ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಪವಾಡ ಮತ್ತು ದಾನಿಗಳ ಸಹಾಯ ಮಾತ್ರ ಪುಟಾಣಿಯನ್ನು ಉಳಿಸಬಲ್ಲದು

Google Oneindia Kannada News

2 ವರ್ಷದ ಈ ಪುಟ್ಟ ಮಗು 8 ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದೆ. ಒಮ್ಮೆ ಅಳಲು ಆರಂಭಿಸಿದರೆ ದೀರ್ಘ ಕಾಲದವರೆಗೆ ಅಳುತ್ತಲೇ ಇರುತ್ತಾನೆ. ಮೊದಲಿಗೆ ಅಳುವುದು ಸಾಮಾನ್ಯ ಎಂದು ತಿಳಿದಿದ್ದ ಹೆತ್ತವರು ಇದು ವಿಪರೀತವಾದಾಗ ಲುಧಿಯಾನ ಮತ್ತು ದೆಹಲಿಯ ಹಲವಾರು ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.

ಆಗ ಮಗು ಗಂಭಿರ ಕಾಯಿಲೆಯಿಂದ ನರಳುತ್ತಿರುವುದು ತಿಳಿದುಬಂದಿದೆ. ಫೋರ್ಟಿಸ್ ಆಸ್ಪತ್ರೆಗೆ ತೋರಿಸಿದಾಗ ದೇಹಕ್ಕೆ ಸಾಕಾಗುವಷ್ಟು ರಕ್ತವನ್ನು ಶುದ್ಧಗೊಳಿಸಿ ಪಂಪ್ ಮಾಡುವಷ್ಟು ಮಗುವಿನ ಹೃದಯಕ್ಕೆ ಶಕ್ತಿಯಿಕ್ಕಿಲ್ಲ ಎಂದು ಹೇಳಿದಾಗ ಪೋಷಕರ ಜಂಘಾಬಲವೇ ಉಡುಗಿಹೋಗಿದೆ.

ಆದರೆ, ಮಾಡುವುದಾದರೂ ಏನು? ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕಲ್ಲ? "ನಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈಗಾಗಲೇ ಎಲ್ಲಾ ದೇವರನ್ನು ಪ್ರಾರ್ಥಿಸಿದ್ದೇವೆ. ಇನ್ನೇನಿದ್ದರೂ ಪವಾಡ ಆಗಬೇಕು, ಅದೃಷ್ಟ ಇದ್ದರೆ ಬದುಕುಳಿಯುತ್ತಾನೆ" ಎಂದು ಮಗುವಿನ ತಂದೆ ಅಂಕುರ್ ಕಂಬನಿ ಮಿಡಿಯುತ್ತಾರೆ.

ಎರಡು ವರ್ಷದ ಕೃತಿಕ್ 8 ತಿಂಗಳಿಂದ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಅವನ ಕಣ್ಣುಗಳು ಮತ್ತು ಚರ್ಮ ಮಂದವಾಗುತ್ತಾ ಬಂದಿದೆ. ಆರೋಗ್ಯಕರವಾದ 2 ವರ್ಷದ ವಯಸ್ಸಿನ ಮಗು 10 ಕೆ.ಜಿ ತೂಕ ಹೊಂದಿರಬೇಕು. ಆದರೆ ಕೃತಿಕ್ 6 ಕೆ.ಜಿ ಇದ್ದಾನೆ. ದಿನದಿನಕ್ಕೆ ಕೃಶನಾಗುತ್ತಿದ್ದಾನೆ.

ಕೃತಿಕ್‌ನನ್ನು ಉಳಿಸಲು ಹೃದಯ ಶಸ್ತ್ರ ಚಿಕಿತ್ಸೆ ನಡೆಯಲೇಬೇಕಿದೆ. ಅದಕ್ಕೆ 5 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪಂಜಾಬ್ ನ ಜಲಂಧರ್ ಅಲ್ಲಿ ಗ್ಯಾಸ್ ದುರಸ್ತಿ ಮಾಡುವ ಮೂಲಕ ಜೀವನ ಸಾಗಿಸುವ ಅಂಕುರ್‌ಗೆ ತನ್ನ ಮಗುವಿನ ಶಸ್ತ್ರ ಚಿಕಿತ್ಸೆಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ನೀಡಿರುವ ಧನ ಸಹಾಯದಿಂದ ಕೃತಿಕ್‍ಗೆ ಈವರೆಗೆ ಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು. ಆದರೆ ಶಸ್ತ್ರ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಹೊಂದಿಸಲು ಅಸಮರ್ಥರಾಗಿದ್ದಾರೆ ಅಂಕುರ್. ತನ್ನ ಮಗುವಿನ ಜೀವ ಉಳಿಸಲು ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ದಾನಿಗಳು ದೊಡ್ಡ ಮನಸ್ಸು ಮಾಡಿ ಈ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದಲ್ಲಿ ಒಂದು ಪುಟ್ಟ ಕಂದನ ಜೀವವನ್ನು ಉಳಿಸಿದಂತಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X