ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಯುವಕರಿಗೆ ಕೊರೊನಾವೈರಸ್ ಲಸಿಕೆಯೇ ಸಿಗುತ್ತಿಲ್ಲ!

|
Google Oneindia Kannada News

ನವದೆಹಲಿ, ಮೇ 12: ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ಅನುಮೋದಿಸಿ 11 ದಿನಗಳೇ ಕಳೆದಿವೆ. ಕಳೆದ ಈ 11 ದಿನಗಳಲ್ಲಿ ಕೇವಲ 25 ಲಕ್ಷ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ಲಸಿಕೆ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಭಾರತದಲ್ಲಿ ಮೇ 1ರಿಂದಲೇ ಎಲ್ಲ ವಯಸ್ಕರಿಗೆ ಲಸಿಕೆ ನೀಡಲು ಅನುಮೋದಿಸಿದರೂ ಕೆಲವು ರಾಜ್ಯಗಳಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಆರಂಭಿಸಿಲ್ಲ. ಕೇರಳದಲ್ಲಿ ಇದುವರೆಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುವ ಅಭಿಯಾನವನ್ನು ಆರಂಭಿಸಿಯೇ ಇಲ್ಲ.

ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ

ಕೊರೊನಾವೈರಸ್ ಸೋಂಕಿನಿಂದ ನಲುಗಿರುವ ಮಹಾರಾಷ್ಟ್ರದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಆರಂಭಿಸಲಾಗಿದೆ. ಆದರೆ 18 ರಿಂದ 44 ವರ್ಷದವರಿಗೆ ಸೀಮಿತ ಸಂಖ್ಯೆಯಲ್ಲಿ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಮೇ 9ರ ವೇಳೆಗೆ ಕೇವಲ 4.4 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

India: Only 25 Lakh People Between 18-44 Age Get Vaccine In Last 11 Days

18-44 ವರ್ಷದವರಿಗೆ ಕೊರೊನಾ ಲಸಿಕೆ ಕೊರತೆ

ದೇಶದಲ್ಲಿ 18 ರಿಂದ 44 ವರ್ಷದವರಿಗೆ ಕೊರೊನಾವೈರಸ್ ಮೊದಲ ಡೋಸ್ ಲಸಿಕೆ ನೀಡಲು ಕೊರತೆ ಅಡ್ಡಿಯಾಗಿದೆ. ಇದರ ಮಧ್ಯೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ವಯಸ್ಕರಿಗೆ ಲಸಿಕೆ ವಿತರಣೆಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ.

ಗುಜರಾತಿನಲ್ಲಿ ಕೊವಿಡ್-19 ಲಸಿಕೆ:

ಗುಜರಾತಿನ 7 ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಯಸ್ಕರಿಗೆ ಕೊರೊನಾವೈರಸ್ ಲಸಿಕೆ ವಿತರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಹ್ಮದಾಬಾದ್, ಸೂರತ್, ವಡೋದರ, ರಾಜಕೋಟ್, ಭಾವನಗರ್, ಜಾಮನಗರ್ ಮತ್ತು ಗಾಂಧಿನಗರದಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡಲು ಒತ್ತು ಕೊಡಲಾಗುತ್ತಿದೆ. ರಾಜಸ್ಥಾನದ 33 ಜಿಲ್ಲೆಗಳ ಪೈಕಿ ಮೊದಲ ಹಂತದಲ್ಲಿ 16 ಜಿಲ್ಲೆಗಳಲ್ಲಿ ಮಾತ್ರ ಲಸಿಕೆ ವಿತರಣೆ ಆರಂಭಿಸಲಾಗಿತ್ತು. ಮೊದಲ ಏಳು ದಿನಗಳವರೆಗೂ ಲಸಿಕೆ ವಿತರಣೆ ಆರಂಭಿಸಿರಲಿಲ್ಲ. ಮೇ 8ರಿಂದ ಲಸಿಕೆ ವಿತರಣೆ ಆರಂಭಿಸಲಾಗಿದ್ದು, ಕಳೆದ 10 ದಿನಗಳಲ್ಲಿ 4.2 ಲಕ್ಷ ಜನರಿಗೆ ಲಸಿಕೆ ವಿತರಿಸಲಾಗಿದೆ.

English summary
India: Only 25 Lakh People Between 18-44 Age Get Vaccine In Last 11 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X