ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿನ್ನೂ ಸ್ತನ್ಯಪಾನದ ಮಹತ್ವ ಅರಿವಾಗಿಲ್ಲ!

|
Google Oneindia Kannada News

ನವದೆಹಲಿ, ಫೆಬ್ರವರಿ 13: ಭಾರತದಲ್ಲಿ ಕೇವಲ 54.9 ಪ್ರತಿಶತ ಶಿಶುಗಳಿಗೆ ಮಾತ್ರವೇ ಆರು ತಿಂಗಳವರೆಗೆ ತಾಯಿಹಾಲಷ್ಟೇ ಆಹಾರವಾಗಿ ಸಿಕ್ಕುತ್ತಿದೆ. ಉಳಿದ ಶೇ.46 ರಷ್ಟು ಶಿಶುಗಳಿಗೆ ಎದೆಹಾಲಿನೊಂದಿಗೆ ಬೇರೆ ಹಾಲನ್ನೂ ನೀಡಲಾಗುತ್ತದೆ. ಆದರೆ ಶಿಶುವಿಗೆ ಆರು ತಿಂಗಳು ಪೂರೈಸುವವರೆಗೆ ಎದೆ ಹಾಲಷ್ಟನ್ನೇ ನೀಡಬೇಕು ಎನ್ನುತ್ತಾರೆ ಶಿಶು ತಜ್ಞರು.

ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳು ಎದೆಹಾಲಿನಲ್ಲಿಯೇ ಹೇರಳವಾಗಿರುವುದರಿದ ಮಕ್ಕಳಿಗೆ ಆರು ತಿಂಗಳು ಪೂರೈಸುವವರೆಗೆ ಕೇವಲ ತಾಯಿ ಹಾಲನ್ನಷ್ಟೇ ನೀಡಬೇಕು. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಇಂದು ವಿವಿಧ ಕಾರಣಗಳಿಂದ ಶಿಶುವಿಗೆ ಅಗತ್ಯ ಇರುವಷ್ಟು ತಾಯಿ ಹಾಲು ದೊರಕುತ್ತಿಲ್ಲ.

ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ(ಎನ್ ಎಚ್ ಎಪ್ ಎಸ್-4) ನೀಡಿದ ವರದಿಯಲ್ಲಿ ಈ ವಿಷಯ ಬಹಿರಂಗ ಗೊಂಡಿದ್ದು, ಆತಂಕ ಸೃಷ್ಟಿಸಿದೆ.

Only 54.9 % newborns are exclusively breastfed in India

ಆಂಧ್ರಪ್ರದೇಶದಲ್ಲಿ ಶೇ.71.1 ರಷ್ಟು ಶಿಶುಗಳು ತಾಯಿ ಹಾಲನ್ನಷ್ಟೇ ಪಡೆಯುತ್ತಿದ್ದರೆ, ಕರ್ನಾಟಕದಲ್ಲಿ ಶೇ.54.2 ರಷ್ಟು ಶಿಶುಗಳು ಆರು ತಿಂಗಳವರೆಗೆ ಕೇವಲ ತಾಯಿಹಾಲನ್ನಷ್ಟೇ ಪಡೆಯುತ್ತಿವೆ. ಉಳಿದಂತೆ ಕೇರಳದಲ್ಲಿ 53.3,% ತೆಲಂಗಾಣ 56.8% ಮಕ್ಕಳು ತಾಯಿಹಾಲನ್ನಷ್ಟೇ ಆವಾರವಾಗಿ ಪಡೆಯುತ್ತಿವೆ.

ಆಧುನೀಕರಣದ ಪ್ರಭಾವ, ಹೆರಿಗೆಯಾದ ಕೆಲವೇ ತಿಂಗಳುಗಳಲ್ಲಿ ವೃತ್ತಿಗೆ ಹಾಜರಾಗಬೇಕಾದ ಅನಿವಾರ್ಯ, ಸೌಂದರ್ಯ ಪ್ರಜ್ಞೆ ಎಲ್ಲವೂ ಸೇರಿ ಪುಟ್ಟ ಶಿಶುಗಳು ತಾಯಿ ಹಾಲಿನಿಂದ ವಂಚಿತವಾಗುವಂತೆ ಮಾಡುತ್ತಿವೆ. ಆದರೆ ಶಿಶುಗಳಿಗೆ ಆರು ತಿಂಗಳವರೆಗೆ ಕೇವಲ ಎದೆಹಾಲು ಮತ್ತು ಆರು ತಿಂಗಳ ನಂತರ ಸುಮಾರು ಒಂದೂವರೆ ವರ್ಷದಿಂದ ಮಗುವಿಗೆ ಎರಡು ವರ್ಷ ಪೂರೈಸುವವರೆಗೆ ಬೇರೆ ಆಹಾರದೊಂದಿಗೆ ಎದೆಹಾಲನ್ನೂ ನೀಡುವುದು ಕೇವಲ ಮುಗಿವಿಗಷ್ಟೇ ಅಲ್ಲ, ತಾಯಿಗೂ ಒಳ್ಳೆಯದು. ಇದರಿಂದ ಬ್ರೆಸ್ಟ್ ನ್ಯಾನ್ಸರ್ ನಂಥ ಸಮಸ್ಯೆಗಳು ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು.

English summary
According to the latest National Health and Family Survey (NHFS-4), only 54.9 % children under the age of six months have been exclusively breastfed in India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X