ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12,000ಕ್ಕೂ ಹೆಚ್ಚು ಎನ್‌ಜಿಒಗಳ ವಿದೇಶಿ ಧನಸಹಾಯ ಪರವಾನಗಿ ರದ್ದು

|
Google Oneindia Kannada News

ನವದೆಹಲಿ, ಜನವರಿ 1: ವಿದೇಶಗಳಿಂದ ಹಣವನ್ನು ಪಡೆಯುವುದಕ್ಕೆ ಪಡೆದಿರುವ ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್(FCRA) ಅಡಿ 6,000 ಎನ್‌ಜಿಒ ಮತ್ತು ಇತರ ಸಂಸ್ಥೆಗಳ ಪರವಾನಗಿಯು ರಾತ್ರೋರಾತ್ರಿ ಮುಗಿದಿದೆ ಎಂದು ಗೃಹ ಸಚಿವಾಲಯ ಶನಿವಾರ ಬೆಳಗ್ಗೆ ತಿಳಿಸಿದೆ.

ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗೆ ಅಂತಹ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ಕೆಲವೇ ದಿನಗಳ ಅಂತರದಲ್ಲಿ ಈ ಬಗ್ಗೆ ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯದ ಮೂಲಗಳ ಪ್ರಕಾರ, 6,000ಕ್ಕೂ ಹೆಚ್ಚು ಎನ್‌ಜಿಒಗಳು ಅಥವಾ ಸಂಸ್ಥೆಗಳು ತಮ್ಮ ಪರವಾನಗಿಗಳನ್ನು ನವೀಕರಿಸಲು ಅರ್ಜಿ ಸಲ್ಲಿಸಿಲ್ಲ.

"ಶುಕ್ರವಾರದ ಗಡುವು ಮುಗಿಯುವುದಕ್ಕೂ ಮೊದಲು ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಅನೇಕರು ಅರ್ಜಿ ಸಲ್ಲಿಸಿಲ್ಲ, ಅರ್ಜಿ ಸಲ್ಲಿಸದಿದ್ದರೆ ಅನುಮತಿ ನೀಡುವುದು ಹೇಗೆ," ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

Over 12,000 NGOs Lose Foreign Funding Licence said Home Ministry

ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಕೆಯಾಗಿಲ್ಲ:

ಒಟ್ಟಾರೆ, ಆಕ್ಸ್‌ಫ್ಯಾಮ್ ಇಂಡಿಯಾ ಟ್ರಸ್ಟ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಲೆಪ್ರಸಿ ಮಿಷನ್ ಸೇರಿದಂತೆ 12,000ಕ್ಕೂ ಹೆಚ್ಚು ಎನ್‌ಜಿಒಗಳ ಪರವಾನಗಿ ಮುಗಿದಿದ್ದು, ಇಂದಿನಿಂದ ತಮ್ಮ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಳೆದುಕೊಂಡಿವೆ.

ಈ ಪಟ್ಟಿಯಲ್ಲಿ ಕ್ಷಯರೋಗ ಅಸೋಸಿಯೇಷನ್ ಆಫ್ ಇಂಡಿಯಾ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಸೇರಿವೆ. ಆಕ್ಸ್‌ಫ್ಯಾಮ್ ಇಂಡಿಯಾವು ಎಫ್‌ಸಿಆರ್‌ಎ ಪ್ರಮಾಣಪತ್ರಗಳ ಅವಧಿ ಮುಗಿದಿರುವ ಎನ್‌ಜಿಒಗಳ ಪಟ್ಟಿಯಲ್ಲಿದೆ ಮತ್ತು ನೋಂದಣಿ ರದ್ದುಗೊಂಡವರ ಪಟ್ಟಿಯಲ್ಲಿಲ್ಲ.

ಭಾರತದಲ್ಲಿ ಈಗ ಕೇವಲ 16,829 ಎನ್‌ಜಿಒಗಳು ಎಫ್‌ಸಿಆರ್‌ಎ ಪರವಾನಗಿಯನ್ನು ಹೊಂದಿವೆ, ಅದನ್ನು ನಿನ್ನೆ ಮಾರ್ಚ್ 31, 2022ರವರೆಗೆ ನವೀಕರಿಸಲಾಗಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, 22,762 ಎನ್‌ಜಿಒಗಳು ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿವೆ. ವಿದೇಶಿ ನಿಧಿಯನ್ನು ಸ್ವೀಕರಿಸಲು ಪರವಾನಗಿ ಹೊಂದಿರಬೇಕಾಗಿರುತ್ತದೆ.

ಭಾರತದಾದ್ಯಂತ ಬಡವರು, ರೋಗಿಗಳು ಮತ್ತು ನಿರ್ಗತಿಕರಿಗೆ ಆಶ್ರಯವನ್ನು ನಿರ್ವಹಿಸುವ ಗುಂಪನ್ನು ತೊರೆದ ನಂತರ ಮಿಷನರೀಸ್ ಆಫ್ ಚಾರಿಟಿಯ ಎಫ್‌ಸಿಆರ್‌ಎ ಪರವಾನಗಿಯನ್ನು ನವೀಕರಿಸದಿರಲು ಗೃಹ ಸಚಿವಾಲಯ ನಿರ್ಧರಿಸಿತ್ತು. ತನ್ನ ನಿರ್ಧಾರವನ್ನು ಪರಿಶೀಲಿಸುವ ಮನವಿಯನ್ನು ಸ್ವೀಕರಿಸಿಲ್ಲ ಗೃಹ ಸಚಿವಾಲಯ ಎಂದು ಹೇಳಿದೆ.

ಮದರ್ ತೆರೇಸಾ ಚಾರಿಟಿ ಅವರ ನವೀಕರಣವನ್ನು ತಿರಸ್ಕರಿಸಲಾಗಿದೆ, ಈ "ವಿಷಯವನ್ನು ಪರಿಹರಿಸುವವರೆಗೆ ಯಾವುದೇ FC (ವಿದೇಶಿ ಕೊಡುಗೆಗಳು) ಖಾತೆಗಳನ್ನು ನಿರ್ವಹಿಸದಂತೆ ನಾವು ನಮ್ಮ ಕೇಂದ್ರಗಳನ್ನು ಕೇಳಿದ್ದೇವೆ," ಎಂದು ದೃಢಪಡಿಸಿದೆ.

English summary
FCRA licences - required to be able to receive funding from abroad of over 6,000 NGOs and other organisations expired overnight, said Home Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X