ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಟೆರರಿಸ್ಟ್ - 2017: ಸೈನಿಕರಿಗೆ ಗುಂಡಿಗೆ 200 ಉಗ್ರರ ಬಲಿ

By Sachhidananda Acharya
|
Google Oneindia Kannada News

ಶ್ರೀನಗರ, ನವೆಂಬರ್ 30: ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 200 ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.

ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಈ ಕುರಿತು ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್.ಪಿ ವಾಯಿದ್, "ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಸಿಆರ್ ಪಿಎಫ್, ಸಿಎಪಿಎಫ್ ಮತ್ತು ಜನರ ಪ್ರಯತ್ನದಿಂದಾಗಿ 2017ರಲ್ಲಿ 200ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ," ಎಂದು ಹೇಳಿದ್ದಾರೆ.

Over 200 militants killed in J&K in 2017, says DGP Vaid

ಬುದ್ಗಾಮ್ ಮತ್ತು ಬಾರಾಮುಲ್ಲಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಐವರು ಉಗ್ರರು ಸಾವಿಗೀಡಾದ ಬೆನ್ನಿಗೆ ವಾಯಿದ್ ಈ ಟ್ವೀಟ್ ಮಾಡಿದ್ದಾರೆ.

ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು?!ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು?!

ಅಧಿಕೃತ ದಾಖಲೆಗಳ ಪ್ರಕಾರ 2017ರ ಜನವರಿ 1ರಿಂದ ಇಲ್ಲಿಯವರೆಗೆ 200 ಉಗ್ರರನ್ನು ಕೊಲ್ಲಲಾಗಿದೆ. ಇದು 2010ರ ನಂತರ ವರ್ಷವೊಂದರಲ್ಲಿ ಬಲಿಯಾದ ಉಗ್ರರ ಅತೀ ದೊಡ್ಡ ಸಂಖ್ಯೆಯಾಗಿದೆ.

2010ರಲ್ಲಿ 270 ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರೆ ನಂತರದ ದಿನಗಳಲ್ಲಿ ಈ ಸಂಖ್ಯೆ 100ಕ್ಕೆ ಇಳಿದಿತ್ತು. ಇದಾದ ಬಳಿಕ 2016ರಲ್ಲಿ 165 ಉಗ್ರರು ಹತ್ಯೆಯಾಗಿದ್ದರು.

ಇದೇ ವೇಳೆ ಉಗ್ರರ ದಾಳಿಗೆ ಹೆಚ್ಚಿನ ಸಾರ್ವಜನಿಕರೂ ಈ ವರ್ಷ ಬಲಿಯಾಗಿದ್ದಾರೆ. ಕಳೆದ ವರ್ಷ 14 ಸಾರ್ವಜನಿಕರು ಉಗ್ರರ ದಾಳಿಗೆ ಬಲಿಯಾಗಿದ್ದರೆ ಈ ವರ್ಷ 54 ಜನರು ಸಾವಿಗೀಡಾಗಿದ್ದಾರೆ.

ಇನ್ನು 77 ಸೈನಿಕರೂ ಈ ವರ್ಷ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಕಳೆದ ವರ್ಷ 88 ಸೈನಿಕರು ಬಲಿಯಾಗಿದ್ದರು. ಹಾಗಾಗಿ ಈ ವರ್ಷ ಸೈನಿಕರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

English summary
For the first time in seven years, the number of militants killed in counter-insurgency operations in Jammu and Kashmir has crossed 200, according to the state police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X