ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸುರಕ್ಷತೆಗೆ ರಾಹುಲ್ ಗಾಂಧಿಯೇ ಬೆಸ್ಟ್ ಎಂದವರೆಷ್ಟು ಜನ?

|
Google Oneindia Kannada News

ನವದೆಹಲಿ, ಜೂನ್.24: ಭಾರತ-ಚೀನಾ ಗಡಿಯ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದರು.

Recommended Video

World No.1 Tennis player Novak DJokovic Tests Positive for Coronavirus | Oneindia Kannada

ದೇಶದ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಕೇಂದ್ರ ಸರ್ಕಾರವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತೀಯ ಯೋಧರ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು.

ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?

ಕೇಂದ್ರ ಸರ್ಕಾರವನ್ನು ಟೀಕಿಸಿದ ವೈಖರಿ ಕಂಡು ಸಂಸದ ರಾಹುಲ್ ಗಾಂಧಿ ದೇಶದ ಸುರಕ್ಷತೆಯನ್ನು ಕಾಪಾಡುವ ನಾಯಕರ ಪಟ್ಟಿಯಲ್ಲಿ ನಿಲ್ಲುವುದಾದರೆ ಎಷ್ಟು ಜನ ಬೆಂಬಲಿಸುತ್ತಾರೆ ಎನ್ನುವುದರ ಕುರಿತು ಸಿ-ವೋಟರ್ ಸಂಸ್ಥೆಯು ಸಮೀಕ್ಷೆಯೊಂದನ್ನು ನಡೆಸಿದೆ. ಹೀಗೆ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶವು ಹೊರ ಬಿದ್ದಿದೆ.

ಸಂಸದ ರಾಹುಲ್ ಗಾಂಧಿಯವರಿಗೆ ಶೇ.39ರಷ್ಟು ಬೆಂಬಲ

ಸಂಸದ ರಾಹುಲ್ ಗಾಂಧಿಯವರಿಗೆ ಶೇ.39ರಷ್ಟು ಬೆಂಬಲ

ಭಾರತದ ಸುರಕ್ಷತೆ ವಿಚಾರದಲ್ಲಿ ಶೇ.39ರಷ್ಟು ಜನರು ಸಂಸದ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದಾರೆ. ಉಳಿದಂತೆ ಶೇ.61ರಷ್ಟು ಜನರು ರಾಹುಲ್ ಗಾಂಧಿ ವಿರುದ್ಧ ಮತ ಚಲಾಯಿಸಿದ್ದಾರೆ. ಶೇ.14.4ರಷ್ಟು ಜನರು ರಾಹುಲ್ ಗಾಂಧಿಯವರನ್ನು ಹೆಚ್ಚಿನ ಪ್ರಮಾಣದಲ್ಲಿ ನಂಬಬಹುದು ಎಂದಿದ್ದಾರೆ. ಶೇ.24.3ರಷ್ಟು ಜನರು ಸ್ವಲ್ಪ ಮಟ್ಟಿಗೆ ನಂಬಬಹುದು ಎಂದಿದ್ದಾರೆ. ಆದರೆ ಶೇ.61.3ರಷ್ಟು ಜನರು ಸುರಕ್ಷತೆ ವಿಚಾರದಲ್ಲಿ ರಾಹುಲ್ ಗಾಂಧಿಯವರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

ಪುರುಷ ಮತ್ತು ಮಹಿಳೆಯರ ಪ್ರಮಾಣ ಎಷ್ಟಿದೆ?

ಪುರುಷ ಮತ್ತು ಮಹಿಳೆಯರ ಪ್ರಮಾಣ ಎಷ್ಟಿದೆ?

ಸಂಸದ ರಾಹುಲ್ ಗಾಂಧಿಯವರನ್ನು ದೇಶದ ಸುರಕ್ಷತೆಯ ವಿಚಾರದಲ್ಲಿ ಉತ್ತಮ ನಾಯಕ ಎಂದು ಶೇ.39ರಷ್ಟು ಜನರು ಬೆಂಬಲಿಸಿದ್ದಾರೆ. ಈ ಪೈಕಿ ಶೇ.16 ಪುರುಷರು ಹಾಗೂ ಶೇ.12ರಷ್ಟು ಮಹಿಳೆಯರು ಅತ್ಯುತ್ತಮ ನಾಯಕ ಎಂದಿದ್ದರೆ, ಶೇ.26ರಷ್ಟು ಪುರುಷರು ಮತ್ತು 22.6ರಷ್ಟು ಮಹಿಳೆಯರು ಉತ್ತಮ ನಾಯಕ ಎಂದಿದ್ದಾರೆ.

ರಾಹುಲ್ ಗಾಂಧಿರನ್ನು ಬೆಂಬಲಿಸಿದವರ ಜಾತಿವಾರು ಲೆಕ್ಕಾಚಾರ

ರಾಹುಲ್ ಗಾಂಧಿರನ್ನು ಬೆಂಬಲಿಸಿದವರ ಜಾತಿವಾರು ಲೆಕ್ಕಾಚಾರ

ಭಾರತದ ಸುರಕ್ಷತೆಗೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿಯವರನ್ನು ನಾಯಕ ಎಂದು ಒಪ್ಪಿಕೊಂಡವರಲ್ಲಿ ಹೆಚ್ಚಾನುಹೆಚ್ಚು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಶೇ.43.9ರಷ್ಟು ಮುಸ್ಲಿಂ ಸಮುದಾಯದ ಜನರು ಅತ್ಯುತ್ತಮ ನಾಯಕ ಎಂದಿದ್ದರೆ, ಶೇ.39.3ರಷ್ಟು ಮುಸ್ಲಿಮರು ಉತ್ತಮ ನಾಯಕ ಎಂದು ಬೆಂಬಲಿಸಿದ್ದಾರೆ. ಕೇವಲ 16ರಷ್ಟು ಮುಸ್ಲಿಮರು ಮಾತ್ರ ಅವರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದಿದ್ದಾರೆ. ಇನ್ನು, ಶೇ.90ರಷ್ಟು ಕ್ರಿಸ್ತರು ಹಾಗೂ ಶೇ.71ರಷ್ಟು ಸಿಖ್ಖರು ರಾಹುಲ್ ಗಾಂಧಿರನ್ನು ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದು ವಿರೋಧ ವ್ಯಕ್ತಪಡಿಸಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಇದರ ಜೊತೆಗೆ ಮೇಲ್ವರ್ಗದ ಹಿಂದೂಗಳಲ್ಲಿ ಶೇ.69ರಷ್ಟು ಜನರು ಹಾಗೂ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೆ ಸೇರಿದ ಶೇ.71ರಷ್ಟು ಜನರು ರಾಹುರ್ ಗಾಂಧಿ ವಿರುದ್ಧ ಮತ ಚಲಾಯಿಸಿದ್ದಾರೆ.

ಪದವೀಧರರು ರಾಹುಲ್ ಗಾಂಧಿಯವರಿಗೆ ನೀಡಿದ್ದೆಷ್ಟು ಮತ?

ಪದವೀಧರರು ರಾಹುಲ್ ಗಾಂಧಿಯವರಿಗೆ ನೀಡಿದ್ದೆಷ್ಟು ಮತ?

ಶಿಕ್ಷಣ ರಂಗದಲ್ಲಿ ಸಂಸದ ರಾಹುಲ್ ಗಾಂಧಿಯವರಿಗೆ ಅದೆಷ್ಟು ಮತ ನೀಡಿದ್ದಾರೆ ಎನ್ನುವುದನ್ನು ಗಮನಿಸಿದಾಗ ಅಚ್ಚರಿ ಮೂಡುತ್ತದೆ. ಉನ್ನತ ಪದವೀಧರರಾಗಿರುವ ಸಂಸದ ರಾಹುಲ್ ಗಾಂಧಿಯವರಿಗೆ ಉನ್ನತ ಶಿಕ್ಷಣ ಪಡೆದ ಶೇ.67.2ರಷ್ಟು ಜನರು ವಿರುದ್ಧ ಮತ ಚಲಾಯಿಸಿದ್ದಾರೆ. ಸಂಸದರನ್ನು ದೇಶದ ಸುರಕ್ಷತೆ ವಿಚಾರದಲ್ಲಿ ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು, ಅತಿಹೆಚ್ಚು ಆದಾಯ ಗಳಿಸುವ ಉದ್ಯಮಿಗಳ ವಲಯದಲ್ಲಿ ಶೇ.72ರಷ್ಟು ಜನರು ರಾಹುಲ್ ಗಾಂಧಿ ಉತ್ತಮ ನಾಯಕ ಎಂದು ಒಪ್ಪಿಕೊಳ್ಳಲಾಗದು ಎಂದಿದ್ದಾರೆ.

ಪ್ರಧಾನಿ 'ಸರೆಂಡರ್ ಮೋದಿ' ಎಂದು ಟೀಕಿಸಿದ್ದ ರಾಹುಲ್ ಗಾಂಧಿ

ಪ್ರಧಾನಿ 'ಸರೆಂಡರ್ ಮೋದಿ' ಎಂದು ಟೀಕಿಸಿದ್ದ ರಾಹುಲ್ ಗಾಂಧಿ

ಭಾರತ-ಚೀನಾ ಸಂಘರ್ಷ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸಂಸದ ರಾಹುಲ್ ಗಾಂಧಿ ಕೆಂಡ ಕಾರಿದ್ದರು. ಚೀನಾ ಯೋಧರಿಗೆ ದೇಶದ ಗಡಿ ಪ್ರದೇಶವನ್ನು ಪ್ರಧಾನಿಯವರು ಸರೆಂಡರ್ ಮಾಡಿದ್ದಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲ, ಸರೆಂಡರ್ ಮೋದಿ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪೂರಕವಾಗುವಂತೆ ಟ್ವೀಟ್ ವೊಂದನ್ನು ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಗಡಿ ಪ್ರದೇಶಕ್ಕೆ ಯಾರೊಬ್ಬರೂ ಅತಿಕ್ರಮಿಸಿಲ್ಲ ಎಂದಿದ್ದರು. ಆದರೆ ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ಯಾಂಗಾಂಗ್ ನದಿವರೆಗೆ ಚೀನಾ ಯೋಧರು ನುಗ್ಗಿರುವುದು ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ರಾಹುಲ್ ಗಾಂಧಿ ಫೋಟೋ ಸಹಿತ ಟ್ವೀಟ್ ಮಾಡಿದ್ದರು.

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸೇನಾ ಸಂಘರ್ಷ

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸೇನಾ ಸಂಘರ್ಷ

ಕಳೆದ ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.

English summary
Only 39% Indians Trust Rahul Gandhi On National Security: C-Voter Survey Reveal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X