ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಗೆ ಅಗೌರವ ತೋರಿದ ರಾಹುಲ್ ಗಾಂಧಿ?

|
Google Oneindia Kannada News

ನವದೆಹಲಿ, ಜೂನ್ 21: ವಿಶ್ವವೇ ಇಂದು ಯೋಗ ದಿನವನ್ನು ಆಚರಣೆ ಮಾಡುತ್ತಿದೆ. ಭಾರತದಲ್ಲಿಯಂತೂ ಹಬ್ಬದಂತೆ ಈ ದಿನ ಯೋಗವನ್ನು ಆಚರಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಮಾಡಿರುವ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ.

ಭಾರತೀಯ ಸೇನೆಯ ಶ್ವಾನ ವಿಭಾಗವು ಇಂದು ಯೋಗ ದಿನಾಚರಣೆಯಲ್ಲಿ ಭಾಗವಹಿಸಿತ್ತು. ಶ್ವಾನಗಳು ತಮ್ಮ ಮಾರ್ಗದರ್ಶಕರ ಜೊತೆ ಯೋಗ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ರಾಹುಲ್ ಮಾಡಿರುವ ಟ್ವೀಟ್ ಹಲವರ ಕಣ್ಣು ಕೆಂಪಗಾಗಿಸಿದೆ.

ರಾಷ್ಟ್ರಪತಿಗಳ ಭಾಷಣದ ವೇಳೆ ಮೊಬೈಲ್‌ನಲ್ಲಿ ಮುಳುಗಿದ್ದ ರಾಹುಲ್‌! ರಾಷ್ಟ್ರಪತಿಗಳ ಭಾಷಣದ ವೇಳೆ ಮೊಬೈಲ್‌ನಲ್ಲಿ ಮುಳುಗಿದ್ದ ರಾಹುಲ್‌!

ಭಾರತೀಯ ಸೇನೆಯ ಶ್ವಾನಗಳು ತಮ್ಮ ಮಾರ್ಗದರ್ಶಕರ ಮುಂದೆ ಯೋಗದ ಆಸನವನ್ನು ಮಾಡುತ್ತಿರುವ ಎರಡು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ರಾಹುಲ್ ಗಾಂಧಿ ಅವರು 'ನ್ಯೂ ಇಂಡಿಯಾ' (ಹೊಸ ಭಾರತ) ಎಂದು ವ್ಯಂಗ್ಯ ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ವ್ಯಂಗ್ಯಾರ್ಥ ಮೂಡುವಂತೆ ಟ್ವೀಟ್ ಮಾಡಿರುವ ರಾಹುಲ್

ವ್ಯಂಗ್ಯಾರ್ಥ ಮೂಡುವಂತೆ ಟ್ವೀಟ್ ಮಾಡಿರುವ ರಾಹುಲ್

ರಾಹುಲ್ ಗಾಂಧಿ ಟ್ವೀಟಿಸಿರುವ ಚಿತ್ರದಲ್ಲಿ ನಾಯಿಗಳು ಅರ್ಧ ಶವಾನದ ಮಾದರಿಯಲ್ಲಿ ಮಲಗಿವೆ, ಮಾರ್ಗದರ್ಶನಕರು ಅದರ ಎದುರು ಹಾಗೆಯೇ ಮಲಗಿದ್ದಾರೆ. ನಾಯಿಗಳಿಗೆ ಸಲಾಂ ಹೊಡೆಯುವ ರೀತಿ ಮೇಲ್ನೋಟಕ್ಕೆ ಇದು ಕಾಣುತ್ತಿದೆ, ಇದನ್ನೇ ಗುರಿ ಮಾಡಿಕೊಂಡು ರಾಹುಲ್ ಅವರು ಟ್ವೀಟ್ ಮಾಡಿರುವಂತೆ ಕಾಣುತ್ತಿದೆ.

ಇದು ಅಧಿಕೃತ, ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ರಾಹುಲ್ ಇಳಿಯುವುದು ನಿಶ್ಚಿತ ಇದು ಅಧಿಕೃತ, ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ರಾಹುಲ್ ಇಳಿಯುವುದು ನಿಶ್ಚಿತ

ರಾಹುಲ್ ಟ್ವೀಟ್‌ಗೆ ಭಾರಿ ವಿರೋಧ

ರಾಹುಲ್ ಟ್ವೀಟ್‌ಗೆ ಭಾರಿ ವಿರೋಧ

ರಾಹುಲ್ ಗಾಂಧಿ ಅವರು ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾವಿರಾರು ಜನ ಈಗಾಗಲೇ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಅವರು ಸೇನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ಸೇನೆ, ಶ್ವಾನ, ಯೋಗವನ್ನು ಅವಮಾನಿಸಿದ್ದಾರೆ'

'ಸೇನೆ, ಶ್ವಾನ, ಯೋಗವನ್ನು ಅವಮಾನಿಸಿದ್ದಾರೆ'

ರಾಹುಲ್ ಗಾಂಧಿ ಅವರು ಒಮ್ಮೆಲೆ ಸೇನೆ, ಶ್ವಾನ ಮತ್ತು ಯೋಗವನ್ನು ಅವಮಾನಿಸಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣೆ ಬಳಿಕ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಒಬ್ಬರು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಮಾತಿನಮಲ್ಲ ನವಜೋತ್ ಸಿಧು ಡಿಮಾಂಡ್ ಗೆ ಕಾಂಗ್ರೆಸ್ ಬೇಸ್ತು! ಮಾತಿನಮಲ್ಲ ನವಜೋತ್ ಸಿಧು ಡಿಮಾಂಡ್ ಗೆ ಕಾಂಗ್ರೆಸ್ ಬೇಸ್ತು!

ನೆಹರು ಚಿತ್ರವನ್ನು ಟ್ವೀಟ್‌ ಮಾಡಿರುವ ನೆಟ್ಟಿಗರು

ನೆಹರು ಸಿಗರೇಟು ಸೇದುತ್ತಿರುವ ಚಿತ್ರಗಳನ್ನು ಪ್ರತಿಕ್ರಿಯೆಯಲ್ಲಿ ಹಾಕಿರುವ ಕೆಲವರು ಇದು ಓಲ್ಡ್‌ ಇಂಡಿಯಾ ಎಂದು ಕಾಲೆಳೆದಿದ್ದಾರೆ. ಬಹುಪಾಲು ಪ್ರತಿಕ್ರಿಯೆಗಳು ರಾಹುಲ್ ಗಾಂಧಿಗೆ ವ್ಯತಿರಿಕ್ತವಾಗಿಯೇ ಇವೆ.

English summary
Rahul Gandhi tweeted two photos of dog army doing yoga, he writes new India. people outrage against this tweet. social media users saying Rahul insult dogs, yoga and army in single tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X