ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ, ಮೋಡ, ರೆಡಾರ್ ಹಾಗೂ ಮೋದಿ ಹೇಳಿಕೆ, ರಮ್ಯಾ ಗೇಲಿ

|
Google Oneindia Kannada News

ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಕೊನೆ ಎರಡು ಹಂತದ ಚುನಾವಣಾ ಭಾಷಣಗಳಲ್ಲಿ ವೈಯಕ್ತಿಕ ಟೀಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ, ಆಧಾರವಿಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವುದನ್ನು ನೋಡಿರಬಹುದು, ಕೇಳಿರಬಹುದು, ಈಗ ಆಡಿಕೊಂಡು ನಗುವವರ ಮುಂದೆ ಎಡವಿಬಿದ್ದಂಥ ಪರಿಸ್ಥಿತಿಯಲ್ಲಿ ಮೋದಿ ಸಿಲುಕಿದ್ದಾರೆ.

ಮಾಧ್ಯಮ ಸಂಸ್ಥೆಯ ಜೊತೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಕುರಿತಂತೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಸೇರಿದಂತೆ ವಿಪಕ್ಷ ನಾಯಕರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್ಸ್ ಮುಂದುವರೆದಿವೆ.

ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾದ ಅಕ್ಷಯ್ ಇದು ಸರಿನಾ? ರಮ್ಯಾ ಪ್ರಶ್ನೆಐಎನ್ಎಸ್ ಸುಮಿತ್ರಾದಲ್ಲಿ ಕೆನಡಾದ ಅಕ್ಷಯ್ ಇದು ಸರಿನಾ? ರಮ್ಯಾ ಪ್ರಶ್ನೆ

ಸಂದರ್ಶನದಲ್ಲಿ ಮಾತನಾಡುತ್ತಾ, ಬಾಲಕೋಟ್ ವೈಮಾನಿಕ ದಾಳಿ ವೇಳೆಯಲ್ಲಿ ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನಿ ರೆಡಾರ್ ಗಳಿಗೆ ಕಾಣಿಸದಂತಾಗಲು ಮೋಡ ಹಾಗೂ ಮಳೆ ಕಾರಣವಾಗಲಿದೆ ಎಂಬ ಸಲಹೆ ನೀಡಿದ್ದೆ ಎಂದು ಮೋದಿ ಹೇಳಿದ್ದರು.

ರಮ್ಯಾಗೆ ನೀತಿ ಪಾಠದ ಪೆಟ್ಟುಕೊಟ್ಟ ಜಗ್ಗೇಶ್ರಮ್ಯಾಗೆ ನೀತಿ ಪಾಠದ ಪೆಟ್ಟುಕೊಟ್ಟ ಜಗ್ಗೇಶ್

ಅಂದು ರಾತ್ರಿ 9-9.30 ವೇಳೆಗೆ ಮೊದಲಿಗೆ ಕಾರ್ಯಾಚರಣೆ ಪರಿಶೀಲಿಸಲಾಯಿತು, ಪ್ರತಿಕೂಲ ಹವಾಮಾನ ತೊಂದರೆ ಎದುರಾಗಿತ್ತು. ಆ ದಿನ ಭಾರಿ ಮಳೆಯಾಗಿತ್ತು. ರಾತ್ರಿ 12ರ ವೇಳೆಗೆ ಈ ಬಗ್ಗೆ ಪುನರ್ ಪರಿಶೀಲಿಸಿದೆವು, ಈ ಬಗ್ಗೆ ಚರ್ಚಿಸುವಾಗ, ಮೋಡ ಕವಿದ ವಾತಾವರಣ ಇರುವುದು ನಮಗೆ ಅನುಕೂಲಕರವಾಗಿ ಪರಿಣಮಿಸಬಹುದು, ಮಳೆ, ಮೋಡದ ದೆಸೆಯಿಂದ ಪಾಕಿಸ್ತಾನಿಗಳ ರೆಡಾರ್ ಕಣ್ತಪ್ಪಿಸಿ ನಮ್ಮ ಯುದ್ಧ ವಿಮಾನ ಮುನ್ನುಗಬಹುದು ಎಂದು ನಾನು ಸಲಹೆ ನೀಡಿದೆ' ಎಂದು ಮೋದಿ ವಿವರಿಸಿದರು.

ಐದು ವರ್ಷಗಳಿಂದ ಇದೇ ಆಯ್ತು ಮೋದಿ

ಐದು ವರ್ಷಗಳಿಂದ ಸುಳ್ಳುಗಳ ಸರಮಾಲೆ ಹಾಕುತ್ತಿರುವ ನರೇಂದ್ರ ಮೋದಿ ಸರ್ಕಾರ, ಮೋಡ ಕವಿದಿರುವುದರಿಂದ ರೆಡಾರ್ ಕಣ್ತಪ್ಪಿಸಬಹುದು -ಕಾಂಗ್ರೆಸ್ಸಿನಿಂದ ಟೀಕೆ

ಭಾರತೀಯ ವಾಯುಸೇನೆ ಮೋದಿಯಿಂದ ಅವಮಾನ

ಮೋದಿ ಅವರ ಬಾಲಿಶ, ಅವೈಜ್ಞಾನಿಕ ಹೇಳಿಕೆಯಿಂದ ಭಾರತೀಯ ವಾಯುಸೇನೆಗೆ ಅವಮಾನ ಮಾಡಿದ್ದಂತಾಗಿದೆ. ವಾಯುಸೇನೆಯ ವೃತ್ತಿಪರತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಇದು ನಿಜಕ್ಕೂ ಶೋಚನೀಯ ಎಂದು ಸಿಪಿಐಎಂನ ಮುಖಂಡ ಸೀತಾರಾಮ್ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.

ಒಮರ್ ಅಬ್ದುಲ್ಲಾರಿಂದ ಪ್ರತಿಕ್ರಿಯೆ

ಪಾಕಿಸ್ತಾನಿ ರೆಡಾರ್ ಗಳ ಕಣ್ತಪ್ಪಿಸಿ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿದ್ದರ ಬಗ್ಗೆ ಈಗ ಸರಿಯಾದ ತಾಂತ್ರಿಕ ವಿಷಯ ತಿಳಿಯಿತು. ಮುಂದೆ ವೈಮಾನಿಕ ದಾಳಿ ನಡೆಸುವಾಗ ಇದನ್ನು ಬಳಸಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖಂಡ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಮೋದಿ ಅಂಕಲ್ ಗೆ ರಮ್ಯಾ ಪಾಠ

ಸರಿಯಾದ ಮಾಹಿತಿ ಇಲ್ಲದಿದ್ದರೆ ಹೀಗೆ ಆಗುತ್ತೆ, ಗತಕಾಲದಲ್ಲೆ ಜೀವಿಸಬೇಡಿ, ರೆಡಾರ್ ಬಳಕೆ ಬಗ್ಗೆ ತಿಳಿದುಕೊಳ್ಳಿ ಎಂದು ಮೋದಿ ಅಂಕಲ್ ಜೀಗೆ ದಿವ್ಯಸ್ಪಂದನ ಟ್ವೀಟ್ ಮಾಡಿದ್ದಾರೆ.

ಇ ಮೇಲ್ ಬಳಕೆ ಬಗ್ಗೆ ಕೂಡಾ ಟ್ವೀಟ್

1988ರಲ್ಲೇ ಇಮೇ ಬಗ್ಗೆ ತಿಳಿದಿತ್ತಾ, ಯಾರಿಗೆ ಇಮೇಲ್ ಕಳಿಸುತ್ತಿದ್ದರಂತೆ, ಇಡೀ ವಿಶ್ವಕ್ಕೆ ತಿಳಿಯದ ವಿಷಯ ಮುಂಚಿತವಾಗಿ ಅರಿವಾಗಿತ್ತಾ ಎಂದು ಗೇಲಿ ಮಾಡಿದ್ದಾರೆ.

English summary
Prime Minister Narendra Modi has once again come under sharp criticism and ridicule from opposition leaders for remarks he made on clouds and radar during a recent TV interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X