ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ: 2,09,032 ಶೆಲ್ ಕಂಪನಿಗಳ ಅಕ್ರಮ ಬೆನ್ನತ್ತಿದ್ದ ಕೇಂದ್ರ

By Sachhidananda Acharya
|
Google Oneindia Kannada News

ನವದೆಹಲಿ, ಅಕ್ಟೋಬರ್ 6: ಕಪ್ಪು ಹಣ ಮತ್ತು ಶೆಲ್ ಕಂಪನಿಗಳ ಮೇಲಿನ ಯುದ್ಧ ಹೊಸ ತಿರುವು ಪಡೆದುಕೊಂಡಿದೆ. ಅಪನಗದೀಕರಣದ ಸಮಯದಲ್ಲಿ ಅಕ್ರಮ ಎಸಗಿದ ಅನುಮಾನಗಳಿರುವ 2,09,032 ಕಂಪನಿಗಳ ವ್ಯವಹಾರಗಳನ್ನು ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ.

ಈ ಸಂಬಂಧ ಬ್ಯಾಂಕ್ ಗಳೂ ಮಾಹಿತಿ ನೀಡಿದ್ದು ಈ ಕಂಪನಿಗಳಲ್ಲಿ 5,800 ಕಂಪನಿಗಳ ಬ್ಯಾಂಕ್ ವ್ಯವಹಾರವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಎಂದು ನೀಡಿವೆ.

ಮೊದಲ ಹಂತದಲ್ಲಿ 13,140 ಖಾತೆಗಳ ಪರಿಶೀಲನೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಇವುಗಳಲ್ಲಿ ಕೆಲವು ಕಂಪನಿಗಳು 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಒಂದು ಕಂಪನಿಯ ಹೆಸರಿನಲ್ಲಂತೂ 2,134 ಬ್ಯಾಂಕ್ ಖಾತೆಗಳಿವೆ.

Over two lakh firms under scrutiny for post-demonetisation transactions

ಸಾಲದ ಮೊತ್ತವನ್ನು ಹೊರತು ಪಡಿಸಿದರೆ ಈ ಬ್ಯಾಂಕ್ ಖಾತೆಗಳಲ್ಲಿ ನವೆಂಬರ್ 8, 2016ಕ್ಕೂ ಮೊದಲು ಕೇವಲ 22.05 ಕೋಟಿ ರೂಪಾಯಿ ಠೇವಣಿ ಇತ್ತು. ಆದರೆ ನವೆಂಬರ್ 9ರ ನಂತರ ಈ ಖಾತೆಗಳಲ್ಲಿ 4,573.87 ಕೋಟಿ ರೂಪಾಯಿ ಜಮೆ ಮಾಡಲಾಗಿತ್ತು.

ಸಾಲದ ಖಾತೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಖಾತೆಗಳಲ್ಲಿ 80.79 ಕೋಟಿ ಋಣಾತ್ಮಕ ಮೊತ್ತವಿತ್ತು. ಹೀಗಿರುವಾಗ ಏಕಾಏಕಿ ಅಪನಗದೀಕರಣದ ವೇಳೆ ದೊಡ್ಡ ಮೊತ್ತದ ಹಣ ಇಟ್ಟಿದ್ದು ಅನುಮಾನ ಹುಟ್ಟು ಹಾಕಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.

ಈ ಖಾತೆಗಳನ್ನು ಭಾರೀ ಮೊತ್ತದ ಹಣದ ವರ್ಗಾವಣೆಗಳು ಕಂಡು ಬರುತ್ತಿದ್ದಂತೆ ಕಂಪೆನಿಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಕೆಲವು ಕಂಪನಿಗಳು ಎಷ್ಟರ ಮಟ್ಟಿಗೆ ಖತರ್ನಾಕ್ ಇವೆ ಎಂದರೆ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರವೂ ಠೇವಣಿ ಮತ್ತು ಹಣ ಹಿಂಪಡೆಯುವುದು ನಡೆಸಲಾಗಿದೆ.

ಒಂದು ಬ್ಯಾಂಕ್ ನಲ್ಲಿ ನವೆಂಬರ್ 8ಕ್ಕೂ ಮೊದಲು ಅಂದರೆ ಅಪನಗದೀಕರಣದ ಮೊದಲು 429 ಖಾತೆಗಳಲ್ಲಿ ಶೂನ್ಯ ಠೇವಣಿ ಇತ್ತು. ಯಾವಾಗ ಅನಗದೀಕರಣ ಘೋಷಣೆಯಾಯ್ತೋ ಈ ಖಾತೆಗಳಿಗೆ 11 ಕೋಟಿ ರೂಪಾಯಿ ಹಣ ಹಾಕಿ ಅದನ್ನು ಡ್ರಾ ಮಾಡಲಾಗಿದೆ. ಈ ಖಾತೆಗಳನ್ನು ಸ್ಥಗಿತಗೊಳಿಸುವಾಗ ಖಾತೆಯಲ್ಲಿ ಉಳಿದಿದ್ದು 42,000 ರೂಪಾಯಿ ಮಾತ್ರ!

ಹಾಗೆ ನೋಡಿದರೆ ಅನುಮಾನಾಸ್ಪದ ಕಂಪನಿಗಳಲ್ಲಿ ಈಗ ಪಟ್ಟಿ ಮಾಡಿರುವ ಕಂಪೆನಿಗಳು ಶೇಕಡಾ 2.5 ಮಾತ್ರ. ಇನ್ನೂ 97.5 ಶೇಕಡಾ ಕಂಪನಿಗಳು ಬಾಕಿ ಇದ್ದು ಅವುಗಳ ವ್ಯವಹಾರದ ಬಗ್ಗೆ ಇನ್ನೂ ಗಮನ ಹರಿಸಿಲ್ಲ.

ಈ ಹಿನ್ನಲೆಯಲ್ಲಿ ತನಿಖಾ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ತನಿಖೆ ಮಾಡಿ ಮುಗಿಸುವಂತೆ ಸೂಚಿಸಲಾಗಿದೆ.

English summary
The fight against black money and shell companies has taken a fresh twist with the Centre confirming that post-demonetisation some 2,09,032 companies are under scrutiny for their transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X