ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,700ಕ್ಕೂ ಅಧಿಕ ವಲಸೆ ಪಕ್ಷಿಗಳ ನಿಗೂಢ ಸಾವು

|
Google Oneindia Kannada News

ಶಿಮ್ಲಾ, ಜನವರಿ 5: ಹಿಮಾಚಲ ಪ್ರದೇಶದ ಪ್ರಸಿದ್ಧ ಪೊಂಗ್ ಡಮ್ ಪಕ್ಷಿಧಾಮದಲ್ಲಿ 1,700ಕ್ಕೂ ಅಧಿಕ ವಲಸೆ ಹಕ್ಕಿಗಳು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದು, ಅಧಿಕಾರಿಗಳನ್ನು ತೀವ್ರ ಚಿಂತೆಗೀಡು ಮಾಡಿದೆ. ಧಮೇಟಾ ಮತ್ತು ನಗ್ರೋಟಾ ಸುರಿಯಾನ್ ಅರಣ್ಯ ವಿಭಾಗಗಳಲ್ಲಿನ ಜಗ್ಮೋಲಿ ಮತ್ತು ಗುಗ್ಲಡಾ ಪ್ರದೇಶಗಳಲ್ಲಿ ಹೆಚ್ಚಿನ ಪಕ್ಷಿಗಳು ಮೃತಪಟ್ಟಿವೆ.

ವಿವಿಧ ಭಾಗಗಳಲ್ಲಿ ಸತ್ತು ಬಿದ್ದ ಪಕ್ಷಿಗಳ 15 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸಾವಿಗೆ ನಿಖರ ಕಾರಣ ಏನಿರಬಹುದು ಎಂದು ತಿಳಿಯುವ ಸಲುವಾಗಿ ಉತ್ತರ ಪ್ರದೇಶದ ಬರೇಲಿಯಲ್ಲಿನ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಜಲಂಧರ್‌ನಲ್ಲಿನ ಉತ್ತರ ಪ್ರಾದೇಶಿಕ ಕಾಯಿಲೆ ಪತ್ತೆ ಪ್ರಯೋಗಾಲಯ (ಎನ್‌ಆರ್‌ಡಿಡಿಎಲ್) ಮತ್ತು ಭೋಪಾಲ್‌ನಲ್ಲಿರುವ ಅಧಿಕ ಭದ್ರತೆ ಪ್ರಾಣಿ ಕಾಯಿಲೆ ಪ್ರಯೋಗಾಲಯಗಳಿಗೆ (ಎಚ್‌ಎಸ್‌ಎಡಿಎಲ್) ಅವುಗಳನ್ನು ರವಾನಿಸಲಾಗಿದೆ ಎಂದು ಹಮಿರ್ಪುರದ ಉಪ ವಿಭಾಗೀಯ ವನ್ಯಜೀವಿ ಸಂರಕ್ಷಣಾಧಿಕಾರಿ ರಾಹುಲ್ ರೊಹಾನೆ ತಿಳಿಸಿದ್ದಾರೆ.

ದುರಾಸೆಗೆ ಬಲಿಯಾಗುತ್ತಿದೆ ಭೂಮಿ, ಪೆಂಗ್ವಿನ್ ಸಂತತಿಯೂ ಸರ್ವನಾಶದುರಾಸೆಗೆ ಬಲಿಯಾಗುತ್ತಿದೆ ಭೂಮಿ, ಪೆಂಗ್ವಿನ್ ಸಂತತಿಯೂ ಸರ್ವನಾಶ

'ಇನ್ನು ಒಂದೆರಡು ದಿನಗಳಲ್ಲಿ ನಾವು ವೈರಾಣು, ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳ ಕುರಿತಾದ ಫಲಿತಾಂಶವನ್ನು ನಿರೀಕ್ಷಿಸಿದ್ದೇವೆ. ಅಲ್ಲಿಯವರೆಗೂ ಈ ಪಕ್ಷಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಯುತ್ತಿರುವುದನ್ನು ನೋಡಿದರೆ ಹಕ್ಕಿ ಜ್ವರವೇ ಇದಕ್ಕೆ ಕಾರಣ ಎಂಬ ಶಂಕೆ ಇದೆ' ಎಂದು ಅವರು ಹೇಳಿದ್ದಾರೆ.

Over 1700 Migratory Birds Found Dead At Pong Dam Sanctuary In Himachal Pradesh

ಸಾವಿಗೀಡಾದ ವಲಸಿಗ ಪಕ್ಷಿಗಳ ಪೈಕಿ ಶೇ 95ರಷ್ಟು ಸೈಬೀರಿಯಾ ಮತ್ತು ಮಂಗೋಲಿಯಾದಿಂದ ಬಂದ ಬಾರ್ ಹೆಡೆಡ್ ಗೀಸ್ ಪಕ್ಷಿಗಳಾಗಿವೆ. ಪ್ರತಿ ವರ್ಷ ಈ ಅವಧಿಯಲ್ಲಿ 1.15-1.20 ಲಕ್ಷದಷ್ಟು ಪಕ್ಷಿಗಳು ಪೊಂಗ್ ಡಮ್ ಪಕ್ಷಿಧಾಮಕ್ಕೆ ವಲಸೆ ಬರುತ್ತವೆ. ನಾಲ್ಕು ತಿಂಗಳವರೆಗೆ ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

5 ದಶಕದಲ್ಲಿಯೇ ಶೇ 68ರಷ್ಟು ವನ್ಯಜೀವಿ ನಾಶ: ಆಘಾತ ಮೂಡಿಸುವ ವರದಿ5 ದಶಕದಲ್ಲಿಯೇ ಶೇ 68ರಷ್ಟು ವನ್ಯಜೀವಿ ನಾಶ: ಆಘಾತ ಮೂಡಿಸುವ ವರದಿ

ಮುನ್ನೆಚ್ಚರಿಕೆ ಸೃಷ್ಟಿಯಿಂದ ಪಕ್ಷಿಧಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಆದೇಶದವರೆಗೂ ಎಲ್ಲ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

English summary
Over 1,700 migratory birds were found dead in Himachal Pradesh's Pong Dam sanctuary under mysterious circumstances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X