ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!

|
Google Oneindia Kannada News

ನವದೆಹಲಿ, ಜನವರಿ 11: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಗೆ ಪ್ರತಿ ಡೋಸ್‌ಗೆ 200 ರೂ ದರ ನಿಗದಿಪಡಿಸಲಾಗಿದೆ. ಭಾರತದಲ್ಲಿ ಈ ಎರಡು ಕಂಪೆನಿಗಳ ಸಹಭಾಗಿತ್ವದಲ್ಲಿ ಲಸಿಕೆ ತಯಾರಿಕೆ, ಪ್ರಯೋಗ ಮತ್ತು ವಿತರಣೆ ನಡೆಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್, ಕೋವಿಶೀಲ್ಡ್ ದರವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಸರ್ಕಾರದೊಂದಿಗೆ ಮಾಡಿಕೊಳ್ಳಲಾದ ಬೆಲೆ ಒಪ್ಪಂದದ ಬಳಿಕ ಈ ದರವನ್ನು ನಿಗದಿಪಡಿಸಲಾಗಿದೆ. ಮೊದಲ 100 ಮಿಲಿಯನ್ ಡೋಸ್‌ಗಳನ್ನು 200 ರೂ ದಂತೆ ಸರ್ಕಾರಕ್ಕೆ ಮಾರಾಟ ಮಾಡಲಿದೆ. ಆರಂಭಿಕ ಹಂತದಲ್ಲಿ 11 ಮಿಲಿಯನ್ ಡೋಸ್ ಲಸಿಕೆಗಳನ್ನು ಅದು ಪೂರೈಕೆ ಮಾಡುವ ನಿರೀಕ್ಷೆಯಿದೆ.

ಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

'ಲಸಿಕೆಯ ದರವು ನಿಗದಿಗೊಂಡಿದೆ. ಒಪ್ಪಂದದಲ್ಲಿ ಯಾವುದೇ ಸಮಸ್ಯೆಯಿಲ್ಲ' ಎಂದಿರುವ ಎಸ್‌ಐಐ, ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಿಗ್ಗೆ ಪುಣೆಯಲ್ಲಿನ ಘಟಕದಿಂದ ಕೋವಿಶೀಲ್ಡ್ ಪೂರೈಕೆ ಆರಂಭವಾಗಲಿದೆ ಎಂದು ಹೇಳಿದೆ.

 Oxfords Covishield Price Fixed At Rs 200 Per Dose: SII To Begin Shipping Vaccine

ಪ್ರತಿ ವಾರ ಕೆಲವು ಮಿಲಿಯನ್ ಲಸಿಕೆಗಳನ್ನು ಪೂರೈಕೆ ಮಾಡಲಾಗುವುದು. ಮೊದಲ ಹಂತದಲ್ಲಿ 11 ಮಿಲಿಯನ್ ಡೋಸ್‌ಗಳಷ್ಟು ಲಸಿಕೆಗಳನ್ನು ರವಾನಿಸುವ ನಿರೀಕ್ಷೆಯಿದೆ. ಸರ್ಕಾರದ ಕಡೆಯಿಂದ ಕೆಲವು ದಾಖಲೆ ಕೆಲಸಗಳು ಬಾಕಿ ಇತ್ತು. ಈಗ ಅದು ಮುಗಿದಿದೆ. ಹೀಗಾಗಿ ಲಸಿಕೆ ಪೂರೈಕೆಗೆ ತಯಾರಿ ಶುರುವಾಗಿದೆ ಎಂದು ತಿಳಿಸಿದೆ.

ಕೊರೊನಾ ವೈರಸ್ ಲಸಿಕೆ: ನಿರ್ವಹಣೆಗೆ ನೂರೆಂಟು ಸವಾಲುಕೊರೊನಾ ವೈರಸ್ ಲಸಿಕೆ: ನಿರ್ವಹಣೆಗೆ ನೂರೆಂಟು ಸವಾಲು

ಭಾರತದ ಖಾಸಗಿ ಮಾರುಕಟ್ಟೆಗೆ ಲಸಿಕೆ ನೀಡುವುದಾದರೆ ಪ್ರತಿ ಡೋಸ್‌ಗೆ 1,000 ರೂ ವೆಚ್ಚ ತಗುಲಲಿದೆ ಎಂದು ಸೆರಮ್ ಸಂಸ್ಥೆ ಮುಖ್ಯಸ್ಥ ಅದಾರ್ ಪೂನಾವಾಲಾ ತಿಳಿಸಿದ್ದರು. ಜನವರಿ 16ರಿಂದ ಲಸಿಕೆ ಕಾರ್ಯಕ್ರಮ ನಡೆಸುವುದಾಗಿ ಸರ್ಕಾರ ತಿಳಿಸಿದೆ.

English summary
Oxford University's Coronavirus vaccine Covishield price fixed at Rs 200 per dose. Serum Institute to begin shipping of vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X