ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು

|
Google Oneindia Kannada News

ಬೆಂಗಳೂರು, ನವೆಂಬರ್ 18: ಇನ್ಮುಂದೆ ನಿಮ್ಮ ವಾಹನದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುಂಕ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಟೋಲ್‌ಬೂತ್‌ಗಳನ್ನು ಕ್ಯಾಶ್‌ಲೆಸ್‌ ಆಗಿಸಲು ಕೇಂದ್ರ ಸರ್ಕಾರ ಡಿ.1ರಿಂದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ

ಹೀಗಾಗಿ ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ ಟ್ಯಾಗ್ ಅಳವಡಿಸಿಕೊಂಡು ಟೋಲ್ ಪಾವತಿಸಬೇಕಾಗುತ್ತದೆ.ಹೊಸ ವ್ಯವಸ್ಥೆಯನ್ನು ಸುಸೂತ್ರವಾಗಿ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಎಲ್ಲಾ ರಾಜ್ಯಗಳಿಗೂ ನಿಯೋಜಿಸುತ್ತಿದೆ. ಡಿಸೆಂಬರ್ 1ರಿಂದ ಟೋಲ್ ಪಾವತಿಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ ಫಾಸ್ಟ್‌ಟ್ಯಾಗ್ ಮೂಲಕವೇ ನಡೆಯುತ್ತದೆ.

Only FASTag Payments At Toll Plazas From December 1

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ಟೋಲ್ ಪ್ಲಾಜಾಗಳಲ್ಲಿ ಒಂದು ಪ್ರವೇಶ ದ್ವಾರವನ್ನು ಹೈಬ್ರಿಡ್ ಆಗಿ ಬಳಸಲಾಗುತ್ತದೆ. ಅಲ್ಲಿ ಫಾಸ್ಟ್‌ಟ್ಯಾಗ್ ಹಾಗೂ ಇತರೆ ವಿಧಾನದಲ್ಲೂ ಟೋಲ್ ಸ್ವೀಕರಿಸಲಾಗುತ್ತದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಡಿಸೆಂಬರ್ 1ರಿಂದ ಶೇ.100ರಷ್ಟು ಜಾರಿಯಾಗುತ್ತದೆ ಎಂದು ಹೆದ್ದಾರಿ ಸಚಿವಾಲಯ ಹೇಳಿದೆ.

ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ತಂತ್ರಜ್ಞಾನದ ಮೂಲಕ ಟೋಲ್ ಪಾವತಿಸುವ ವಿಧಾನ ವಾಹನಗಳ ಮುಂಬದಿಯ ಗಾಜಿನ ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ ಅಂಟಿಸಲಾಗುತ್ತದೆ.

English summary
The December 1 deadline for converting all lanes barring one at NH toll plazas into fastag lanes is fast approaching.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X