ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಯನ್ನು ಅಪ್ಪಿಕೊಂಡರೆ ಡೈವೋರ್ಸ್ ನೀಡುತ್ತಾರೆ ಅಷ್ಟೇ!

|
Google Oneindia Kannada News

Recommended Video

ರಾಹುಲ್ ಗಾಂಧಿಯನ್ನು ಅಪ್ಪಿಕೊಂಡರೆ ಡೈವೋರ್ಸ್ ನೀಡುತ್ತಾರೆ ಅಷ್ಟೇ! | Oneindia kannada

ನವದೆಹಲಿ, ಜುಲೈ 27: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಪ್ಪಿಕೊಳ್ಳುವುದು ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ಪಕ್ಷದ ಸದಸ್ಯರು ಹೆದರಿದ್ದಾರೆ ಎಂಬುದಾಗಿ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.

'ಹೌದು ನಮಗೆ ರಾಹುಲ್ ಗಾಂಧಿ ಅವರನ್ನು ಅಪ್ಪಿಕೊಳ್ಳುವ ವಿಚಾರದಲ್ಲಿ ಭಯವಿದೆ. ಅವರನ್ನು ಅಪ್ಪಿಕೊಂಡ ಬಳಿಕ ನಮ್ಮ ಪತ್ನಿಯರು ನಮಗೆ ವಿಚ್ಛೇದನ ನೀಡುತ್ತಾರೆ' ಎಂದು ನಿಶಿಕಾಂತ್ ಅವರು ಲೇವಡಿ ಮಾಡಿದ್ದಾರೆ.

ಮೋದಿಯನ್ನು ತಬ್ಬಿಕೊಳ್ಳಲು ರಾಹುಲ್‌ ಗಾಂಧಿಗೆ ಸಲಹೆ ನೀಡಿದ್ದು ಜ್ಯೋತಿಷಿ!ಮೋದಿಯನ್ನು ತಬ್ಬಿಕೊಳ್ಳಲು ರಾಹುಲ್‌ ಗಾಂಧಿಗೆ ಸಲಹೆ ನೀಡಿದ್ದು ಜ್ಯೋತಿಷಿ!

ಅಲ್ಲದೆ, ಐಪಿಸಿ ಸೆಕ್ಷನ್ 377ಅನ್ನು (ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಕಾನೂನು) ಇನ್ನೂ ರದ್ದುಗೊಳಿಸಿಲ್ಲ. ಒಂದು ವೇಳೆ ಅವರು ಮದುವೆ ಆದರೆ ನಾವು ಅವರನ್ನು ಅಪ್ಪಿಕೊಳ್ಳುತ್ತೇವೆ' ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.

our wives may divorce us if we hug Rahul gandhi: bjp mp

ನಾವ್ಯಾಕೆ ಅವರನ್ನು ಅಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿರುವ ಅವರು, ರಾಹುಲ್ ಗಾಂಧಿಯನ್ನು ಅಪ್ಪಿಕೊಂಡರೆ ಸಂಸದರ ಪತ್ನಿಯರು ಮುಜುಗರಕ್ಕೆ ಒಳಗಾಗುತ್ತಾರೆ. ಇದರಿಂದ ವಿಚ್ಛೇದನ ನೀಡಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.

ಮೋದಿಯನ್ನು ಅಪ್ಪಿಕೊಂಡು ಸದನಕ್ಕೆ ಹಿಂದು ಧರ್ಮದ ಪಾಠ ಮಾಡಿದ ರಾಹುಲ್ಮೋದಿಯನ್ನು ಅಪ್ಪಿಕೊಂಡು ಸದನಕ್ಕೆ ಹಿಂದು ಧರ್ಮದ ಪಾಠ ಮಾಡಿದ ರಾಹುಲ್

ತಮ್ಮನ್ನು ಭೇಟಿಯಾದ ಬಿಜೆಪಿ ಸಂಸದರು ಅವರನ್ನು ಎಲ್ಲಿ ಅಪ್ಪಿಕೊಳ್ಳುತ್ತೇನೋ ಎಂಬ ಭಯದಿಂದ ಎರಡು ಹೆಜ್ಜೆ ಹಿಂದಕ್ಕೆ ಸರಿಯುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಭಾಷಣ ಮುಗಿದ ಬಳಿಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದರು.

our wives may divorce us if we hug Rahul gandhi: bjp mp

ಇದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಹುಲ್ ಗಾಂಧಿ ಅವರ ನಡೆಯನ್ನು ಕೆಲವರು ಟೀಕಿಸಿದ್ದರೆ, ಇನ್ನು ಕೆಲವರು ಸಮರ್ಥಿಸಿಕೊಂಡಿದ್ದರು.

English summary
BJP MP from Jharkhand, Nishikant Dubey has said his party members fear that hugging Congress president Rahul Gandhi might lead to divorce. If he get married we will hug him, Dubey said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X