ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ತುಂಬಾ 4 ಲಕ್ಷ ಭಿಕ್ಷುಕರು, ಪಶ್ಚಿಮ ಬಂಗಾಳದಲ್ಲೇ ಅಧಿಕ

|
Google Oneindia Kannada News

ನವದೆಹಲಿ, ಮಾರ್ಚ್ 11: ದೇಶದ ತುಂಬಾ ಇರುವ ಭಿಕ್ಷುಕರ ಗಣತಿ ಮಾಡಿ ಅಂಕಿ ಅಂಶವನ್ನು ರಾಜ್ಯಸಭೆಯಲ್ಲಿ ಸರ್ಕಾರ ಹಂಚಿಕೊಂಡಿದೆ. ಸಾಮಾಜಿಕ ನ್ಯಾಯ ಖಾತೆ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲೆ ಅಧಿಕ ಮಂದಿ ಭಿಕ್ಷುಕರಿದ್ದಾರೆ.

ಚುನಾವಣೆ ಬಿಸಿಯಲ್ಲಿರುವ ಪಶ್ಚಿಮ ಬಂಗಾಳದಲ್ಲಿ 81, 244 ಮಂದಿ ಭಿಕ್ಷುಕರನ್ನು ಗುರುತಿಸಲಾಗಿದ್ದು, ಲಕ್ಷದೀಪದಲ್ಲಿ ಇಬ್ಬರು ಮಾತ್ರ ಕಾಣಿಸಿಕೊಂಡಿದ್ದಾರೆ ಎಂದು 2011ರ ಗಣತಿಯ ಲೆಕ್ಕಾಚಾರವನ್ನು ಸಚಿವರು ಸದನದ ಮುಂದಿಟ್ಟರು.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿ, 2011ರ ಗಣತಿ ಪ್ರಕಾರ, ದೇಶದಲ್ಲಿ 4,13,670 ಭಿಕ್ಷುಕರಿದ್ದು, 2,21,673 ಪುರುಷರು ಹಾಗೂ 1,91,997 ಮಂದಿ ಮಹಿಳೆಯರು ಬೇಡಿಕೊಂಡು ದಿನ ಸಾಗುತ್ತಿದ್ದಾರೆ ಎಂದಿದ್ದಾರೆ.

Over 4 lakh beggars in India, West Bengal ranks top: Govt informs Rajya Sabha

ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ 81, 244 ಮಂದಿ ಭಿಕ್ಷುಕರು, ಉತ್ತರ ಪ್ರದೇಶದಲ್ಲಿ 65,835 ಮಂದಿ, ಆಂಧ್ರಪ್ರದೇಶದಲ್ಲಿ 30,218 ಮಂದಿ, ಬಿಹಾರದಲ್ಲಿ 29,723, ಮಧ್ಯಪ್ರದೇಶದಲ್ಲಿ 28,695, ರಾಜಸ್ಥಾನದಲ್ಲಿ 25,853 ಅತ್ಯಧಿಕ ಮಂದಿ ಭಿಕ್ಷುಕರಿದ್ದಾರೆ. ದೆಹಲಿಯಲ್ಲಿ 2,187 ಹಾಗೂ ಚಂದೀಗಢದಲ್ಲಿ 121 ಮಂದಿ ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

English summary
India has over 4 lakh beggars, with the highest 81,244 beggars in West Bengal, while Lakshadweep merely has two vagrants according to the 2011 census, Union Social Justice Minister Thawar Chand Gehlot informed the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X