ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹ್ಲಿ ಚಾಲೆಂಜ್ ಬೆನ್ನಲ್ಲೇ ಮೋದಿಗೆ ಸವಾಲೆಸೆದ ವಿರೋಧಿಗಳು

By Sachhidananda Acharya
|
Google Oneindia Kannada News

ನವದೆಹಲಿ, ಮೇ 24: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ಕೋಹ್ಲಿ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ.

ಆದರೆ ಫಿಟ್ನೆಸ್ ಚಾಲೆಂಜ್ ಅಲ್ಲ, ನಮ್ಮ ಚಾಲೆಂಜ್ ಸ್ವೀಕರಿಸಿ ಎಂದು ಮೋದಿಗೆ ವಿರೋಧ ಪಕ್ಷಗಳು ಸವಾಲೆಸೆದಿವೆ.

ಮೋದಿಗೆ ಕೊಹ್ಲಿ ಫಿಟ್ನೆಸ್ ಚಾಲೆಂಜ್: ಸವಾಲು ಸ್ವೀಕರಿಸಿದ ಪ್ರಧಾನಿಮೋದಿಗೆ ಕೊಹ್ಲಿ ಫಿಟ್ನೆಸ್ ಚಾಲೆಂಜ್: ಸವಾಲು ಸ್ವೀಕರಿಸಿದ ಪ್ರಧಾನಿ

ಈ ಕುರಿತು ಟ್ಟೀಟ್ ಮಾಡಿರುವ ಆರ್.ಜೆ.ಡಿಯ ತೇಜ್ ಪ್ರತಾಪ್ ಯಾದವ್, "ವಿರಾಟ್ ಕೊಹ್ಲಿಯವರ ಚಾಲೆಂಜ್ ಒಪ್ಪಿಕೊಂಡಿರುವುದಕ್ಕೆ ನಮಗೆ ಏನೂ ಅಭ್ಯಂತರವಿಲ್ಲ. ಯುವಕರಿಗೆ ಉದ್ಯೋಗ ನೀಡುವ, ರೈತರಿಗೆ ಸಹಾಯವಾಗುವ, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಯಾವುದೇ ದೌರ್ಜನ್ಯವಾಗದಂತೆ ನೋಡಿಕೊಳ್ಳುವ ಸವಾಲನ್ನು ನೀವು ಸ್ವೀಕರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ನನ್ನ ಚಾಲೆಂಜನ್ನು ಸ್ವೀಕರಿಸುತ್ತೀರಾ ನರೇಂದ್ರ ಮೋದಿ ಸರ್?" ಎಂದು ಟ್ಟೀಟ್ ಮಾಡಿದ್ದಾರೆ.

ಇದಾದ ಬೆನ್ನಿಗೆ ಇದಕ್ಕೆ ಧ್ವನಿ ಗೂಡಿಸಿ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಕೂಡ ಟ್ಟೀಟ್ ಮಾಡಿದ್ದಾರೆ.

ಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿ

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸಿ ಆರ್ಥಿಕತೆಯ ಫಿಟ್ನೆಸ್ ಸರಿದಾರಿಗೆ ತನ್ನಿ. 2 ಕೋಟಿ ಉದ್ಯೋಗ ನೀಡಿ ಉದ್ಯೋಗದ ಫಿಟ್ನೆಸ್ ಸರಿ ಮಾಡಿ. ನೀವು ಹೇಳಿದಂತೆ ರೈತರಿಗೆ ಉತ್ಪಾದನಾ ವೆಚ್ಚ + ಶೇಕಡಾ 50 ರಷ್ಟು ಲಾಭ ನೀಡಿ. 80 ಲಕ್ಷ ಕೋಟಿ ರೂ. ಕಪ್ಪು ಹಣ ಭಾರತಕ್ಕೆ ವಾಪಾಸು ತಂದು ಭ್ರಷ್ಟಾಚಾರದ ಸಮತೋಲನ ಕಾಪಾಡಿ. ದೇಶದ ಭದ್ರತೆಯ ಫಿಟ್ನೆಸ್ ನೋಡಿಕೊಳ್ಳಿ," ಎಂದು ಸವಾಲೆಸೆದಿದ್ದಾರೆ.

Opposition leaders Fitness Challenge to PM Modi

ಮಾಧ್ಯಮ ಸರ್ಕಸ್ ನಿಲ್ಲಿಸಿ ಆಡಳಿತದ ಸವಾಲನ್ನು ಸ್ವೀಕರಿಸಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದಾರೆ.

ಸದಾ ಕಾಲ ಟ್ಟೀಟ್ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಟ್ಟಿಟ್ಟರಿನಲ್ಲೇ ಒಡ್ಡಿರುವ ಈ ಸವಾಲಿಗೆ ಎದೆಯಡ್ಡುತ್ತಾರೋ? ಅಥವಾ ಎಂದಿನಂತೆ ಮೌನಕ್ಕೆ ಜಾರುತ್ತಾರೋ ಕಾದು ನೋಡೋಣ.

English summary
After Virat Kohli's fitness challenge to Prime Minister Narendra Modi, Bihar leader Tejashwi Yadav and Congress leader Randeep Singh Surjewala demanded Modi to accept their challenges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X