ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆಯ ಕೊನೆಯನ್ನಷ್ಟೇ ಮೋದಿ ಹೇಳುತ್ತಿದ್ದಾರೆ: ಚಿದಂಬರಂ

|
Google Oneindia Kannada News

ನವದೆಹಲಿ, ಮೇ 4: ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದ ಉಗ್ರರನ್ನು ಜಾಗತಿಕ ಭಯೋತ್ಪಾದಕರು ಎಂದು ವಿಶ್ವಸಂಸ್ಥೆ ಘೋಷಣೆ ಮಾಡುವುದರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಹತ್ವದ ಯಶಸ್ಸುಗಳನ್ನು ಕಂಡಿದೆ. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿರುವುದೇ ತನ್ನ ದೊಡ್ಡ ಸಾಧನೆ ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಅಲ್ಲದೆ, ಮಸೂದ್ ಅಜರ್‌ನನ್ನು ಜಾಗತಿಕ ಉಗ್ರರ ಎಂದು ಘೋಷಿಸಲು ಒತ್ತಡ ಹೇರುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಆರಂಭಿಸಿತ್ತು. ಮೋದಿ ಆರಂಭದ ಭಾಗಗಳನ್ನು ಮರೆತು ಕಥೆಯ ಕೊನೆಯ ಭಾಗವನ್ನು ಮಾತ್ರ ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

p chidambaram masood azhar global terrorist modi talking about last scene of the story

ಏನಿದು 'ಜಾಗತಿಕ ಉಗ್ರ' ಪಟ್ಟ? ಘೋಷಣೆಯಿಂದ ಏನಾಗುತ್ತದೆ?ಏನಿದು 'ಜಾಗತಿಕ ಉಗ್ರ' ಪಟ್ಟ? ಘೋಷಣೆಯಿಂದ ಏನಾಗುತ್ತದೆ?

'ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು 2009ರಲ್ಲಿ ನಾವು ಪ್ರಕ್ರಿಯೆ ಆರಂಭಿಸಿದ್ದೆವು. 10 ವರ್ಷದ ಬಳಿಕ ಪ್ರಕ್ರಿಯೆ ಪೂರ್ಣಗೊಂಡಿದೆ. ಮಿಸ್ಟರ್ ಮೋದಿ ಅವರು ಕಥೆಯ ಕೊನೆಯ ದೃಶ್ಯವನ್ನು ಮಾತ್ರ ಹೇಳುತ್ತಿದ್ದಾರೆ. ಇದೊಂದು ರೀತಿ ಸಿನಿಮಾಕ್ಕೆ ಹೋಗಿ ಕೊನೆಯ ದೃಶ್ಯವನ್ನು ಮಾತ್ರ ನೋಡಿದಂತೆ. ಇದಕ್ಕೂ ಮೊದಲಿನ ದೃಶ್ಯಗಳ ಬಗ್ಗೆ ಏನು?' ಎಂದು ಪ್ರಶ್ನಿಸಿದ್ದಾರೆ.

ಮಸೂದ್ ಉಗ್ರ ಪಟ್ಟದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಕಾಂಗ್ರೆಸ್ ಮಸೂದ್ ಉಗ್ರ ಪಟ್ಟದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಕಾಂಗ್ರೆಸ್

ಹಫೀಜ್ ಸಯ್ಯದ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿದವರು ಯಾರು? ನೀವು ಲಖ್ವಿಯನ್ನು ಮರೆತುಹೋದಿರಾ? ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಬ್ಬರನ್ನು ಜಾಗತಿಕ ಉಗ್ರರು ಎಂದು ಘೋಷಿಸಲಾಗಿತ್ತು. ಮಸೂದ್ ಅಜರ್ ಮೊದಲಿಗನಲ್ಲ ಎಂದು ಹೇಳಿದರು.

English summary
Congress leader P Chidambaram said that, Two people were named as global terrorists when Congress was in power. Masood Azhar is not the first person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X