• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ 2,3ನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಒಪ್ಪಿಗೆ

|

ನವದೆಹಲಿ, ಆಗಸ್ಟ್ 03: ಭಾರತದಲ್ಲಿ ಮಾನವನ ಮೇಲೆ ಆಕ್ಸ್‌ಫರ್ಡ್ ಲಸಿಕೆ ಕೊವಿಶೀಲ್ಡ್(ಅಸ್ಟ್ರಾಜೆನೆಕಾ) ನ 2 ಹಾಗೂ 3ನೇ ಹಂತದ ಪ್ರಯೋಗ ನಡೆಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸಮ್ಮತಿ ನೀಡಿದೆ.

ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಸಬ್ಜಕ್ಟ್ ಎಕ್ಸ್ಪರ್ಟ್ ಕಮಿಟಿ ಸೂಚನೆ ಮೇರೆಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ 2 ಹಾಗೂ 3ನೇ ಹಂತದ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಅನುಮತಿ ದೊರೆತಿದೆ.

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?

ಕಳೆದ ವಾರ ಈ ಕುರಿತು ವರ್ಚುವಲ್ ಸಭೆ ನಡೆದಿತ್ತು, ಒಂದು ಹಾಗೂ ಎರಡನೇ ಹಂತದ ಪ್ರಯೋಗದ ಫಲಿತಾಂಶ ನೋಡಿದ ಬಳಿಕ ಕೊವಿಶೀಲ್ಡ್ ಎರಡು ಹಾಗೂ ಮೂರನೇ ಹಂತಕ್ಕೆ ಅನುಮತಿ ನೀಡಲಾಗಿದೆ.

ಮೊದಲ ಲಸಿಕೆಯನ್ನು ಮೊದಲ ದಿನ ಹಾಗೂ ಮತ್ತೊಂದು ಲಸಿಕೆಯನ್ನು ಜುಲೈ 29ರಂದು ನೀಡಲಾಗಿತ್ತು. ನಾಲ್ಕು ವಾರಗಳಲ್ಲಿ ಎರಡು ಬಾರಿ ಲಸಿಕೆಯನ್ನು ನೀಡಲಾಗುತ್ತದೆ.

ಲಸಿಕೆಯನ್ನು ಭಾರತದಲ್ಲಿ ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೊತೆಗೆ ಸಂಬಂಧ ಹೊಂದಿದೆ. ಈಗ ನಡೆಯುತ್ತಿರುವ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಔಷಧ ಮಾತ್ರ ಘನಾತ್ಮಕ ಪ್ರತಿಕ್ರಿಯೆ ಕೊಟ್ಟಿದೆ. ಹಾಗೆಯೇ ಕೊನೆಯ ಹಂತದ ಪ್ರಯೋಗವಷ್ಟೇ ಬಾಕಿ ಇದೆ ಎಂದಿದ್ದಾರೆ.

English summary
India's top Drug Controller General Of India has Granted permission to Serum Institute of India to conduct Phase 2and3 Human clinical trial in India on Potential Covid 19 Vaccinne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X