ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದಲ್ಲಿ ಹಂದಿಜ್ವರಕ್ಕೆ 40 ಜನ ಬಲಿ

|
Google Oneindia Kannada News

ನವದೆಹಲಿ, ಜ, 18: ಮರೆಯಾಗಿದ್ದ ಮಹಾಮಾರಿ ಹಂದಿ ಜ್ವರ ಮತ್ತೆ ಕಾಣಿಸಿಕೊಂಡಿದೆ. ದೆಹಲಿಯಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತ ಒಟ್ಟು 250ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಈಗಾಗಲೇ 40 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.

ದೆಹಲಿ, ರಾಜಸ್ಥಾನ, ಹರ್ಯಾಣದಲ್ಲಿ ರೋಗ ಆತಂಕ ಸೃಷ್ಟಿಸಿದೆ. ಆಂಧ್ರ ಪ್ರದೇಶದಲ್ಲೂ ರೋಗ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.[ರೋಗಿಗಳಿಗೆ ಆಸ್ಪತ್ರೆ ಆವರಣದಲ್ಲೇ ಬೆಳೆದ ಸಾವಯವ ಆಹಾರ]

h1n1

ರೋಗಪತ್ತೆ ಪರೀಕ್ಷೆಗಾಗಿ ಕೇಂದ್ರ ಹೆಚ್ಚುವರಿ ನಾಲ್ಕು ಲ್ಯಾಬೊರೇಟರಿ ತೆರೆದಿದೆ. ಹಂದಿ ಜ್ವರ ತಡೆಗೆ ಅಗತ್ಯವಿರುವ ಔಷಧಿಗಳನ್ನು ಎಲ್ಲೆಡೆ ಪೂರೈಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಕಾಏಕಿ ದೇಶದಲ್ಲಿ ಉಷ್ಣತೆ ತಗ್ಗಿದ್ದು ಜ್ವರ ಹರಡುವಿಕೆಗೆ ಕಾರಣವಾಗಿದೆ. ಆಸ್ತಮ, ಹೃದಯ ಸಂಬಂಧಿ ತೊಂದರೆ ಮತ್ತು ಕಿಡ್ನಿ ಸಮಸ್ಯೆ ಇರುವವರುನ್ನು ಹೆಚ್ಚಾಗಿ ಕಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಂದಿಜ್ವರ ಬಂದಾಗಿನ ಲಕ್ಷಣಗಳೇನು?
* ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ತಲೆ ನೋವು, ಚಳಿ, ಸುಸ್ತು
* ವಾಂತಿ-ಭೇದಿಯೂ ಆಗಬಹುದು.
* ನ್ಯುಮೋನಿಯಾ ಮತ್ತು ಶ್ವಾಸಕೋಶದ ವಿಫಲತೆಯಿಂದ ಸಾವು ಸಂಭವಿಸಬಹುದು.

ಹರಡುವುದು ಹೇಗೆ?
ಸೊಂಕಿತರು ಕೆಮ್ಮಿದ್ದಾಗ ಮತ್ತು ಸೀನಿದಾಗ ವೈರಸ್ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಕೆಲವು ಸಲ ವೈರಸ್ ತಗುಲಿರುವ ವಸ್ತುವನ್ನು ಮುಟ್ಟಿ ಅದೆ ಕೈಯನ್ನು ಬಾಯಿ ಅಥವ ಮೂಗಿನ ಹತ್ತಿರ ಇಟ್ಟು ಕೊಂಡರೂ ಸೋಂಕು ತಗುಲಬಹುದು. ಒಟ್ಟಡಿನಲ್ಲಿ ಇದೊಂದು ಸಾಂಕ್ರಾಮಿಕ ರೋಗ.

English summary
Swine flu seems to be increasing at an alarming rate throughout the country with the national capital having recorded more than 100 cases this year alone. The overall cases have been recorded in the country has crossed 250 with the death toll over 40. The Health Ministry said that it has placed an order for procuring 30,000 doses of the drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X