ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ಅಣಕಿಸಿದ ರಾಹುಲ್ ಗಾಂಧಿಯ ತಪ್ಪು ತಿದ್ದಿದ ಆಕ್ಸ್‌ಫರ್ಡ್‌

|
Google Oneindia Kannada News

ನವದೆಹಲಿ, ಮೇ 16: ರಾಹುಲ್ ಗಾಂಧಿ ಅವರು ಇಂದು ಬೆಳಿಗ್ಗೆ ಮೋದಿ ಅವರನ್ನು ಅಣಕಿಸುವಂತಹಾ ಟ್ವೀಟ್ ಒಂದನ್ನು ಮಾಡಿದ್ದರು. ಆದರೆ ಆ ಟ್ವೀಟ್‌ನಲ್ಲಿರುವ ಮಾಹಿತಿ ಅಪ್ಪಟ ಸುಳ್ಳು ಎಂದು ಆಕ್ಸ್‌ಫರ್ಡ್‌ ಡಿಕ್ಷನರಿ ಟ್ವೀಟ್ ಮಾಡಿದೆ.

'ಮೋದಿಲಿ' (modilie) ಎಂಬ ಹೊಸ ಪದ ಡಿಕ್ಷನರಿ ಸೇರಿದೆ ಅದರ ಅರ್ಥ ಏನೆಂದು ನೀವೇ ನೋಡಿ ಎಂದು ಸ್ಕ್ರೀನ್ ಶಾಟ್ ಅನ್ನು ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

Oxford dictionary replied to Rahul tweet and said its fake

ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದ ಸ್ಕ್ರೀನ್ ಶಾಟ್ ಪ್ರಕಾರ 'ಮೋದಿಲಿ' (modilie) ಪದದ ಅರ್ಥ, ಸತ್ಯವನ್ನು ತಿರುಚುವುದು, ಎಡಬಿಡದೆ ಸುಳ್ಳು ಹೇಳುವುದು ಎಂದಾಗಿತ್ತು, ಆದರೆ ಆ ರೀತಿಯ ಯಾವುದೇ ಪದ ಆಕ್ಸ್‌ಪರ್ಡ್‌ ಡಿಕ್ಷನರಿಯಲ್ಲಿ ಇಲ್ಲ ಎಂದು ಸ್ವತಃ ಆಕ್ಸ್‌ಪರ್ಡ್‌ ಡಿಕ್ಷನರಿ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯನ್ನು ನೀಡಿದೆ.

ಮೋದಿ ಅವರನ್ನು ಅಣಕಿಸಲು ಹೋಗಿ ರಾಹುಲ್ ಗಾಂಧಿ ಪೇಚಿಗೆ ಸಿಲುಕಿದಂತಾಗಿದೆ. ರಾಹುಲ್ ಗಾಂಧಿ ಅವರ ಈ ಟ್ವೀಟ್‌ಗೆ ಹಲವು ಪ್ರತಿಕ್ರಿಯೆ ಬಂದಿದ್ದು, ಹಲವರು ರಾಹುಲ್ ಅವರನ್ನು ವ್ಯಂಗ್ಯ ಮಾಡಿದ್ದಾರೆ.

English summary
AICC president Rahul Gandhi tweeted a word 'modilie' and said its used for person who lie always. But Oxford dictionary replied to Rahul's tweet and said there no such word as 'modilie' in its dictionary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X