಡುತ್ತಿಲ್ಲ. ಈ ವಿಚಾರದಲ್ಲಿ ಚೀನಾವನ್ನು ಪ್ರಶ್ನಿಸುತ್ತಿಲ್ಲ. ಏಕೆ ಮೋದಿ ಮೌನವಹಿಸುತ್ತಿದ್ದಾರೆ ಎಂದು ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

P Chidambaram Questioned Why Modi Talking About An Unnamed Enemy

ಭಾರತ ಭೂ ಪ್ರದೇಶಕ್ಕೆ ಚೀನಾ ನುಗ್ಗಿದೆ. ವಾಸ್ತವ ಗಡಿ ರೇಖೆಯನ್ನು ದಾಟಿ ಲಡಾಖ್ ಆಕ್ರಮಿಸಿದೆ. ಈ ಬಗ್ಗೆ ಮೋದಿ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.

ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎನ್ನುವುದಕ್ಕೆ ಚಿತ್ರಗಳು ಸ್ಯಾಟ್‌ಲೈಟ್‌ನಲ್ಲಿ ಸೆರೆಯಾಗಿವೆ. ಈ ಬಗ್ಗೆಯೂ ಸರ್ಕಾರ ಉತ್ತರಿಸುತ್ತಿಲ್ಲ ಎಂದು ಚಿದಂಬರಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

English summary
P Chidambaram questions over PM Modi's Ladakh visit asking 'What is the purpose of talking about an unnamed ‘enemy’ to the people of India and the jawans in Ladakh?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X