ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಹಂತದ ಪ್ರಯೋಗದಲ್ಲಿವೆ ಕೇವಲ 3 ಕೊರೊನಾ ಲಸಿಕೆಗಳು

|
Google Oneindia Kannada News

ನವದೆಹಲಿ, ಜುಲೈ 31:ಇಡೀ ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದಂತೆ ಸಂಶೋಧಕರು ಲಸಿಕೆ ಸಂಶೋಧಿಸಿ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೀಗ ಇಡೀ ವಿಶ್ವದಲ್ಲೇ ಕೇವಲ ಮೂರು ಲಸಿಕೆಗಳು ಪ್ರಯೋಗದ ಮೂರನೇ ಹಂತವನ್ನು ತಲುಪಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

ಯುಎಸ್‌ಎ, ಯುಕೆ, ಚೀನಾ ಮೂರು ದೇಶಗಳಲ್ಲಿ ಲಸಿಕೆಯ ಮೂರನೇ ಹಂತವನ್ನು ತಲುಪಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Only 3 Corona Vaccine Candidates In Phase III Across World

ಜುಲೈ 24 ರಂದು ವಿಶ್ವಸಂಸ್ಥೆ ಪ್ರಕಟಿಸಿದ ಬುಲೆಟಿನ್‌ನಲ್ಲಿ ಒಟ್ಟು ಮೂರು ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಗಳು ನಡೆಯಲಿವೆ. ಒಟ್ಟು 141 ಲಸಿಕೆಗಳು ಪ್ರಿ ಕ್ಲಿನಿಕಲ್ ಟ್ರಯಲ್‌ನಲ್ಲಿದೆ ಎಂದು ತಿಳಿಸಿದ್ದಾರೆ.

ಕ್ಲಿನಿಕಲ್ ಟ್ರಯಲ್ 1150 ವಿಷಯಗಳ ಮೇಲೆ ನಡೆದಿದೆ. ಭಾರತವು ಲಸಿಕೆ ಉತ್ಪಾದನಾ ಹಬ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಗಳನ್ನು ವಿಶ್ವದ ಮೂಲೆ ಮೂಲೆಗಳಿಗೆ ತಲುಪಿಸಲು ಯೋಜನೆನ್ನು ಹಾಕಿಕೊಂಡಿದೆ.

ಇದುವರೆಗೂ ಭಾರತವು ಲಸಿಕೆ ಉತ್ಪಾದನೆಗೆ ಯಾವುದೇ ಫಾರ್ಮಾ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಇಂಟರ್‌ನ್ಯಾಷನಲ್ ಏಜೆನ್ಸಿಗಳು ಲಸಿಕೆ ಉತ್ಪಾದನೆ ಹಾಗೂ ಮಾರಾಟಕ್ಕೆ ಯೋಜನೆಯನ್ನು ರೂಪಿಸಲಿದೆ. ಪ್ರತ್ಯೇಕ ದೇಶಗಳು ಆ ಲಸಿಕೆಯನ್ನು ಖರೀದಿಸಲಿವೆ.

English summary
In the development related to the COVID19 vaccine across the world , only three vaccine candidates are in phase 3 clinical trials across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X