ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆ, ಯಾವ ರಾಜ್ಯದಲ್ಲಿ ಎಷ್ಟು?

|
Google Oneindia Kannada News

ನವದೆಹಲಿ, ಜೂನ್ 23: ದೇಶದಲ್ಲಿ ಇದುವರೆಗೆ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Recommended Video

ಅಧಿಕಾರಿಗಳ ಮಾತಿನಿಂದ ಬಯಲಾಯ್ತು ಅಬಕಾರಿ ಸಚಿವರ ಬಂಡವಾಳ | Oneindia Kannada

ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿತ್ತು,ಈ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ, ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಲಾಗಿದೆ.

ಮೂರನೇ ಅಲೆಗೆ ಪ್ರಚೋದನೆಯೇ ಮೂರನೇ ಅಲೆಗೆ ಪ್ರಚೋದನೆಯೇ "ಡೆಲ್ಟಾ ಪ್ಲಸ್"? ಇದರ ಲಕ್ಷಣಗಳೇನು?

ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3 ಪ್ರಕರಣಗಳು, ತಮಿಳುನಾಡಿನಲ್ಲಿ ಮೂರು ಪ್ರಕರಣಗಳು, ಕರ್ನಾಟಕದಲ್ಲಿ 2 ಪ್ರಕರಣಗಳು, ಪಂಜಾಬ್, ಆಂಧ್ರಪ್ರದೇಶ ಹಾಗೂ ಜಮ್ಮುವಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

 ಡೆಲ್ಟಾ ಪ್ಲಸ್ ಪ್ರಕರಣ ಹೆಚ್ಚುವ ಸಾಧ್ಯತೆ

ಡೆಲ್ಟಾ ಪ್ಲಸ್ ಪ್ರಕರಣ ಹೆಚ್ಚುವ ಸಾಧ್ಯತೆ

'ಡೆಲ್ಟಾ ಪ್ಲಸ್' ಪ್ರಕರಣಗಳು ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಇದ್ದರೂ ಕೂಡ ಈಗ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಕಾರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

 ಯಾವ್ಯಾವ ರಾಜ್ಯಗಳಲ್ಲಿ ಪ್ರಕರಣಗಳಿವೆ

ಯಾವ್ಯಾವ ರಾಜ್ಯಗಳಲ್ಲಿ ಪ್ರಕರಣಗಳಿವೆ

ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಡೆಲ್ಟಾ ಪ್ಲಸ್ ಪ್ರಕರಣಗಳು ಮಹಾರಾಷ್ಟ್ರದ ರತ್ನಗಿರಿ, ಜಲಗಾಂವ್, ಕೇರಳದ ಪಾಲಕ್ಕಾಡ್, ಪಟ್ಟಣಂತಿಟ್ಟ, ಮಧ್ಯಪ್ರದೇಶದ ಭೋಪಾಲ್ ಮತ್ತು ಶಿವಪುರಿಯಲ್ಲಿ ಪತ್ತೆಯಾಗಿದೆ. ದೇಶದ ಮೂರು ರಾಜ್ಯಗಳಲ್ಲಿ ಇದುವರೆಗೆ ಪತ್ತೆಯಾದ ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕಾಳಜಿಯ ರೂಪಾಂತರವೆಂದು ವರ್ಗೀಕರಿಸಿದೆ. ರೂಪಾಂತರ ಪತ್ತೆಯಾದ ಕ್ಲಸ್ಟರ್‌ಗಳಲ್ಲಿ ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.

 ಕೋವಿಡ್ ಲಸಿಕೆಯ ಒಂದು ಡೋಸ್ ಪರಿಣಾಮಕಾರಿ

ಕೋವಿಡ್ ಲಸಿಕೆಯ ಒಂದು ಡೋಸ್ ಪರಿಣಾಮಕಾರಿ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ICMR-NIE) ಹೊಸ ವಿಶ್ಲೇಷಣೆಯ ಪ್ರಕಾರ, ಕೊವಿಡ್ 19 ಲಸಿಕೆಯ ಒಂದು ಡೋಸ್ ಸಾವುಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಒಂದು ಮತ್ತು ಎರಡು ಡೋಸ್​​ಗಳೊಂದಿಗೆ ಕೊವಿಡ್ -19 ಸಾವುಗಳನ್ನು ತಡೆಗಟ್ಟುವಲ್ಲಿ ಲಸಿಕೆ ಪರಿಣಾಮಕಾರಿತ್ವ ಶೇ 82 ಮತ್ತು ಶೇ 95 ರಷ್ಟಿದೆ.

‘ತಮಿಳುನಾಡಿನಲ್ಲಿರುವ ಹೆಚ್ಚಿನ ಅಪಾಯಕಾರಿ ಗುಂಪುಗಳಲ್ಲಿ ಸಾವುಗಳನ್ನು ತಡೆಗಟ್ಟುವಲ್ಲಿ ಕೋವಿಡ್ -19 ಲಸಿಕೆ ಪರಿಣಾಮಕಾರಿತ್ವ' ಎಂಬ ಅಧ್ಯಯನವನ್ನು ಜೂನ್ 21 ರಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ.
 ಕೋವಿಡ್ ಲಸಿಕೆ ವಿತರಣೆಯಲ್ಲಿ ಕುಸಿತ

ಕೋವಿಡ್ ಲಸಿಕೆ ವಿತರಣೆಯಲ್ಲಿ ಕುಸಿತ

ಜೂನ್ 21 ರಂದು 88.09 ಲಕ್ಷ ಡೋಸ್ ವಿತರಣೆ ಮೂಲಕ ದಾಖಲೆ ಸೃಷ್ಟಿಸಿದ್ದರೂ ಲಸಿಕೆ ವಿತರಣೆ ಶೇ.40ರಷ್ಟು ಡೋಸ್​ ಕುಸಿತ ಕಂಡಿದೆ. ಇದರೊಂದಿಗೆ ದೇಶದಲ್ಲಿ ಇಲ್ಲಿಯವರೆಗೆ 29,46,39,511 ಲಸಿಕೆ ಡೋಸ್ ನೀಡಲಾಗಿದೆ.

ಜೂನ್ 21 ರಂದು 17.14 ಲಕ್ಷ ಡೋಸ್ ನೀಡಿದ್ದ ಮಧ್ಯಪ್ರದೇಶ ಮಂಗಳವಾರ ಕೇವಲ 4,800 ವ್ಯಕ್ತಿಗಳಿಗೆ ಮಾತ್ರ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದೆ.


ಅದೇ ರೀತಿ ಸೋಮವಾರ 11.38 ಲಕ್ಷ ವ್ಯಾಕ್ಸಿನೇಷನ್ ಹೊಂದಿರುವ ಕರ್ನಾಟಕ, ಒಂದು ದಿನದ ನಂತರ 3.78 ಲಕ್ಷ ಡೋಸ್ ಲಸಿಕೆ ನೀಡಿತು. ಉತ್ತರ ಪ್ರದೇಶವು ಇದೇ ಮಟ್ಟವನ್ನು ಕಾಯ್ದುಕೊಂಡರೆ, ಬಿಹಾರ (5.75 ಲಕ್ಷದಿಂದ 2.62 ಲಕ್ಷಕ್ಕೆ) ಮತ್ತು ಹರಿಯಾಣ (5.15 ಲಕ್ಷದಿಂದ 75,000 ಪ್ಲಸ್) ವ್ಯಾಕ್ಸಿನೇಷನ್ ಸಂಖ್ಯೆಯಲ್ಲಿ ಸ್ಪಷ್ಟ ಕುಸಿತ ಹೊಂದಿರುವ ರಾಜ್ಯಗಳಲ್ಲಿ ಸೇರಿವೆ.
ಇದರ ನಡುವೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಂಕಿ ಅಂಶಗಳ ಪ್ರಕಾರ ಮಂಗಳವಾರ 1,901,056 ಮಾದರಿಗಳನ್ನು ಪರೀಕ್ಷಿಸಲಾಗಿದೆ ಜೂನ್ 20 ರಂದು 1,664,360 ಕ್ಕೆ ಹೋಲಿಸಿದರೆ, ಒಟ್ಟು 395,973,198 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

English summary
There are over 40 cases in the country of the new Delta Plus strain, which has been tagged as a "Variant of Concern" by the government, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X