ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದಾಯದ ಸಮಯ: ಶಾಶ್ವತವಾಗಿ ಮೌನವಾಗಲಿರುವ 'ವಿಕ್ರಂ' ಲ್ಯಾಂಡರ್!

|
Google Oneindia Kannada News

ಇನ್ನೊಂದೇ ದಿನ... ವಿಕ್ರಂ ಮಾತನಾಡದೆ ಉಳಿದರೆ ಮತ್ತೆಂದೂ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ! ಸೆಪ್ಟೆಂಬರ್ 21 ಕ್ಕೆ ಚಂದ್ರನ ಒಂದು ಪಾಕ್ಷಿಕ ಮುಗಿಯಲಿದ್ದು, ಲ್ಯಾಂಡರ್ ಇರುವ ದಕ್ಷಿಣ ಧ್ರುವದಲ್ಲಿ ಅಸಹನೀಯ ಎನ್ನಿಸುವಷ್ಟು ಚಳಿ ಆರಂಭವಾಗಲಿದೆ. ಈ ವಾತಾವರಣದಲ್ಲಿ ಲ್ಯಾಂಡರ್ ಬದುಕುಳಿಯುವುದಕ್ಕೆ ಸಾಧ್ಯವಿಲ್ಲ.

ಆದ್ದರಿಂದ ವಿಕ್ರಮನ ಆಯುಷ್ಯ ಇನ್ನೊಂದೇ ಒಂದು ದಿನ! ಚಂದ್ರನಲ್ಲಿ ಚಳಿ ಆರಂಭವಾಗಲಿದ್ದು, ಕನಿಷ್ಠ -200 ಡಿಗ್ರಿ ಸೆಲ್ಷಿಯಸ್ ವರೆಗೆ ತಾಪಮಾನ ಬದಲಾಗಲಿದೆ. ಲ್ಯಾಂಡರ್ ನ ಉಪಕರಣಗಳೆಲ್ಲ ಹೆಪ್ಪುಗಟ್ಟುವುದರಿಂದ ಅವುಗಳು ಮತ್ತೆ ಕಾರ್ಯಾಚರಿಸುವುದಕ್ಕೆ ಸಾಧ್ಯವಿಲ್ಲ ಎಂದು ಈ ಮೊದಲೇ ಇಸ್ರೋ ಹೇಳಿದೆ. ಆದ್ದರಿಂದಲೇ ಕಳೆದ ಹದಿಮೂರು ದಿನಗಳಿಂದ ವಿಕ್ರಂ ಜೊತೆ ಸಂಪರ್ಕ ಸಾಧಿಸುವ ಎಲ್ಲಾ ಸಾಧ್ಯತೆಗಳನ್ನೂ ಇಸ್ರೋ ಪ್ರಯೋಗಿಸಿದೆ.

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

ಇದರೊಟ್ಟಿಗೆ ನಾಸಾ ಸಹ ತನ್ನ ಆರ್ಬಿಟರ್ ಮೂಲಕ ವಿಕ್ರಂನ ಬಗ್ಗೆ ಮಾಹಿತಿ ಕಲೆ ಹಾಕುವ ಯತ್ನವನ್ನೂ ಮಾಡಿದೆ. ಆದರೆ ಇದುವರೆಗಿನ ಮಾಹಿತಿಯ ಪ್ರಕಾರ ಈ ಎಲ್ಲಾ ಪ್ರಯತ್ನಗಳೂ ಯಾವುದೇ ರೀತಿಯ ಧನಾತ್ಮಕ ಪಲಿತಾಂಶ ನೀಡಿಲ್ಲವಾದ್ದರಿಂದ ಸೆಪ್ಟೆಬರ್ 21 ಕ್ಕೆ ವಿಕ್ರಂ ಗೆ ಗುಡ್ ಬೈ ಹೇಳುವುದು ಬಹುತೇಕ ಖಚಿತವಾಗಿದೆ.

Only One day Left to regain contact with Vikram Lander

ಆದರೆ ಈಗಾಗಲೇ ಚಂದ್ರನ ಸಮೀಪ ಹಾರಾಡುತ್ತಿರುವ ಚಂದ್ರಯಾನ 2 ರ ಆರ್ಬಿಟರ್ ಏಳು ವರ್ಷಗಳ ಕಾಲ ತನ್ನ ಕೆಲಸವನ್ನು ಮಾಡಲಿದ್ದು, ಚಂದ್ರನ ದಕ್ಷಿಣ ಧ್ರುವದ ಕುರಿತ ಮಾಹಿತಿಯನ್ನು ನಿರಂತರವಾಗಿ ನೀಡಲಿದೆ.

ಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿ

ಸೆಪ್ಟೆಂಬರ್ 7 ರಂದು ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು.

English summary
Only One day Left to regain contact with Vikram Lander, Chandrayaan 2 Vikram Lander,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X