ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಅನುಪಮ್ ತಿರುಗೇಟು

By Mahesh
|
Google Oneindia Kannada News

ಕೋಲ್ಕತಾ (ಪಶ್ಚಿಮ ಬಂಗಾಳ), ಮಾ. 06: ದೇಶದೆಲ್ಲೆಡೆ ಅಸಹಿಷ್ಣುತೆ ಇದ್ದರೆ ಅದರ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಲಾಗುತ್ತಿತ್ತು. ಆದರೆ, ಅಸಹಿಷ್ಣುತೆ ಇರುವುದು ವಿಪಕ್ಷಗಳಲ್ಲಿ ಮಾತ್ರ. ಬಡವರಲ್ಲಿ ಇಲ್ಲ, ಶ್ರೀಮಂತರಲ್ಲಿ ಮಾತ್ರ. ಎಂದು ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಹಿರಿಯ ನಟ ಅನುಪಮ್ ಖೇರ್ ತಿರುಗೇಟು ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಶನಿವಾರ ನಡೆದ 'ಟೆಲಿಗ್ರಾಫ್- ಅಸಹಿಷ್ಣುತೆ ಚರ್ಚೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಅವರು ಬಡ ಹಾಗೂ ನಿರ್ಗತಿಕರು ತಮ್ಮ ಜೀವನೋಪಾಯದ ಹೋರಾಟದಲ್ಲಿ ಮುಳುಗುತ್ತಾರೆ ಹೊರತೂ ಅಸಹಿಷ್ಣುತೆ ಬಗ್ಗೆ ಚಿಂತಿಸುವುದಿಲ್ಲ ಎಂದರು.[ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ ಝಾನ್ವಿ]

ಈ ಕಾರ್ಯಕ್ರಮದಲ್ಲಿ ನಟಿ ಕಾಜೋಲ್, ಜಸ್ಟೀಸ್ ಅಶೋಕ್ ಗಂಗೂಲಿ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, ಪತ್ರಕರ್ತೆ ಬರ್ಖಾ ದತ್ ಅವರು ಪಾಲ್ಗೊಂಡಿದ್ದರು, ಲೇಖಕ ಮುಕುಲ್ ಕೇಶವನ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಉಗ್ರ ಅಫ್ಜಲ್ ಗುರು ನೇಣಿಗೆ ಹಾಕಿದ್ದು ಸರಿಯಲ್ಲ ಎಂದು ಜಸ್ಟೀಸ್ ಗಂಗೂಲಿ ಅವರು ಹೇಳಿದ್ದನ್ನು ಅನುಪಮ್ ಖೇರ್ ಖಂಡಿಸಿದರು. ಅತ್ಯಂತ ಸಹಿಷ್ಣುತೆ ಉಳ್ಳ ಜನರನ್ನು ಕಾಣಬೇಕಾದರೆ ಕಾಂಗ್ರೆಸ್ ಪಕ್ಷದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ತಾಳ್ಮೆಯಿಂದ ಆತನನ್ನು ಸಹಿಸಿಕೊಂಡು ಬರುತ್ತಿದ್ದಾರೆ. ಆತನನ್ನು ಸಹಿಸಿಕೊಳ್ಳಬಹುದಾದರೆ ಇಡೀ ವಿಶ್ವವನ್ನೇ ಸಹಿಸಿಕೊಂಡಂತೆ ಎಂದು ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಅನುಪಮ್ ಖೇರ್ ಅವರು ಕಿಚಾಯಿಸಿದರು.

ಜಸ್ಟೀಸ್ ಗಂಗೂಲಿ ಮಾತುಗಳನ್ನು ಕೇಳಿ ನನಗೆ ಆಘಾತ

ಜಸ್ಟೀಸ್ ಗಂಗೂಲಿ ಮಾತುಗಳನ್ನು ಕೇಳಿ ನನಗೆ ಆಘಾತ

* ಜಸ್ಟೀಸ್ ಗಂಗೂಲಿ ಮಾತುಗಳನ್ನು ಕೇಳಿ ನನಗೆ ಆಘಾತವಾಗಿದೆ. ಅಫ್ಜಲ್ ಗುರು ವಿರುದ್ಧ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ನೀವು ಪ್ರಶ್ನಿಸಿದ್ದೀರಿ.
* ಫೆಬ್ರವರಿ 09ರಂದು ಅಫ್ಜಲ್ ಗುರು ಪರ ನಡೆದ ಸಮಾರಂಭದಲ್ಲಿ ಕೇಳಿ ಬಂದ ಘೋಷಣೆಗಳು ಸುಪ್ರೀಂಕೋರ್ಟ್ ಹಾಗೂ ದೇಶದ ವಿರುದ್ಧವಾಗಿತ್ತು. ಇದನ್ನು ಖಂಡಿಸುವ ಬದಲು ನೀವು ಯಾವುದೋ ಒಬ್ಬ ವ್ಯಕ್ತಿಯನ್ನು ಅನಗತ್ಯವಾಗಿ ಮೇಲಕ್ಕೆ ತರುತ್ತಿದ್ದೀರಿ ಎಂದು ಜಸ್ಟೀಸ್ ಗಂಗೂಲಿ ಅವರಿಗೆ ತಿರುಗೇಟು ನೀಡಿದರು.

ತುರ್ತು ಪರಿಸ್ಥಿತಿ ಹೇರಿಕೆ-ಅಸಹಿಷ್ಣುತೆ

ತುರ್ತು ಪರಿಸ್ಥಿತಿ ಹೇರಿಕೆ-ಅಸಹಿಷ್ಣುತೆ

ವೈಯಕ್ತಿಕ ದ್ವೇಷ, ಬಿಜೆಪಿ ಪರ ಮಾತನಾಡುವುದು ಬೇಡ, ಯಾವುದೇ ಪೂರ್ವಗ್ರಹ ಇಲ್ಲದೆ ಭಾಷಣಕ್ಕೆ ಸಿದ್ಧನಾಗಿದ್ದೆ.

ರಣದೀಪ್ ಸುರ್ಜೆವಾಲ ಅವರು ಬಿಜೆಪಿ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ, ದೇಶದ ಎದುರಿಸಿದ ಅಸಹಿಷ್ಣುತೆ ಎಂದರೆ ಅದು ನಿಮ್ಮ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ ಸಂದರ್ಭದಲ್ಲಿ ಮಾತ್ರ. ಜನ ಸಾಮಾನ್ಯರು, ಅಮಾಯಕರನ್ನು ಜೈಲಿಗೆ ತಳ್ಳಲಾಯಿತು. ಇವರಲ್ಲಿ ನನ್ನ ಅಜ್ಜ ಕೂಡಾ ಇದ್ದರು.
ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಕಿಚಾಯಿಸಿದರು

ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಕಿಚಾಯಿಸಿದರು

ಒಬ್ಬ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ತಾಳ್ಮೆಯಿಂದ ಆತನನ್ನು ಸಹಿಸಿಕೊಂಡು ಬರುತ್ತಿದ್ದಾರೆ. ಆತನನ್ನು ಸಹಿಸಿಕೊಳ್ಳಬಹುದಾದರೆ ಇಡೀ ವಿಶ್ವವನ್ನೇ ಸಹಿಸಿಕೊಂಡಂತೆ ಎಂದು ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಅನುಪಮ್ ಖೇರ್ ಅವರು ಕಿಚಾಯಿಸಿದರು. ಈ ಸಂದರ್ಭದಲ್ಲಿ ನಟಿ ಕಾಜೋಲ್ ಅವರಿಗೆ ನಗೆ ತಡೆಯಲು ಸಾಧ್ಯವಾಗಲಿಲ್ಲ.

ಚಹಾವಾಲ ಪ್ರಧಾನಿಯಾಗಿದ್ದು ಸಹಿಸಲು ಆಗಲಿಲ್ಲ

ಚಹಾವಾಲ ಪ್ರಧಾನಿಯಾಗಿದ್ದು ಸಹಿಸಲು ಆಗಲಿಲ್ಲ

ಕಳೆದ 8 ತಿಂಗಳಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಪದದ ಬಗ್ಗೆ ಜನ ಸಾಮಾನ್ಯರಿಗೆ ತಿಳಿದೇ ಇರಲಿಲ್ಲ. ಈಗ ಎಲ್ಲೆಡೆ ಚರ್ಚೆಯಾಗುವಂತೆ ಮಾರ್ಕೆಟಿಂಗ್ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿನ ಸೋಲನ್ನು ಸಹಿಸಲಾಗದೆ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
* ಚಹಾವಾಲವಾಗಿದ್ದ ವ್ಯಕ್ತಿಯೊಬ್ಬ ಪ್ರಧಾನಿಯಾಗಿದ್ದು ಸಹಿಸಲು ಆಗಲಿಲ್ಲ. ಕಳೆದ ಎರಡು ವರ್ಷಗಳಿಂದ ರಜೆ ಪಡೆಯದೆ ದುಡಿಯುತ್ತಿದ್ದಾರೆ.

ನಾನು ಮೋದಿ ಅವರ ಪರ ಮಾತನಾಡುತ್ತಿಲ್ಲ

ನಾನು ಮೋದಿ ಅವರ ಪರ ಮಾತನಾಡುತ್ತಿಲ್ಲ

ನಾನು ಮೋದಿ ಅವರ ಪರ ಮಾತನಾಡುತ್ತಿಲ್ಲ. ದೇಶದ ನಾಗರಿಕನಾಗಿ ಇಲ್ಲಿ ನನ್ನ ಅಭಿಪ್ರಾಯ ಮಂಡಿಸುತ್ತಿದ್ದೇನೆ.
* ನನ್ನ ಪತ್ನಿ ಕಿರಣ್ ಬಿಜೆಪಿಯಲ್ಲಿದ್ದಾಳೆ ಎಂದು ನಾನು ಬಿಜೆಪಿ ಪರ ನಿಂತಿಲ್ಲ. ನಮ್ಮ ದಾಂಪತ್ಯ 3 ದಶಕಗಳನ್ನು ಕಂಡಿದೆ.
* 10 ವರ್ಷಗಳ ಕಾಲ ಮೌನವಾಗಿದ್ದನ್ನು ಸಹಿಸಿಕೊಂಡಿದ್ದೀರಿ. ನಮ್ಮ ಪ್ರಧಾನಿ ದೀಪಾವಳಿಯನ್ನು ಕಾಶ್ಮೀರದಲ್ಲಿ ಆಚರಿಸುತ್ತಾರೆ. ಮೂರು ಬಾರಿ ಗಲಭೆ ಪೀಡಿತ ಪ್ರದೇಶಕ್ಕೆ ಹೋಗಿ ಬಂದಿದ್ದಾರೆ.

ಅಸಹಿಷ್ಣುತೆ' ಬಗ್ಗೆ ಯಾರು ಮಾತನಾಡುತ್ತಿದ್ದಾರೆ

ಅಸಹಿಷ್ಣುತೆ' ಬಗ್ಗೆ ಯಾರು ಮಾತನಾಡುತ್ತಿದ್ದಾರೆ

* ಶ್ರೀಮಂತರು, 20 ಮಂದಿ ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುವವರು, ಬುದ್ಧಿಜೀವಿಗಳು 'ಅಸಹಿಷ್ಣುತೆ' ಬಗ್ಗೆ ಮಾತನಾಡುತ್ತಾರೆ.
* ಜನ ಸಾಮಾನ್ಯರಿಗೆ ಅಸಹಿಷ್ಣುತೆ ಪದವನ್ನು ಉಚ್ಚಾರಿಸಲು ಕಷ್ಟವಾಗುತ್ತದೆ. ದೈನಂದಿನ ಊಟ ಗಳಿಕೆ ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ.
* ಮೋದಿ ಅವರು ಜನರಿಂದ ಚುನಾಯಿತರಾಗಿದ್ದಾರೆ. ಅವರಿಗೆ ವೀಸಾ ನೀಡದಂತೆ ಆಗ್ರಹಿಸಿದ್ದವರಿಗೆ ಆಗುತ್ತಿದೆ ಅಸಹಿಷ್ಣುತೆ.

English summary
Pro-BJP actor Anupam Kher on Saturday accused the opposition of "marketing" the tolerance-intolerance debate as they lacked issues and were unable to stomach their defeat in the Lok Sabha polls two years back. He was speaking at the The Telegraph Debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X