ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದ ವಿವಿಧ ರಾಜ್ಯಗಳಲ್ಲಿ ಆಗಿರುವ ಹಾನಿಯ ಲೆಕ್ಕ ಕೊಟ್ಟ ಕೇಂದ್ರ ಗೃಹ ಇಲಾಖೆ

By Manjunatha
|
Google Oneindia Kannada News

Recommended Video

ಮಳೆಯ ಅವಾಂತರದಿಂದ ಆಗಿರುವ ಹಾನಿಯ ಲೆಕ್ಕದ ವರದಿ ಸಲ್ಲಿಸಿದ ಕೇಂದ್ರ ಗೃಹ ಇಲಾಖೆ

ನವದೆಹಲಿ, ಸೆಪ್ಟೆಂಬರ್ 04: ಈ ಬಾರಿಯ ಮುಂಗಾರು ಋತು ದೇಶದ ಹಲವೆಡೆ ಭಾರಿ ಹಾನಿಯನ್ನೇ ಮಾಡಿದೆ. ಮುಂಗಾರು ಮಳೆಗೆ ಈ ಬಾರಿ ಹೆಚ್ಚಿನ ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ.

ಮಳೆಯಿಂದ ಈ ವರ್ಷ (ಮುಂಗಾರು ಋತು) ವಿನಲ್ಲಿ ಆಗಿರುವ ಹಾನಿಯ ಬಗ್ಗೆ ಗೃಹ ಇಲಾಖೆ ನಿನ್ನೆ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಮುಂಗಾರು ಋತುವಿನಲ್ಲಿ ಮಳೆಯಿಂದಾಗಿ 1440 ಜನ ಅಸುನೀಗಿದ್ದಾರೆ.

ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳ

ಕೇರಳ ಒಂದರಲ್ಲೇ 488 ಜನ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 54.11 ಲಕ್ಷ ಜನ ಪ್ರವಾಹದಿಂದ ಹಾನಿಗೊಳಗಾಗಿದ್ದಾರೆ. 10 ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಭೂಕುಸಿತಗಳು ಸಂಭವಿಸಿವೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಕೇರಳದಲ್ಲಿ ಮಳೆಯಿಂದ 488 ಸಾವಿಗೀಡಾಗಿದ್ದಾರೆ

ಕೇರಳದಲ್ಲಿ ಮಳೆಯಿಂದ 488 ಸಾವಿಗೀಡಾಗಿದ್ದಾರೆ

ಕೇರಳದಲ್ಲಿ ಮಳೆಯಿಂದ 488 ಸಾವಿಗೀಡಾಗಿದ್ದಾರೆ, ಉತ್ತರ ಪ್ರದೇಶದಲ್ಲಿ 254 ಜನ, ಪಶ್ಚಿಮ ಬಂಗಾಳದಲ್ಲಿ 210, ಕರ್ನಾಟಕದಲ್ಲಿ 170, ಮಹಾರಾಷ್ಟ್ರದಲ್ಲಿ 139, ಗುಜರಾತ್‌ನಲ್ಲಿ 52, ಅಸ್ಸಾಂನಲ್ಲಿ 50, ಉತ್ತರಾಖಂಡ್‌ನಲ್ಲಿ 37, ಒಡಿಸ್ಸಾದಲ್ಲಿ 29, ನಾಗಾಲ್ಯಾಂಡ್‌ನಲ್ಲಿ 11 ಜನ ಸಾವಿಗೀಡಾದ್ದಾರೆ.

ಮಳೆಯಿಂದ ದೇಶದಲ್ಲಿ 43 ಜನ ನಾಪತ್ತೆ

ಮಳೆಯಿಂದ ದೇಶದಲ್ಲಿ 43 ಜನ ನಾಪತ್ತೆ

ಮಳೆಯಿಂದಾಗಿ 43 ಜನ ನಾಪತ್ತೆಯಾಗಿದ್ದಾರೆ ಅದರಲ್ಲಿಯೂ ಕೇರಳದಲ್ಲೇ ಹೆಚ್ಚು ಜನ ನಾಪತ್ತೆಯಾಗಿದ್ದು, ಕೇರಳದಲ್ಲಿ 15, ಉತ್ತರ ಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 5, ಉತ್ತರಾಖಂಡ್‌ನಲ್ಲಿ 6, ಕರ್ನಾಟಕದಲ್ಲಿ 3 ಜನ ಮಳೆಯಲ್ಲಿ ಸಿಕ್ಕಿ ನಾಪತ್ತೆಯಾಗಿದ್ದಾರೆ. ಮಳೆಯಿಂದಾಗಿ ಗಾಯಗೊಂಡವರ ಸಂಖ್ಯೆ 386 ಎಂದು ಗೃಹ ಇಲಾಖೆಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಕೇಂದ್ರ ಹೇಳಿದೆ.

ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?

ಒಡಿಸ್ಸಾನದಲ್ಲಿ 40 ಜಿಲ್ಲೆಗಳು ಮಳೆಯಿಂದ ಹಾನಿ

ಒಡಿಸ್ಸಾನದಲ್ಲಿ 40 ಜಿಲ್ಲೆಗಳು ಮಳೆಯಿಂದ ಹಾನಿ

ಮಳೆಯಿಂದಾಗಿ ಒಡಿಸ್ಸಾದ 40 ಜಿಲ್ಲೆಗಳು ಹಾನಿಗೊಳಗಾಗಿವೆ. ಮಹಾರಾಷ್ಟ್ರದ 26 ಜಿಲ್ಲೆಗಳು, ಅಸ್ಸಾಂನ 25, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 23 ಜಿಲ್ಲೆಗಳ ಹಾನಿಗೊಳಗಾಗಿವೆ. ಕೇರಳದ 14 ಜಿಲ್ಲೆಗಳು ಮಳೆಯಿಂದ ಪೂರ್ಣ ಹಾನಿಗೆ ಒಳಗಾಗಿವೆ, ಉತ್ತರಖಾಂಡ್‌ನ 13 ಜಿಲ್ಲೆ, ಕರ್ನಾಟಕ ಹಾಗೂ ನಾಗಾಲ್ಯಾಂಡ್‌ನ 11 ಜಿಲ್ಲೆಗಳು ಹಾಗೂ ಗುಜರಾತ್‌ನ 10 ಜಿಲ್ಲೆಗಳು ಮಳೆಯಿಂದಾಗಿ ಹಾನಿ ಅನುಭವಿಸಿವೆ.

ಕೇರಳದಲ್ಲಿ ಮಳೆಯಿಂದ 54.11 ಲಕ್ಷ ಜನಕ್ಕೆ ತೊಂದರೆ

ಕೇರಳದಲ್ಲಿ ಮಳೆಯಿಂದ 54.11 ಲಕ್ಷ ಜನಕ್ಕೆ ತೊಂದರೆ

ಕೇರಳದಲ್ಲಿ ಒಟ್ಟು 54.11 ಲಕ್ಷ ಜನ ಮಳೆಯಿಂದ ತೊಂದರೆಗೊಳಗಾಗಿದ್ದಾರೆ. 14.52 ಲಕ್ಷ ಜನ ನಿರಾಶ್ರಿತರ ಶಿಬಿರದಲ್ಲಿದ್ದಾರೆ. 57,024 ಹೆಕ್ಟೆರ್ ಬೆಳೆ ನಾಶವಾಗಿದೆ. ಅಸ್ಸಾಂನಲ್ಲಿ 11.47 ಲಕ್ಷ ಜನ ಮಳೆಯಿಂದ ತೊಂದರೆ ಅನುಭವಿಸಿದ್ದಾರೆ. ಮಳೆಯು 27,964 ಹೆಕ್ಟೆರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಬೆಳೆಯನ್ನು ಹಾಳುಮಾಡಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕರ್ನಾಟಕದಲ್ಲಿ 3521 ಹೆಕ್ಟೆರ್ ಬೆಳೆ ನಾಶ

ಕರ್ನಾಟಕದಲ್ಲಿ 3521 ಹೆಕ್ಟೆರ್ ಬೆಳೆ ನಾಶ

ಪಶ್ಚಿಮ ಬಂಗಾಳದಲ್ಲಿ 2.28 ಲಕ್ಷ ಜನ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ರಾಜ್ಯದಲ್ಲಿ 48,552 ಹೆಕ್ಟೆರ್ ಕೃಷಿ ಹಾಳಾಗಿದೆ. ಉತ್ತರ ಪ್ರದೇಶದಲ್ಲಿ 3.42 ಲಕ್ಷ ಜನ ಮಳೆಯಿಂದ ಸಮಸ್ಯೆಗೆ ಸಿಲುಕಿದ್ದರು, 50,830 ಹೆಕ್ಟೆರ್ ಬೆಳೆ ನಾಶವಾಗಿದೆ. ಕರ್ನಾಟಕದಲ್ಲಿ 3.5 ಲಕ್ಷ ಜನ ಮಳೆಯಿಂದ ಸಮಸ್ಯೆ ಅನುಭವಿಸಿದ್ದಾರೆ ರಾಜ್ಯದಲ್ಲಿ 3521 ಹೆಕ್ಟೆರ್ ಬೆಳೆ ನಾಶವಾಗಿದೆ.

English summary
Over 1400 people including Kerala's 488 died due to heavy rain in India this Manson season. Home department's National emergency response center gave details yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X