ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಅನುಮತಿ,ಕಾರ್ ಡ್ರೈವರ್ ವಿಮಾನ ಹಾರಿಸಿದಂತೆ ಎಂದ ವೈದ್ಯರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಆಯರ್ವೇದ, ಅಲೋಪತಿಯನ್ನು ಮಿಶ್ರಣ ಮಾಡಬೇಡಿ, ಆಯುರ್ವೇದ ವೈದ್ಯರಿಗೆ ಯಾಕೆ ಶಸ್ತ್ರ ಚಿಕಿತ್ಸೆ ಮಾಡಲು ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿ ಡಿಸೆಂಬರ್ 8,11 ರಂದು ವೈದ್ಯರು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಆಯುರ್ವೇದ ವೈದ್ಯರಿಗೂ ಶಸ್ತ್ರ ಚಿಕಿತ್ಸೆ ನಡೆಸುವ ಕುರಿತು ನೀಡಿರುವ ಅನುಮತಿಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಗಳು ಮುಷ್ಕರ ನಡೆಸಲಿದ್ದಾರೆ.

ಇದೇ ಡಿಸೆಂಬರ್ 8 ಮತ್ತು 11ರಂದು ಎಲ್ಲಾ ಕೋವಿಡ್ ಮತ್ತು ತುರ್ತುರಹಿತ ವೈದ್ಯಕೀಯ ಸೇವೆಗಳನ್ನು 2 ಗಂಟೆಗಳ ಕಾಲ ಸ್ಥಗಿತ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿ ಸಲಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯೊಳಗೆ ಮುಷ್ಕರ ನಡೆಯಲಿದೆ.

ಅರಿವಳಿಕೆ ಹೇಗೆ ನೀಡಬೇಕೆಂದು ಅವರಿಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆದರೆ ಸಿಸಿಐಎಂ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಈಗಾಗಲೇ ಔಷಧ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಯುಷ್ ಇಲಾಖೆಯ ಆಯುಕ್ತರಾದ ಮೀನಾಕ್ಷಿ ನೇಗಿ ಅವರು, 'ಶಸ್ತ್ರಚಿಕಿತ್ಸೆ ಯಾವಾಗಲೂ ಆಯುರ್ವೇದದ ಒಂದು ಭಾಗವಾಗಿದೆ. ಶಸ್ತ್ರ ಚಿಕಿತ್ಸೆ ಆಯುರ್ವೇದ ಪಠ್ಯಕ್ರಮದ ಭಾಗವಾಗಿದ್ದು, ಇದನ್ನು ದೇಶಾದ್ಯಂತ ಕಲಿಸಲಾಗುತ್ತದೆ.

ಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿ

ಅಂತೆಯೇ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಕಲಿಸಿದಾಗ, ರೋಗಿಗಳಿಗೆ ಆಯ್ಕೆ ಇರಬೇಕು. ಜಪಾನ್, ಚೀನಾ ಮತ್ತು ಜರ್ಮನಿಯಂತಹ ದೇಶಗಳನ್ನು ನೋಡಿ, ಅಲ್ಲಿ ಅವರು ಕೋವಿಡ್ ಸೋಂಕಿಗೆ ಆಯುರ್ವೇದ ಮಧ್ಯಸ್ಥಿಕೆಗಳನ್ನು ಬಳಸುತ್ತಿದ್ದಾರೆ. ಈ ಕುರಿತು ವಾದ-ವಿವಾದಗಳಿಗೆ ಸಿಲುಕುವ ಬದಲು ದೇಶಕ್ಕೆ ಯಾವುದು ಒಳ್ಳೆಯದು ಎಂದು ನಾವು ನೋಡಬೇಕು ಎಂದು ಹೇಳಿದ್ದಾರೆ.

ಇದು ಈಗಿರುವ ಕಾನೂನು ಆಡಳಿತದ ಪ್ರಕಾರ. ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಕಲಿಸಿದ ನಂತರ, ಅವರು ಅದನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದು ನ್ಯಾಯವೇ? ಪ್ರಶ್ನಿಸಿದ್ದಾರೆ.

ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ

ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ

ಸೆಂಟ್ರಾ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಆಯುರ್ವೇದ ವೈದ್ಯರಿಗೂ ಶಸ್ತ್ರ ಚಿಕಿತ್ಸೆ ನಡೆಸಲು ಕಳೆದ ವಾರವಷ್ಟೇ ಅನುಮತಿ ನೀಡಿತ್ತು. ಅಪೆಂಡಿಕ್ಸ್‌, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್‌, ಹಲ್ಲಿನ ರೂಟ್‌ಕ್ಯಾನಲ್‌ ಮುಂತಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತರಬೇತಿಯನ್ನು ಪಡೆದ ನಂತರ, ಆಯುರ್ವೇದ ವೈದ್ಯರು ಸಹ ಇಂಥ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ ಎಂದು ಹೇಳಿತ್ತು.

ಭಾರತೀಯ ವೈದ್ಯಕೀಯ ಸಂಘದಿಂದ ತೀವ್ರ ವಿರೋಧ

ಭಾರತೀಯ ವೈದ್ಯಕೀಯ ಸಂಘದಿಂದ ತೀವ್ರ ವಿರೋಧ

ಸಿಸಿಐಎಂನ ಈ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ವಿರೋಧಿಸಿತ್ತು. ಅಲ್ಲದೆ ಆಧುನಿಕ ಔಷಧಕ್ಕಾಗಿ ಸ್ವಾತಂತ್ರ್ಯ ಹೋರಾಟ ಮತ್ತು ಮಿಕ್ಸೋಪತಿಯ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿತ್ತು.

ಆಯುರ್ವೆದ ಶಲ್ಯತಂತ್ರ ಅಧ್ಯಯನ

ಆಯುರ್ವೆದ ಶಲ್ಯತಂತ್ರ ಅಧ್ಯಯನ

ಆಯುರ್ವೇದದಲ್ಲಿ ಶಲ್ಯತಂತ್ರ (ಸಾಮಾನ್ಯ ಶಸ್ತ್ರಚಿಕಿತ್ಸೆ) ಅಧ್ಯಯನ ನಡೆಸುವವರಿಗೆ 39 ರೀತಿಯ ಶಸ್ತ್ರಚಿಕಿತ್ಸೆ ಹಾಗೂ ಶಾಲಾಕ್ಯತಂತ್ರ (ಕಣ್ಣು, ಮೂಗು ಗಂಟಲು, ತಲೆ ಹಾಗೂ ದಂತ ಚಿಕಿತ್ಸೆ) ಸ್ನಾತಕೋತ್ತರ ಅಧ್ಯಯನ ಮಾಡುವವರಿಗೆ 19 ರೀತಿಯ ಶಸ್ತ್ರಚಿಕಿತ್ಸೆ ನಡೆಸುವ ತರಬೇತಿಯನ್ನು ನೀಡಲಾಗುವುದು. ಪದವಿ ಪೂರ್ಣಗೊಂಡ ನಂತರ ಅವರು ಸ್ವತಂತ್ರವಾಗಿ ಈ ಚಿಕಿತ್ಸೆಗಳನ್ನು ನಡೆಸಬಹುದು ಎಂದು ಹೇಳಲಾಗಿತ್ತು.

ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಆಯುರ್ವೇದ ವೈದ್ಯರಿಗೆ ಅಂಗರಚನಾಶಾಸ್ತ್ರ ಅಥವಾ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿದಿಲ್ಲ. ಇದು ಕಾರ್ ಡ್ರೈವರ್‌ಗೆ ವಿಮಾನ ಹಾರಾಟ ಮಾಡುವಂತೆ ಕೇಳುವಂತಿದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಇನ್ನು ಸಿಸಿಐಎಂ ನ ಈ ನಡೆಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಸಿಐಎಂನ ಈ ಕ್ರಮವು ರೋಗಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಎಂದು ರಾಜ್ಯದ ಅಲೋಪತಿ ವೈದ್ಯರ ಹೇಳಿದ್ದು, ಇದರ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada

English summary
All non-Covid and non-emergency medical services across the country may be halted for two hours on December 8 and between 6am to 6pm on December 11 in response to a call given by the Indian Medical Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X