ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಂಪೂರ್ಣ ಲಸಿಕೆ ಪಡೆದ ಪ್ರಮಾಣ ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ಜೂನ್ 14: ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಭಾರತ ಮೂರನೇ ಅಲೆಯ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಆರಂಭಿಸಿದೆ. ಆದರೆ ಮೂರನೇ ಅಲೆಯನ್ನು ಎದುರಿಸಲು ಬಹಳ ಮುಖ್ಯ ಅಸ್ತ್ರ ಎನಿಸಿಕೊಂಡಿರುವ ಲಸಿಕೆ ನೀಡುವ ಪ್ರಮಾಣ ಇನ್ನೂ ಅಂದುಕೊಂಡ ವೇಗವನ್ನು ಪಡೆಯುತ್ತಿಲ್ಲ.

ಭಾರತದಲ್ಲಿ ಮೊದಲ ಡೋಸ್‌ ಲಸಿಕೆಯನ್ನು ನೀಡುವ ಕಾರ್ಯಕ್ರಮ ವೇಗವನ್ನು ಪಡೆದುಕೊಳ್ಳುತ್ತಿದೆ. ಆದರೆ ಈವರೆಗೆ ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡವರ ಪ್ರಮಾಣ ಮಾತ್ರ ಇನ್ನೂ ಎರಡಂಕಿ ತಲುಪಿಲ್ಲ ಎಂಬುದು ಪ್ರಮುಖ ಸಂಗತಿ. ಎರಡೂ ಲಸಿಕೆ ಪಡೆದ ಒಟ್ಟು ಪ್ರಮಾಣ 3.5 ಶೇಕಡಾ ಎನ್ನುತ್ತಿವೆ ಅಂಕಿಅಂಶಗಳು.

ಇನ್ನು ಭಾರತದಲ್ಲಿ 21.8% ವಯಸ್ಕರು ಮೊದಲ ಡೋಸ್ ಪಡೆದುಕೊಂಡಿದ್ದರೆ 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 42.1% ಪ್ರಮಾಣದ ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 45.9% ಪ್ರಮಾಣದಲ್ಲಿ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮೊದಲ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 15 ರಷ್ಟು ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರೆ 3.5 ಶೇಕಡಾ ಜನರು ಎರಡೂ ಡೋಸ್ ಲಸಿಕೆಯನ್ನು ಪಡದುಕೊಂಡಿದ್ದಾರೆ.

only 3.5 percent of the population has been fully vaccinated

ಜೂನ್ 13ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 24 ಗಂಟೆಗಳ ಅಂತರದಲ್ಲಿ ಲಸಿಕೆಯನ್ನು ಪಡೆದವರ ಸಂಖ್ಯೆ 34.84 ಲಕ್ಷ. ಇದು ಹಿಂದಿನ 24 ಗಂಟೆಗಳಿಗೆ ಹೋಲಿಸಿದರೆ 50,476 ಡೋಸ್ ಅಧಿಕವಾಗಿದೆ. ಒಂದು ವಾರ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೆ ಈ ಪ್ರಮಾಣ 1.3 ಲಕ್ಷದಷ್ಟು ಏರಿಕೆಯಾಗಿದೆ.

ಎರಡನೇ ಅಲೆಯ ಕೊರೊನಾವೈರಸ್‌ನ ಅಬ್ಬರ ಭಾರತದಲ್ಲಿ ಕಡಿಮೆಯಾಗುತ್ತಿದ್ದರೂ ನಿತ್ಯವೂ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಇನ್ನೂ ಮೊದಲ ಸ್ಥಾನದಲ್ಲಿಯೇ ಇದೆ. 90 ಸಾವಿರೆದ ಆಸುಪಾಸಿನಲ್ಲಿ ನಿತ್ಯವೂ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಭಾರತದವನ್ನು ಹೊರತು ಪಡಿಸಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ದೇಶಗಳಲ್ಲಿ 66,770 ಹೊಸ ಪ್ರಕರಣಗಳನ್ನು ದಾಖಲಿಸಿ ಬ್ರೆಜಿಲ್ ನಂತರದ ಸ್ಥಾನದಲ್ಲಿದ್ದರೆ ಕೊಲಂಬಿಯಾದಲ್ಲಿ 25,384 ಪ್ರಕರಣಗಳು ಭಾನುವಾರ ದಾಖಲಾಗಿದೆ. ಜೂನ್ 12ರ ವೇಳೆಗೆ ವಿಶ್ವದಲ್ಲಿ ದಾಖಲಾಗುತ್ತಿರುವ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯ ಶೇಕಡಾ 24ರಷ್ಟು ಭಾರತದಲ್ಲಿ ಪತ್ತೆಯಾಗುತ್ತಿದೆ.

English summary
Only 3.5 percent of the population has been fully vaccinated As of June 13, 2021. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X