ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದಂಬರಂಗೆ ಜಾಮೀನು ಇಲ್ಲ; ಮಾಸ್ಕ್ ನೀಡಲು ಹೈಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ನವೆಂಬರ್ 01 : ಅನಾರೋಗ್ಯದ ಕಾರಣ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಏಮ್ಸ್ ಆಸ್ಪತ್ರೆ ಚಿದಂಬರಂರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ವರದಿ ನೀಡಿತ್ತು.

ದೆಹಲಿಯಲ್ಲಿ ವಾಯ ಮಾಲಿನ್ಯ ಅಪಾಯ ಮಟ್ಟ ಮೀರಿರುವ ಹಿನ್ನಲೆಯಲ್ಲಿ ಚಿದಂಬರಂಗೆ ಮಾಸ್ಕ್ ನೀಡಬೇಕು. ಕುಡಿಯಲು ಶುದ್ಧ ನೀರನ್ನು ತಿಹಾರ್ ಜೈಲಿನಲ್ಲಿ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ತಿಹಾರ್ ಜೈಲಿನಲ್ಲಿದ್ದ ಪಿ ಚಿದಂಬರಂ ಬಂಧಿಸಿದ ಜಾರಿ ನಿರ್ದೇಶನಾಲಯತಿಹಾರ್ ಜೈಲಿನಲ್ಲಿದ್ದ ಪಿ ಚಿದಂಬರಂ ಬಂಧಿಸಿದ ಜಾರಿ ನಿರ್ದೇಶನಾಲಯ

ಶುಕ್ರವಾರ ದೆಹಲಿ ಹೈಕೋರ್ಟ್‌ ಪಿ. ಚಿದಂಬರಂಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ. ಐಎನ್‌ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿದಂಬರಂ ತಿಹಾರ್ ಜೈಲಿನಲ್ಲಿದ್ದಾರೆ.

ಪಿ ಚಿದಂಬರಂ ವಶಕ್ಕೆ ಪಡೆಯಲು 'ಇಡಿ' ಅನುಮತಿ ಕೊಟ್ಟ ಕೋರ್ಟ್ ಪಿ ಚಿದಂಬರಂ ವಶಕ್ಕೆ ಪಡೆಯಲು 'ಇಡಿ' ಅನುಮತಿ ಕೊಟ್ಟ ಕೋರ್ಟ್

P Chidambaram Bail Plea Disposed Of

ಪಿ. ಚಿದಂಬರಂ ಹೊಟ್ಟೆ ನೋವಿನ ಕಾರಣ ಸೋಮವಾರ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಿಸಿದ ಹಿನ್ನಲೆಯಲ್ಲಿ ಹೈದರಾಬಾದ್‌ಗೆ ತೆರಳಿ ಕುಟುಂಬದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಲು ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.

'ಗ್ಯಾಸ್ ಚೇಂಬರ್ ಆದ ದೆಹಲಿ!' ಮಾಸ್ಕ್ ನೀಡಿದ ಕೇಜ್ರಿವಾಲ್'ಗ್ಯಾಸ್ ಚೇಂಬರ್ ಆದ ದೆಹಲಿ!' ಮಾಸ್ಕ್ ನೀಡಿದ ಕೇಜ್ರಿವಾಲ್

ಗುರುವಾರ ನ್ಯಾಯಾಲಯ ಪಿ. ಚಿದಂಬರಂ ಆರೋಗ್ಯದ ಬಗ್ಗೆ ವರದಿ ನೀಡಲು ಸಮಿತಿಯನ್ನು ರಚನೆ ಮಾಡಿತ್ತು. ವರದಿಯ ಅನ್ವಯ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೊಟ್ಟೆ ನೋವಿನ ಬಗ್ಗೆ ನಾಗೇಶ್ವರ ರೆಡ್ಡಿ ಅವರಿಂದ ತಪಾಸಣೆ ಮಾಡಿಸಿಕೊಳ್ಳಲು 6 ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಪಿ. ಚಿದಂಬರಂ ಮನವಿ ಮಾಡಿದ್ದರು.

English summary
Delhi High Court disposed of the plea of P.Chidambaram seeking interim bail on health grounds. Chidambaram lodged in Tihar jail in money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X