ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲಾರ್ ಹಗರಣ: ಮಾಜಿ ಸಿಎಂ ಚಾಂಡಿ ವಿರುದ್ಧ ತನಿಖೆಗೆ ಆದೇಶ

By ಅನುಷಾ ರವಿ
|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ : ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಆರೋಪಿಯಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಉಮ್ಮನ್ ಚಾಂಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ತಂಡದಿಂದ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ.

ಸೋಲಾರ್ ಹಗರಣದ ತನಿಖೆಯನ್ನು ಜಸ್ಟೀಸ್ ಶಿವರಾಜನ್ ಅವರು ತನಿಖೆ ನಡೆಸಿ ಸಲ್ಲಿಸಿರುವ ವರದಿಯನ್ನು ಆಧಾರಿಸಿ ಸಿಎಂ ಪಿಣರಾಯಿ ವಿಜಯನ್ ಅವರು ಈ ಆದೇಶ ಹೊರಡಿಸಿದ್ದಾರೆ.

ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು

ಯುಡಿಎಫ್ ಸರ್ಕಾರದ ಅವಧಿಯಲ್ಲಿ ಸ್ವಜನ ಪಕ್ಷಪಾತ, ಸೋಲಾರ್ ಹಗರಣದ ಆರೋಪ ಹೊತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಸಂಯುಕ್ತ ಪ್ರಜಾತಾಂತ್ರಿಕ ರಂಗದ (ಯುಡಿಎಫ್) 9 ನಾಯಕರ ವಿರುದ್ಧ ತನಿಖೆಗೆ ಜಸ್ಟೀಸ್ ಶಿವರಾಜನ್ ಆದೇಶ ನೀಡಿ, ವರದ ಸಲ್ಲಸಿದ್ದಾರೆ.

The Kerala government has ordered a Vigilance and Anti-Corruption Bureau probe against Congress leader and former Chief Minister Oommen Chandy. Read more at: https://www.oneindia.com/india/oommen-chandy-was-involved-in-solar-scam-says-report-kerala-govt-orders-acb-probe-2560834.html

ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತ್ರಿಶೂರಿನ ವಿಜಿಲೆನ್ಸ್ ಕೋರ್ಟ್, ಉಮ್ಮನ್ ಚಾಂಡಿ ಹಾಗೂ ಅಂದಿನ ಇಂಧನ ಸಚಿವ ಮೊಹಮ್ಮದ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೋರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?ಸೋರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?

ಮತ್ತೊಬ್ಬ ಆರೋಪಿ ಬಿಜು ರಾಧಾಕೃಷ್ಣನ್ ಅವರು ಈ ಹಿಂದೆ ಕೇರಳ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಆರೋಪಿಸಿದ್ದರು.

ಸೋಲಾರ್ ಹಗರಣ: ಬೆಂಗಳೂರು ಕೋರ್ಟಿನಿಂದ ಚಾಂಡಿಗೆ ಶುಭ ಸುದ್ದಿ ಸೋಲಾರ್ ಹಗರಣ: ಬೆಂಗಳೂರು ಕೋರ್ಟಿನಿಂದ ಚಾಂಡಿಗೆ ಶುಭ ಸುದ್ದಿ

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಬಿಜು ಸದ್ಯ ಜೈಲಿನಲ್ಲಿದ್ದಾರೆ.

English summary
The Kerala government has ordered a Vigilance and Anti-Corruption Bureau probe against Congress leader and former Chief Minister Oommen Chandy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X