• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

450 ವರ್ಷಗಳ ಹಿಂದೆ ಮೋದಿ ಬಗ್ಗೆ ನಾಸ್ಟ್ರಡಾಮಸ್ ನುಡಿದಿದ್ದ ಭವಿಷ್ಯ!

|

ಸುಮಾರು ನಾಲ್ಕುವರೆ ಶತಮಾನಗಳ ಹಿಂದೆಯೇ ಭಾರತದಲ್ಲಿ ನರೇಂದ್ರ ಮೋದಿ ಆಡಳಿತ ಬರಲಿದೆ ಎಂದು ಫ್ರೆಂಚ್ ಪ್ರವಾದಿ, ಕಾಲಜ್ಞಾನಿ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದರೇ?

ಮಹಾನ್ ವ್ಯಕ್ತಿಯೊಬ್ಬರು ಭಾರತವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಆಡಳಿತದ ಆರಂಭದಲ್ಲಿ ಇವರನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಿದ್ದರೂ, ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವ ಗುಣದಿಂದಾಗಿ ಇವರನ್ನು ಎಲ್ಲರೂ ಪ್ರೀತಿಸುತ್ತಾರೆ. (ಹೊಸವರ್ಷದಲ್ಲಿ ಕೋಡಿಶ್ರೀಗಳ ಮೊದಲ ಭವಿಷ್ಯ)

2014 ರಿಂದ 2026ರ ವರೆಗೆ ಭಾರತದಲ್ಲಿ ಮೋದಿ ಶಕೆಯಿರಲಿದೆ ಎಂದು ನಾಸ್ಟ್ರಡಾಮಸ್ ಭವಿಷ್ಯವಾಣಿಯನ್ನು ಉಲ್ಲೇಖಿಸಿ ಕೇಂದ್ರ ಸಚಿವ (ಗೃಹ ಇಲಾಖೆ) ಕಿರಣ್ ರಿಜಿಜು ಹೇಳಿದ್ದಾರೆ. (ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ)

ಇಸವಿ 1555ರಲ್ಲಿ ನಾಸ್ಟ್ರಡಾಮಸ್ ಈ ಭವಿಷ್ಯ ನುಡಿದಿದ್ದರು ಎಂದು ರಿಜೆಜು ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ‘Amazing Facts' ಶೀರ್ಷಿಕೆಯಡಿಯಲಿ ರಿಜೆಜು ಕೆಲವೊಂದು ಮಾಹಿತಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಧ್ಯವಯಸ್ಸಿನ ನಾಯಕ

ಮಧ್ಯವಯಸ್ಸಿನ ನಾಯಕ

ಮಧ್ಯ ವಯಸ್ಸಿನ ನಾಯಕರೊಬ್ಬರು ಭಾರತವನ್ನು ಮುನ್ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಆತ ಜಗತ್ತಿನ 'ಸೂಪರ್ ಪವರ್' ನಾಯಕನಾಗುತ್ತಾನೆ. ವಿಶ್ವದ ಹಲವಾರು ದೇಶಗಳಿಗೆ ಭಾರತ ಆಸರೆಯಾಗಲಿದೆ.

ಜಾಗತಿಕ ವಿದ್ಯಮಾನಗಳು

ಜಾಗತಿಕ ವಿದ್ಯಮಾನಗಳು

ನಾಸ್ಟ್ರಡಾಮಸ್ ಹದಿನಾರನೇ ಶತಮಾನದಲ್ಲೇ ವಿಶ್ವದಲ್ಲಿ ಮುಂದಾಗುವ ಪ್ರಮುಖ ವಿದ್ಯಮಾನಗಳ ಬಗ್ಗೆ (ಫ್ರೆಂಚ್ ಕ್ರಾಂತಿ, ಹಿರೋಶಿಮಾ ಅಣುಬಾಂಬ್ ದಾಳಿ, ಅಮೆರಿಕ ಮೇಲೆ ಉಗ್ರರ ದಾಳಿ) ಹೇಳಿದ್ದಾರೆಂದು ಜನ ನಂಬುತ್ತಾರೆಂದು ಅರುಣಾಚಲ ಪ್ರದೇಶದ ಸಂಸದರೂ ಆಗಿರುವ ಕಿರಣ್ ರಿಜೆಜು ತನ್ನ ಫೇಸ್ ಬುಕ್ ಟೈಂಲೈನಿನಲ್ಲಿ ಬರೆದುಕೊಂಡಿದ್ದಾರೆ.

ಹದಿಮೂರು ಸಂಖ್ಯಾಶಾಸ್ರ

ಹದಿಮೂರು ಸಂಖ್ಯಾಶಾಸ್ರ

ರಾಜಕೀಯಕ್ಕೆ ಮತ್ತು ಸಂಖ್ಯಾಶಾಸ್ತ್ರ ಮಹತ್ವದ್ದು ಎಂದು ಹೇಳಿರುವ ರಿಜೆಜು, ಅದಕ್ಕೆ ಲೋಕಸಭೆಯಲ್ಲಿ ಈಗಿರುವ ಪಕ್ಷಗಳ ಬಲಾಬಲವನ್ನು ತಾಳೆ ಮಾಡಿ ಬರೆದಿದ್ದಾರೆ. ರಿಜೆಜು ಲೆಕ್ಕಾಚಾರದ ಫೇಸ್ ಬುಕ್ ಪೋಸ್ಟ್ ಇಲ್ಲಿ ಹಾಕಲಾಗಿದೆ..

ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್

ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್

ಹದಿನಾರನೇ ಶತಮಾನದಲ್ಲಿ ಬದುಕಿದ್ದ ಫ್ರೆಂಚ್ ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಈ ರೀತಿ ಭವಿಷ್ಯ ನುಡಿದಿದ್ದು 1555ನೇ ಇಸವಿಯಲ್ಲಿ. ಮಧ್ಯ ವಯಸ್ಸಿನ ಆ ವ್ಯಕ್ತಿಯ ಆಡಳಿತ ದೇಶ ಮತ್ತು ವಿಶ್ವಕ್ಕೂ ಸುವರ್ಣಯುಗವನ್ನು ತರಲಿದೆ ಎಂದು ರಿಜಿಜು ತನ್ನ ಟೈಂಲೈನಿನಲ್ಲಿ ಬರೆದುಕೊಂಡಿದ್ದಾರೆ.

ಕೋಡಿಶ್ರೀ ಭವಿಷ್ಯ

ಕೋಡಿಶ್ರೀ ಭವಿಷ್ಯ

ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಹಲವು ಕಂಟಕಗಳು ಎದುರಾಗಲಿವೆ. 'ನಡೆಯುವ ಹಾದಿ ಮೂರು ಭಾಗವಾದೀತು' ಎಂದು ಕೋಡಿ ಮಠದ ಶ್ರೀಗಳು ಮೋದಿ ಸರಕಾರಕ್ಕೆ ಕಳೆದ ವರ್ಷ ಎಚ್ಚರಿಕೆಯ ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than 450 years ago, French seer Nostradamus predicted that Prime Minister Narendra Modi will rule India from 2014 to 2026, says Union minister Kiren Rijiju in his Facebook timeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more