ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ನೋಡಿ ಒರಿಸ್ಸಾದಲ್ಲಿ ಫೈಲಿನ್ ಅಬ್ಬರ

|
Google Oneindia Kannada News

ಭುವನೇಶ್ವರ, ಅ.14 : ಸಾಗರದಲ್ಲಿ ರಕ್ಕಸ ಅಲೆಗಳನ್ನು ಸೃಷ್ಟಿಸುತ್ತಾ ಒರಿಸ್ಸಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ಕರಾವಳಿ ತೀರಕ್ಕೆ ಅಪ್ಪಳಿಸಿದ ಫೈಳಿನ್ ಚಂಡಮಾರುತ ತನ್ನ ಪ್ರಭಾವ ಬೀರಿ ಮರೆಯಾಗಿದೆ. ಮಳೆ ನಿಂತು ಹೋದ ಮೇಲೆ ಚಂಡಮಾರುತ್ ಭೀಕರತೆ ಕಣ್ಣಿಗೆ ಕಾಣುತ್ತಿದೆ.

ಫೈಲಿನ್ ಅಬ್ಬರಕ್ಕೆ ಸಿಲುಕಿ ಹೆಚ್ಚು ನಷ್ಟ ಅನುಭವಿಸಿದ್ದು ಒರಿಸ್ಸಾ ರಾಜ್ಯ. ಶನಿವಾರ ಪ್ರಾರಂಭವಾದ ಮಳೆ ಒರಿಸ್ಸಾದಲ್ಲಿ ಭಾನುವಾರ ಸಂಜೆಯ ತನಕವೂ ಮುಂದುವರೆದಿತ್ತು. ಭಾರೀ ಗಾಳಿ, ಮಳೆಗೆ ಸಿಲುಕಿದ ಒರಿಸ್ಸಾದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಹವಾಮಾನ ಇಲಾಖೆಯ ನಿಖರ ಮುನ್ಸೂಚನೆ ಮತ್ತು ಮಾಧ್ಯಮಗಳ ಪ್ರಚಾರದಿಂದಾಗಿ ಫೈಲಿನ್ ಅಬ್ಬರದಿಂದ ಆಗಬಹುದಾಗಿದ್ದ ಜೀವಹಾನಿಯನ್ನು ತಪ್ಪಿಸಲಾಗಿದೆ. ಆದರೆ, ಚಂಡಮಾರುತ ಊಂಟು ಮಾಡಿರುವ ನಷ್ಟವನ್ನು ಭರಿಸುವುದು ಕಷ್ಟ.

ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಪುನರ್ ನಿರ್ಮಾಣ ಮಾಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು ಎಂದು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ಚಂಡಮಾರುತದ ಮರಳಿದ ಮೇಲೆ ಅದರ ಭೀಕರತೆಯ ಚಿತ್ರಗಳು ಕಾಣುತ್ತಿವೆ. ಚಿತ್ರಗಳಲ್ಲಿ ನೋಡಿ ಒರಿಸ್ಸಾದಲ್ಲಿ ಫೈಲಿನ್ ಅಬ್ಬರ (ಪಿಟಿಐ ಚಿತ್ರಗಳು)

ಫೈಲಿನ್ ಅಬ್ಬರಕ್ಕೆ ಗಂಜಾಂ ತತ್ತರ

ಫೈಲಿನ್ ಅಬ್ಬರಕ್ಕೆ ಗಂಜಾಂ ತತ್ತರ

ಫೈಲಿನ್ ಅಬ್ಬರಕ್ಕೆ ಸಿಲುಕಿ ಅತಿ ಹೆಚ್ಚು ಹಾನಿಗೆ ಒಳಗಾದ ಪ್ರದೇಶ ಒರಿಸ್ಸಾದ ಗಂಜಾಂ ಜಿಲ್ಲೆ. ಗಂಜಾಂ ಜಿಲ್ಲೆಯಲ್ಲಿ ಚಂಡಮಾರುತದ ಸುಳುಗೆ ಸಿಲುಕಿ ಲಾರಿಯೊಂದು ಈ ಸ್ಥಿತಿಗೆ ಬಂದಿದೆ ಎಂದರೆ, ಅದರ ಪ್ರಭಾವ ಎಷ್ಟಿತ್ತು ಎಂದು ನೀವು ಊಹಿಸಬಹುದು.

ನಿಂಗೇನು ಸಿಕ್ತು?

ನಿಂಗೇನು ಸಿಕ್ತು?

ಒರಿಸ್ಸಾದ ಗೋಪಾಲಪುರ ಕಡಲ ಕಿನಾರೆಯಲ್ಲಿ ಭಾನುವಾರ ಮಕ್ಕಳು ಫೈಲಿನ್ ಚಂಡಮಾರುತದದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಒಬ್ಬನಿಗೆ ದೇವರ ವಿಗ್ರಹವೇ ಸಿಕ್ಕಿಬಿಟ್ಟಿದೆ.

ಮುಂದೇನು ಗತಿಯಪ್ಪಾ?

ಮುಂದೇನು ಗತಿಯಪ್ಪಾ?

ಒರಿಸ್ಸಾದ ಗೋಪಾಲಪುರದಲ್ಲಿ ಫೈಲಿನ್ ಅಬ್ಬರಕ್ಕೆ ಸಿಲುಕಿ ಹಾನಿಗೊಳಗಾದ ತನ್ನ ಮನೆಯನ್ನು ಪರಿಶೀಲಿಸುತ್ತಿರುವ ಮಹಿಳೆಯೊಬ್ಬಳು ಪರಿಶೀಲಿಸುತ್ತಿದ್ದಾಳೆ. ಮುಂದೇನು ಎಂಬ ಆತಂಕವೂ ಅವರಲ್ಲಿದೆ.

ಹೀಗಿದೆ ಫೈಲಿನ್ ಅಬ್ಬರ

ಹೀಗಿದೆ ಫೈಲಿನ್ ಅಬ್ಬರ

ಗೋಪಾಲಪುರದ ಕಡಲ ಕಿನಾರೆಯಲ್ಲಿ ಭಾನುವಾರ ಕಂಡುಬಂದ ದೃಶ್ಯವಿದು. ಫೈಲಿನ್ ಅಬ್ಬರಕ್ಕೆ ಸಿಲುಕಿದ ಮನೆಗಳು ಮತ್ತು ತೆಂಗಿನ ಮರಗಳ ಸ್ಥಿತಿ ಈ ರೀತಿಯಾಗಿದೆ.

ವಾಯುದೇವ ಏನಿದು?

ವಾಯುದೇವ ಏನಿದು?

ಗೋಪಾಲಪುರದಲ್ಲಿ ಫೈಲಿನ್ ಅಬ್ಬರಕ್ಕೆ ಭಾರೀ ಗಾಳಿ ಭಿಸುತ್ತಿದೆ. ಇದನ್ನು ನೋಡುತ್ತಾ ನಿಂತಿರುವ ಆಂಜನೇಯ ವಿಗ್ರಹ ವಾಯುದೇವ ಏನಿದು ಎಂದು ಕೇಳುತ್ತಿರುವಂತಿದೆ.

ಇಷ್ಟು ಉಳಿದಿದೆ ನೋಡಿ

ಇಷ್ಟು ಉಳಿದಿದೆ ನೋಡಿ

ಗೋಪಾಲಪುರ ಕಡಲ ತೀರದಲ್ಲಿ ಫೈಲಿನ್ ಚಂಡಮಾರುತ ಅಬ್ಬರ ಸೃಷ್ಟಿಸಿ ಮರೆಯಾದ ಬಳಿಕ ಮೀನುಗಾರನೊಬ್ಬ ಅಳಿದುಳಿದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾನೆ.

ಏನು ಉಳಿದಿಲ್ಲ

ಏನು ಉಳಿದಿಲ್ಲ

ಒರಿಸ್ಸಾದ ಛಾತ್ರಾಪುರ ಗ್ರಾಮದಲ್ಲಿ ಫೈಲಿನ್ ಅಬ್ಬರದ ನಂತರ ತನ್ನ ಮನೆಯ ಮುಂದೆ ನಿಂತು ಮಹಿಳೆಯೊಬ್ಬಳು. ಫೋನ್ ನಲ್ಲಿ ಮನೆಯ ಸ್ಥಿತಿಯನ್ನು ಯಾರಿಗೂ ಹೇಳುತ್ತಿದ್ದಾಳೆ.

ರಸ್ತೆ ಉಳಿದಿದೆ

ರಸ್ತೆ ಉಳಿದಿದೆ

ಗೋಪಾಲಪುರದಲ್ಲಿ ಫೈಲಿನ್ ಚಂಡಮಾರುತದ ಅಬ್ಬರದಿಂದ ಸುರಿದ ಭಾರೀ ಮಳೆಗೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಎಷ್ಟು ಗಾಳಿ ಬೀಸಿದೆ

ಎಷ್ಟು ಗಾಳಿ ಬೀಸಿದೆ

ಒರಿಸ್ಸಾದ ಬ್ರಹ್ಮಾಪುರದಲ್ಲಿ ಫೈಲಿನ್ ರಭಸಕ್ಕೆ ಸಿಲುಕಿ ಹಾನಿಗೀಡಾಗಿರುವ ಜಾಹೀರಾತು ಫಲಕವನ್ನು ಸಿಬ್ಭಂದಿ ದುರಸ್ತಿ ಮಾಡುತ್ತಿದ್ದಾರೆ. ಇದನ್ನು ನೋಡಿದರೆ. ಫೈಲಿನ್ ಅಬ್ಬರ ಎಷ್ಟಿತ್ತು ಎಂಬುದು ತಿಳಿಯುತ್ತದೆ.

ಎಷ್ಟು ಮರ ಬಿದ್ದಿವೆ?

ಎಷ್ಟು ಮರ ಬಿದ್ದಿವೆ?

ಒರಿಸ್ಸಾದ ಛಾತ್ರಾಪುರದಲ್ಲಿ ಫೈಲಿನ್ ಅಬ್ಬರಕ್ಕೆ ಸಿಲುಕಿ ಧರೆಗುರುಳಿದ ಮರಗಳನ್ನು ಜೆಸಿಬಿ ಸಹಾಯದಿಂದ ಗ್ರಾಮಸ್ಥರು ತೆರವುಗೊಳಿಸಿ ರಸ್ತೆ ಸಂಚಾರ ಪ್ರಾರಂಭಿಸಲು ಪ್ರಯತ್ನ ನಡೆಸಿದ್ದಾರೆ.

English summary
Phailin Cyclone Rehabilitation is the biggest challenge for us said, Orissa Chief Minister Naveen Patnaik on Sunday, October 14. Orissa state is considered as more damaged in the Phailin cyclone. rehabilitation work under progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X