• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮಿಗಳ ದಿನದಂದು ಓಯೋ ರೂಮ್ ಬುಕ್ ಬುಕಿಂಗ್ ಭಾರಿ ಏರಿಕೆ

|

ಬೆಂಗಳೂರು, ಫೆಬ್ರವರಿ 15: ಪ್ರೇಮಿಗಳ ದಿನದಂದು ಯಾರಿಗೆ ಲಾಭವಾಯಿತೋ ಇಲ್ಲವೋ ಹೋಟೆಲ್ ಲಾಡ್ಜ್‌ಗಳ ಮಾಲೀಕರಿಗೆ ಭರ್ಜರಿ ಲಾಭವಾಗಿದೆ.

ಹೌದು, ಪ್ರೇಮಿಗಳ ದಿನದಂದು ಓಯೋ ನಲ್ಲಿ ಹೋಟೆಲ್ ರೂಂ ಬುಕಿಂಗ್ ಮಾಮೂಲಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅದರಲ್ಲಿಯೂ ದೆಹಲಿಯಲ್ಲಿ ಅತಿ ಹೆಚ್ಚು ಮಂದಿ ಓಯೋ ಮೂಲಕ ರೂಂ ಬುಕ್ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಇರುವುದು ಬೆಂಗಳೂರು!

ಪ್ರೇಮಿಗಳ ದಿನದಂದು ಪ್ರೇಮಿಗಳು ಏಕಾಂತ ಅನುಭವಿಸಲು ಓಯೋ ಆಪ್ ಮೂಲಕ ಹೊಟೆಲ್‌ಗಳ ರೂಂ ಬುಕ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ರೂಂ ಬುಕಿಂಗ್ ದ್ವಿಗುಣಗೊಂಡಿದೆ.

ಓಯೋ ನೀಡಿರುವ ಮಾಹಿತಿಯಂತೆ ಫೆಬ್ರವರಿ 14 ರಂದು ರೂಂ ಬುಕಿಂಗ್ ಪ್ರಮಾಣ 90.58% ಹೆಚ್ಚಾಗಿತ್ತಂತೆ. ಆದರೆ ಅಂದು ರೂಂ ಬುಕ್ ಮಾಡಿದವರೆಲ್ಲರೂ ಪ್ರೇಮಿಗಳೇ ಎನ್ನುವಂತಿಲ್ಲ. ಕುಟುಂಬಗಳು, ಪ್ರವಾಸಿಗರೂ ಸಹ ಅಂದು ರೂಂ ಬುಕ್ ಮಾಡಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಏಕಾಂತ ಬಯಸುವ ಪ್ರೇಮಿಗಳು ಸಹ ರೂಂ ಬುಕ್ ಮಾಡಿದ್ದಾರೆ.

ಪ್ರೇಮಿಗಳ ದಿನದಂದು ಓಯೋ ಮೂಲಕ ಲಾಡ್ಜ್ ರೂಂ ಬುಕ್ ಮಾಡಿದ ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇಯ ಸ್ಥಾನದಲ್ಲಿದೆ. ಕೋಲ್ಕತ್ತ ಮೂರು, ಹೈದರಾಬಾದ್ ನಾಲ್ಕು, ಚೆನ್ನೈ ಐದನೇಯ ಸ್ಥಾನದಲ್ಲಿದೆ.

ವಿಶ್ವದಲ್ಲಿ ಫೆಬ್ರವರಿ 14 ರಂದು ಅತಿ ಹೆಚ್ಚು ರೂಂ ಬುಕ್ ಆಗಿರುವುದು ಕೌಲಾಲಂಪುರದಲ್ಲಂತೆ.

English summary
In India Oyo room booking is doubled compare to normal days on February 14 Valentines Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X