ಮಾರ್ಚ್ 26ಕ್ಕೆ ಬರ್ತಿದೆ ಸೆಲ್ಫಿಗಳ ರಾಜ ಒಪ್ಪೋ ಎಫ್ 7 ಮೊಬೈಲ್ ಫೋನ್!

Posted By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕಳೆದ ಐದು ವರ್ಷಗಳಿಂದ ಸೆಲ್ಫಿ ಚೆನ್ನಾಗಿ ಬರುವಂಥ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಫೋನ್ ಗಳ ಉತ್ಪಾದಕರು ಹೆಚ್ಚಾಗಿ ಫ್ರಂಟ್ ಕ್ಯಾಮೆರಾ ಚೆನ್ನಾಗಿರುವ ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಒಳ್ಳೆ ಪವರ್ ಇರುವ ಹಾಗೆ ನೋಡಿಕೊಳ್ತಿದ್ದಾರೆ.

ಇವತ್ತಿನ ದಿನಕ್ಕೆ ಅನ್ವಯಿಸಿ ಹೇಳುವುದಾದರೆ ಸೆಲ್ಫಿಗಾಗಿಯೇ ಇರುವಂಥ ಬಹುತೇಕ ಮೊಬೈಲ್ ಫೋನ್ ಗಳಲ್ಲಿ ಎರಡೆರಡು ಫ್ರಂಟ್ ಕ್ಯಾಮೆರಾ ಇರುತ್ತವೆ. ಡೆಪ್ತ್ ಆಫ್ ಫೀಲ್ಡ್ ತುಂಬಾ ಚೆನ್ನಾಗಿ ಮಾಡಿ, ಅದ್ಭುತವಾದ ಸೆಲ್ಫಿ ಚಿತ್ರಗಳಿಗೆ ಅಂತಲೇ ರೂಪಿಸಲಾಗುತ್ತದೆ.

ನಮ್ಮ ಬಗ್ಗೆ ನಾವು ಹೇಳಕೊಳ್ಳಬೇಕು, ಫೋಟೋಗಳು ಹಾಕಬೇಕು ಅನ್ನೋ ಆಕಾಂಕ್ಷೆ ಹೆಚ್ಚುತ್ತಲೇ ಇರುತ್ತದೆ. ಜತೆಗೆ ಅದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ಇನ್ನು ಸ್ಮಾರ್ಟ್ ಫೋನ್ ಗಳ ಕ್ಯಾಮೆರಾ ಜಗತ್ತು ಅದಕ್ಕೆ ಸಾಕ್ಷಿ ಅನ್ನೋ ರೀತಿಯಲ್ಲಿ ಅನೂಹ್ಯ ಬದಲಾವಣೆಯನ್ನು ಕಾಣುತ್ತಿದೆ.

OPPOs Journey Towards Redefining Selfies In Smartphones

ಈ ರೀತಿಯ ಸೆಲ್ಫಿ ಕೇಂದ್ರಿತ ಸ್ಮಾರ್ಟ್ ಫೋನ್ ಗಳನ್ನು ತುಂಬಾ ಚೆನ್ನಾಗಿ ಉತ್ಪಾದಿಸುತ್ತಿರುವುದು ಚೈನಾದ ಮೊಬೈಲ್ ಉತ್ಪಾದಕ ಕಂಪೆನಿ ಒಪ್ಪೋ. ಅತ್ಯುತ್ತಮವಾದದ್ದನ್ನೇ ಕೊಡುವ ವಿಚಾರದಲ್ಲಿ ಗ್ರಾಹಕರು ಏನನ್ನು ನಿರೀಕ್ಷೆ ಮಾಡುತ್ತಾರೆ ಎಂಬುದು ಅವರಿಗೆ ತುಂಬ ಚೆನ್ನಾಗಿ ಗೊತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಒಪ್ಪೋ ಬಹಳ ವೇಗವಾಗಿ ಅತ್ಯುತ್ತಮ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಹೆಸರಾಂತ ಬ್ರ್ಯಾಂಡ್ ಆಗಿದೆ. ಅದಕ್ಕೆ ಕಾರಣ ಕೂಡ ತುಂಬ ಸ್ಪಷ್ಟ. ಮೊಬೈಲ್ ಫೋಟೋಗ್ರಫಿ ಬಗ್ಗೆ ಅವರ ಗಮನ ಇದೆ. ಅದರಲ್ಲೂ ಸೆಲ್ಫಿ ಬಗ್ಗೆ ತುಂಬ ಗಮನ ಇಟ್ಟು ತಮ್ಮ ಮೊಬೈಲ್ ಫೋನ್ ಗಳನ್ನು ರೂಪಿಸುತ್ತಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಕ್ಯಾಮೆರಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅನಿರೀಕ್ಷಿತವೇನಲ್ಲ. ಇದನ್ನು ಕೇವಲ 'ಬದಲಾವಣೆ' ಅಂತಷ್ಟೇ ಹೇಳಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಿನದು ಅದು.

2013ನೇ ಇಸವಿ ನೆನಪಿಸಿಕೊಂಡರೆ, ಆಗ ಒಪ್ಪೋದಿಂದ N1 ಬಿಡುಗಡೆ ಮಾಡಲಾಯಿತು. ವಿಶ್ವದ ಮೊದಲ ತಿರುಗುವ 13 ಎಂಪಿ ಕ್ಯಾಮೆರಾ ಅದರಲ್ಲಿತ್ತು. ಮೊಬೈಲ್ ಫೋನ್ ನ ಮುಂಭಾಗ ಹಾಗೂ ಹಿಂಭಾಗದ ಕ್ಯಾಮೆರಾದಿಂದ ಅದ್ಭುತ ಫೋಟೋ ತೆಗೆಯಬಹುದಿತ್ತು. ಅದೇ ಸರಣಿಯ ಮುಂದಿನ ಮೊಬೈಲ್ ಫೋನ್ N3.

OPPOs Journey Towards Redefining Selfies In Smartphones

ಪೂರ್ತಿಯಾಗಿ ಆಟೋಮೆಟೆಡ್ ಆದ 16 ಎಂಪಿ ಕ್ಯಾಮೆರಾ ಇದ್ದ ಅದನ್ನು ನಿರ್ವಹಿಸುವುದಕ್ಕೆ ರಿಮೋಟ್ ಕಂಟೋಲ್ ಸಹ ಇತ್ತು. ಆ ನಂತರ ಒಂದಾದ ಮೇಲೆ ಒಂದು ಬಂದಿದ್ದು F1S ಮತ್ತು F1S ಪ್ಲಸ್. ಯಾವುದೇ ವಿವಾದ ಇಲ್ಲದೇ ಹೇಳಬಹುದಾಗಿತ್ತು, ಅದು ಅತ್ಯುತ್ತಮ ಕ್ಯಾಮೆರಾ ಫೋನ್ ಆಗಿತ್ತು. 16 ಎಂಪಿ ಕ್ಯಾಮೆರಾ ಇದ್ದ ಮೊಟ್ಟಮೊದಲ ಫೋನ್ ಅದಾಗಿತ್ತು.

2012ರಲ್ಲಿ ಆಗಿನ ಮಾರುಕಟ್ಟೆಯ ಸೆಲ್ಫಿ ಕ್ರೇಜನ್ನು ಗುರುತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು U701. ಬ್ಯೂಟಿಫೈ 1.0 ಟೆಕ್ನಾಲಜಿ ಇದ್ದ ಮೊದಲ ಫೋನ್ ಅದಾಗಿತ್ತು. ಬ್ಯೂಟಿಫೈ 4.0 ಜತೆಗೆ ಸಹಜ ಚರ್ಮದಂತೆ ಕಾಣುವಂತೆ ಮಾಡುವ, ಫೋಟೋದಲ್ಲಿ ಬೇಕಾದಂತೆ ಸೌಂದರ್ಯ ಹೆಚ್ಚಿಸುವ ಹಲವು ಬದಲಾವಣೆಗಳನ್ನು ಒಪ್ಪೋ F3 ಮತ್ತು ಒಪ್ಪೋ F3 ಪ್ಲಸ್ ನಲ್ಲಿ ಮಾಡಲಾಗಿತ್ತು.

ಈ ಬದಲಾವಣೆಯು ಒಪ್ಪೋದ ಬದಲಾವಣೆಯಲ್ಲಿ ಮಹತ್ತರವಾದುದನ್ನೇ ತಂದಿತು. ಏಳು ಹಂತದ ಚತುರ ಸೌಂದರ್ಯ ವರ್ಧನೆ, ಟೂ ಸ್ಕಿನ್ ಟೋನ್ ಮೋಡ್ ನಂಥದ್ದು ಪರಿಚಯಿಸಲಾಯಿತು. ಸ್ಮಾರ್ಟ್ ಫೋನ್ ನ ಆರಂಭದಿಂದಲೂ ಫೋಟೋದ ಸೌಂದರ್ಯ ಹೆಚ್ಚಿಸಲು ಸೆಲ್ಫಿ ಪ್ರೇಮಿಗಳಿಗೆ ಅನುಕೂಲ ಮಾಡಿಕೊಡುತ್ತಲೇ ಇದೆ.

ಒಪ್ಪೋದ ಸಾಫ್ಟ್ ವೇರ್ ಮಾಹಿತಿಗಳನ್ನು ಪಕ್ಕಕ್ಕಿಟ್ಟು ಹೇಳುವುದಾದರೆ, ಅದರ ಹಾರ್ಡ್ ವೇರ್ ಸಾಮರ್ಥ್ಯ ಹಾಗೂ ಸ್ಮಾರ್ಟ್ ಫೋನ್ ಕ್ಯಾಮೆರಾದ ಸಂಶೋಧನೆ ಹಾಗೂ ಅಭಿವೃದ್ಧಿಗೆ ದೊಡ್ಡ ಮಟ್ಟದ ಹೂಡಿಕೆ ಮಾಡಲಾಗಿದೆ. ಆಪ್ಟಿಕ್ಸ್ ನ ಆಚೆಗೆ ಹೇಳಬೇಕು ಅಂದರೆ ಒಪ್ಪೋದಿಂದ ಇಮೇಜ್ ಸೆನ್ಸಾರ್ ನಲ್ಲೂ ಬಹಳ ಬದಲಾವಣೆ ಮಾಡಲಾಗಿದೆ.

OPPOs Journey Towards Redefining Selfies In Smartphones

ಆಗಿಂದಾಗ ಸಾಫ್ಟ್ ವೇರ್, ಆಪ್ಟಿಕ್ಸ್ ಮತ್ತು ಇಮೇಜ್ ಸೆನ್ಸಾರ್ ನಲ್ಲಿ ಬದಲಾವಣೆ, ಅಭಿವೃದ್ಧಿ ಮಾಡುತ್ತಿರುವುದರಿಂದಲೇ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಲ್ಲೇ ಒಪ್ಪೋಗೆ ಪ್ರತ್ಯೇಕ ಸ್ಥಾನವಿದೆ. ಬರೀ ಬ್ರ್ಯಾಂಡ್ ನ ಹೆಸರಷ್ಟೇ ಅಲ್ಲ, ಮಾರಾಟದ ಲೆಕ್ಕಾಚಾರದಿಂದ ಜಾಗತಿಕ ಮಟ್ಟದಲ್ಲಿ ಒಪ್ಪೋ ಮೊಬೈಲ್ ಫೋನ್ ದು ದಾಖಲೆ.

ಇದೀಗ ಇನ್ನಷ್ಟು ಅತ್ಯುತ್ತಮ ಆಗ್ತಿದೆ ಒಪ್ಪೋ. ಇದೀಗ ಒಪ್ಪೋದಿಂದ ಹೊಸದಾಗಿ ಮಾರ್ಚ್ 26ರಂದು ಒಪ್ಪೋ F7 ಬಿಡುಗಡೆ ಆಅಗಲಿದೆ. ಸೆಲ್ಫಿ ಕ್ಯಾಮೆರಾದ ಸಾಮರ್ಥ್ಯದ ಪರಿಕಲಲ್ಪನೆಯನ್ನೇ ಪುನಃ ಬದಲಾಯಿಸುವಂತಿರಲಿದೆ ಎಂಬ ನಿರೀಕ್ಷೆ ಇದೆ.

ಈ ಮೊಬೈಲ್ ಫೋನ್ ನಲ್ಲಿ 25 ಮೆಗಾಪಿಕ್ಸೆಲ್ ನ ಫ್ರಂಟ್ ಕ್ಯಾಮೆರಾ ಇರಲಿದ್ದು, ಹೆಚ್ಚು ಸ್ಪಷ್ಟ ಹಾಗೂ ಸಣ್ಣ ಸಣ್ಣ ಅಂಶವನ್ನು ದಾಖಲಿಸುವ ಸೆಲ್ಫಿ ಕ್ಲಿಕ್ಕಿಸುವ ಫೋನ್ ಎಂಬ ಹೆಚ್ಚುಗಾರಿಕೆ F7 ಫೋನ್ ಗೆ ಸಿಗಲಿದೆ. ಇಮೇಜ್ ಸೆನ್ಸಾರ್ ಹೇಗೆ ರೂಪಿಸಲಾಗಿದೆ ಅಂದರೆ, ಫೋಟೋಗಳು ಹೆಚ್ಚು ಸ್ಪಷ್ಟ ಹಾಗೂ ವೇಗವಾಗಿ ತೆಗೆಯಲು ಅನುಕೂಲ ಆಗುತ್ತದೆ.

ಇದರ ಜತೆಗೆ F7 ಫೋನ್ ನಲ್ಲಿ ಮುಂದಿನ ತಲೆಮಾರಿನ ಸೆನ್ಸಾರ್- ಎಚ್ ಡಿಆರ್ ಇರುತ್ತದೆ. ಇದರಿಂದ ಬಣ್ಣಗಳ ಬಗೆಗಿನ ವ್ಯಾಖ್ಯಾನವೇ ಬದಲಾಗಲಿದೆ. ಜತೆಗೆ ಹೆಚ್ಚು ಕಾಂಟ್ರಾಸ್ಟ್ ಆದ ಫೋಟೋಗಳು ತುಂಬ ಕಡಿಮೆ ಬೆಳಕಿನ ಹಾಗೂ ಬ್ಯಾಕ್ ಲೈಟ್ ಸನ್ನಿವೇಶದಲ್ಲೂ ಬರಲಿವೆ.

ಇವೆಲ್ಲದರ ಹೊರತಾಗಿ ಒಪ್ಪೋ F7 ಫೋನ್ ಸೆಲ್ಫಿಯಲ್ಲಿ ಯಾಕೆ ವಿಶಿಷ್ಟ ಅಂತ ಕೇಳುವುದಾದರೆ, ಅದರಲ್ಲಿರುವ AI 2.0 ತಂತ್ರಜ್ಞಾನ ಹೊಂದಿದ್ದು, ಫೋಟೋ ಸೌಂದರ್ಯ ಹೆಚ್ಚಿಸುತ್ತದೆ. ಈ ತಂತ್ರಜ್ಞಾನ ನಿಮ್ಮ ಚರ್ಮ, ಕಣ್ಣು, ಕೂದಲು ಮುಂತಾದನ್ನು ಮತ್ತಷ್ಟು ಸುಂದರ ಆಗಿಸುತ್ತದೆ.

ನಿಮ್ಮ ಚರ್ಮದ ಟೋನ್, ವಯಸ್ಸು, ಗಂಡೋ- ಹೆಣ್ಣೋ ಎಂಬ ಆಧಾರದಲ್ಲಿ ಸೆಲ್ಫಿ ಫೋಟೋ ಸುಂದರವಾಗಿ ಕಾಣುತ್ತದೆ. ನಿಮ್ಮಂತೆಯೇ ಮತ್ತಷ್ಟು ಮಿರಿ ಮಿರಿ ಮಿಂಚುತ್ತದೆ. ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚು ಸುಂದರವಾಗಿ ಕಾಣಬಹುದು.

ಈ ಫೋನ್ AI ಹೊಂದಿರುವ ಎಡಿಟಿಂಗ್ ಹಾಗೂ ಫೋಟೋ ಆಲ್ಬಮ್ ಅಪ್ಲಿಕೇಷನ್ ಜತೆಗೆ ಬರುವ ಸಾಧ್ಯತೆ ಇದೆ. ಹೊಸದಾದ, ಮಜವಾದ ಫೀಚರ್ ಗಳಿರುವ F7ನಲ್ಲಿ ಅದಾಗಲೇ ಇರುವ ಕವರ್ ಶಾಟ್ ಮತ್ತು ಎಆರ್ ಸ್ಟಿಕ್ಕರ್ ಕೂಡ ಬರುತ್ತವೆ. ಇದರಿಂದ ಬಳಸುವವರೇ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಕಲಾವಿದರಾಗುತ್ತಾರೆ.

ಈ ಕವರ್ ಶಾಟ್ ಎಂಬ ಫೀಚರ್ ಬಳಸುವುದರಿಂದ ಸೆಲ್ಫಿಗಳಲ್ಲಿ ಬಣ್ಣಗಳ ಜತೆ ಆಟ ಆಡಬಹುದು. ಬಟ್ಟೆ, ಹಿನ್ನೆಲೆಯ ಬಣ್ಣವನ್ನೂ ಸೇರಿದಂತೆ ಫೋಟೋದ ಇತರ ಅಂಶಗಳನ್ನು ಬೇಕಾದಂತೆ ಚೆಂದಗೊಳಿಸಬಹುದು. ಮತ್ತೊಂದು ಕಡೆ ಎಆರ್ ಸ್ಟಿಕರ್, ಸ್ನಾಪ್ ಚಾಟ್ ಗಳಿಂದ ಸೆಲ್ಫಿಗಳಲ್ಲಿ ಮುದ್ದಾದ ಮೊಲ, ತಮಗೆ ಬೇಕಾದ ಸಿನಿಮಾ ತಾರೆ ಆಗಿ ಬದಲಾಯಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬಹುದು.

ಒಟ್ಟಾರೆ ಹೇಳಬೇಕೆಂದರೆ, ಒಪ್ಪೋದಿಂದ ಹೊಸ F7 ಅವತರಣಿಕೆ ಮೂಲಕ ಆಧುನಿಕ ದಿನ ಮಾನದ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಪುನರ್ ವ್ಯಾಖ್ಯಾನ ಮಾಡುತ್ತಿದೆ.

F7 ನಲ್ಲಿ 6.23 ಇಂಚಿನ ಪೂರ್ತಿ ಎಚ್ ಡಿ (1080X2280) ಡಿಸ್ ಪ್ಲೇ ಇರಲಿದ್ದು, ಅತ್ಯಾಧುನಿಕ ಸೂಪರ್ ಫುಲ್ ಸ್ಕೀನ್ 2.0 ಪ್ಯಾನಲ್ ಇರುತ್ತದೆ. ಸ್ಕ್ರೀನ್ ಮತ್ತು ಫೋನ್ ನ ಬಾಡಿ ಪ್ರಮಾಣ ಶೇ 89.1ರಷ್ಟಿರುತ್ತದೆ. ಇದರಿಂದಲೇ ಖಾತ್ರಿ ಆಗುವುದೇನು ಗೊತ್ತಾ? ದೊಡ್ಡ ಸ್ಕ್ರೀನ್ ನಲ್ಲಿ ಗೇಮಿಂಗ್ ಮತ್ತು ಏನನ್ನಾದರೂ ಓದುವ ಅನುಭವ ಅದ್ಭುತವಾಗಿರುತ್ತದೆ. ಜತೆಗೆ ಈ ಫೋನ್ ಅನ್ನು ಒಂದೇ ಕೈನಲ್ಲಿ ಹಿಡಿದುಕೊಳ್ಳಬಹುದು.

ಇನ್ನು ಮೂರು ಬೇರೆ ಬೇರೆ ಬಣ್ಣಗಳಲ್ಲಿ ಈ ಮೊಬೈಲ್ ಫೋನ್ ಇರಲಿದ್ದು, ಸೋಲಾರ್ ಕೆಂಪು, ನಕ್ಷತ್ರ ನೀಲಿ ಹಾಗೂ ಮೂನ್ ಲೈಟ್ ಸಿಲ್ವರ್ ನಲ್ಲಿ ಬರಲಿದೆ. ರಚನೆಯ (ಡಿಸೈನ್) ವಿಚಾರಕ್ಕೆ ಬಂದರೆ F7 ಒಂದು ಹೊಸ ಮಾದರಿ ಹುಟ್ಟು ಹಾಕುತ್ತದೆ. ಅಂಥ ಸೂಕ್ಷ್ಮ ಎಂಜಿನಿಯರಿಂಗ್ ಇದರಲ್ಲಿ ಇರಲಿದೆ.

128 ಜಿಬಿ ಸಾಮರ್ಥ್ಯದ ವಿಶೇಷ ಎಡಿಷನ್ ಗೆ ಬಳಸಿರುವ ಮಟೀರಿಯಲ್ ಪ್ರಮುಖವಾದ ಅಂಶ. ಇರಲಿ, ಈ ಫೋನ್ ಗೆ ಮಾರ್ಚ್ 26ರ ತನಕ ಕಾಯಲೇಬೇಕು. ಅವತ್ತೇ ಈ ಫೋನ್ ನ ಬಿಡುಗಡೆ. ಒಪ್ಪೋ F7 ಎಷ್ಟು ಬೆಲೆ, ಎಲ್ಲಿ ಸಿಗುತ್ತದೆ ಎಂಬುದೆಲ್ಲ ಅವತ್ತೇ ಗೊತ್ತಾಗುತ್ತದೆ. ಅಂದಹಾಗೆ ಇನ್ನೇನು ಮಾಹಿತಿ ಬೇಕಿದ್ದರೂ ಈ ಜಾಗದಲ್ಲೇ ನೋಡ್ತಿರಿ. ಫೋನ್ ನ ಬಿಡುಗಡೆ ಸೇರಿದ ಹಾಗೆ ಇತರ ಮಾಹಿತಿಗಳನ್ನು ಇಲ್ಲೇ ತಿಳಿಸ್ತೀವಿ.

ಒನ್ಇಂಡಿಯಾ ನ್ಯೂಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
OPPO is all set to launch the new OPPO F7 on March 26th which is anticipated to re-imagine the prowess of selfie cameras.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ